Sunday, May 5, 2024

ಪುತ್ತೂರು ಮಹಾಲಿಂಗೇಶ್ವರ ದೇಗುಲದ ವಠಾರದಲ್ಲಿದ್ದ ಹೋರಿ ಅಣ್ಣು ನಾಪತ್ತೆ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿರುತ್ತಿದ್ದ “ಅಣ್ಣು’ ಹೆಸರಿನ ಹೋರಿ ಎ. 30ರಿಂದ ನಾಪತ್ತೆಯಾಗಿದೆ.

ಕರುವಾಗಿದ್ದ ಸಂದರ್ಭ ದೇವಸ್ಥಾನದ ಸಮೀಪ ಯಾರೋ ಬಿಟ್ಟು ಹೋಗಿದ್ದು, ಬಳಿಕ ಭಕ್ತರು ನೀಡುತ್ತಿದ್ದ ಬಾಳೆ ಹಣ್ಣು ಇತ್ಯಾದಿ ತಿನ್ನುತ್ತಾ ಪರಿಸರದಲ್ಲಿ ತಿರುಗಾಡುತ್ತಿತ್ತು. ಸಾಧು ಸ್ವಭಾವದಿಂದ ಭಕ್ತರ ಪ್ರೀತಿಗೆ ಪಾತ್ರವಾಗಿತ್ತು.

 

More from the blog

ಹೃದಯಾಘಾತದಿಂದ ಯುವಕ ಸಾವು

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕನೋರ್ವ ಮೃತಪಟ್ಟ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.. ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೇಸ್ತ್ರಿ ಕೆಲಸಕ್ಕೆ ಹೋಗುತ್ತಿದ್ದ ಅವರು ಕೆಲಸಕ್ಕೆ ರಜೆ...

ಧರೆಗೆ ಉರುಳಿದ ಮಾವಿನ ಮರ : ಮಾವಿನ ಕಾಯಿಗೆ ಮುಗಿ ಬಿದ್ದ ಜನ

ಪುತ್ತೂರು: ಪುತ್ತೂರು ಬೊಳುವಾರು ಬಸ್‌ ಪ್ರಯಾಣಿಕರ ತಂಗುದಾಣದ ಪಕ್ಕದಲ್ಲಿದ್ದ ಭಾರೀ ಗಾತ್ರದ ಮಾವಿನ ಮರವೊಂದು ಧರಶಾಯಿಯಾಗಿದ್ದು, ಬಿದ್ದ ಮರದಲ್ಲಿದ್ದ ಮಾವಿನ ಕಾಯಿಗಳನ್ನು ಕೊಯ್ಯಲು ಜನ ಮುಗಿ ಬಿದ್ದ ಘಟನೆ ನಡೆಯಿತು. ಸದಾ ಜನರ ಸಂಪರ್ಕದಲ್ಲಿರುವ...

ಲೋಕಸಭಾ ಚುನಾವಣೆ, ಬಂಟ್ವಾಳದಲ್ಲಿ ಶೇ.79.9 ಮತದಾನ

ಬಂಟ್ವಾಳ ವಿಧಾನ ಸಭಾ ಕ್ಷೇತ್ರದದಲ್ಲಿ ಶಾಂತಿಯುತವಾಗಿ ಮತದಾನ ನಡೆದಿದ್ದು, ಅಂದಾಜು ಶೇ.79.9 ಮತದಾನವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಅಂದಾಜು ಶೇ.77.44 ರಷ್ಟು ಮತದಾನವಾಗಿದೆ. ಬಿಸಿಲನ್ನು ಲೆಕ್ಕಿಸದೆ, ಸೆಕೆಯ ನಡುವೆಯೂ ಮತದಾರರು ತನ್ನ ಜವಾಬ್ದಾರಿಯನ್ನು...

ಕೈ ಕೊಟ್ಟ ಮತಯಂತ್ರ…,ನಾಯಿಲದಲ್ಲಿ ಅರ್ಧ ತಾಸುಗಳ ಕಾಲ ತಡವಾಗಿ ಆರಂಭವಾದ ಮತದಾನ ..

ಮತದಾನದ ಯಂತ್ರದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ನರಿಕೊಂಬು ಗ್ರಾಮದ ನಾಯಿಲ ಎಂಬಲ್ಲಿ 35 ನಿಮಿಷ ತಡವಾಗಿ ಮತದಾನ ಆರಂಭವಾಗಿದೆ. ನಾಯಿಲ ಬೂತ್ ಸಂಖ್ಯೆ 115 ರಲ್ಲಿ ಸುಮಾರು 35 ಗಳ ಕಾಲ ತಡವಾಗಿ...