ಬಂಟ್ವಾಳ ವಿಧಾನ ಸಭಾ ಕ್ಷೇತ್ರದದಲ್ಲಿ ಶಾಂತಿಯುತವಾಗಿ ಮತದಾನ ನಡೆದಿದ್ದು, ಅಂದಾಜು ಶೇ.79.9 ಮತದಾನವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಅಂದಾಜು ಶೇ.77.44 ರಷ್ಟು ಮತದಾನವಾಗಿದೆ.
ಬಿಸಿಲನ್ನು ಲೆಕ್ಕಿಸದೆ, ಸೆಕೆಯ ನಡುವೆಯೂ ಮತದಾರರು ತನ್ನ ಜವಾಬ್ದಾರಿಯನ್ನು ಅತ್ಯಂತ ಪ್ರಮಾಣಿಕವಾಗಿ ಬೂತ್ ಗೆ ತೆರಳಿ ಸರತಿ ಸಾಲಿನಲ್ಲಿ ನಿಂತುಕೊಂಡು ನಿಭಾಯಿಸಿದ್ದಾರೆ.
ಕೆಲವೊಂದು ಮತಗಟ್ಟೆಯಲ್ಲಿ ಮತಯಂತ್ರದಲ್ಲಿ ತಾಂತ್ರಿಕದೋಷಗಳು ಕಂಡುಬಂದಿದೆ ಬಿಟ್ಟರೆ ಉಳಿದಂತೆ ಯಾವ ಗೊಂದಲಗಳಿಲ್ಲದೆ ಅತ್ಯಂತ ಶಾಂತ ರೀತಿಯ ಮತದಾನವಾಗಿದೆ.
ಕ್ಷೇತ್ರದಲ್ಲಿ ಚುನಾವಣೆಯ ಕಾವು ಮತದಾನದ ದಿನವಾದ ಇಂದು ಕೂಡ ಕಂಡುಬಂದಿಲ್ಲವಾದರೂ ಮತದಾರರು ಸೈಲೆಂಟ್ ಆಗಿ ಮತಗಟ್ಟೆಗೆ ತೆರಳಿ ಮತದಾನ ಮಾಡಿರುವುದು ಖುಷಿಯ ವಿಚಾರವಾಗಿದೆ.
ಅತ್ಯಂತ ಯಶಸ್ವಿಯಾಗಿ ಮತದಾನ ನಡೆಯಲು ತಾಲೂಕಿನ ಅಧಿಕಾರಿಗಳ ಶ್ರಮ ಕೂಡ ಇದೆ. ಕಾನೂನು ಸುವ್ಯವಸ್ಥೆಯಲ್ಲಿ ಲೋಪವಾಗದಂತೆ ಪೋಲೀಸ್ ಇಲಾಖೆ ಜವಾಬ್ದಾರಿಯನ್ನು ಮಾಡಿದೆ. ಒಟ್ಟಾರೆಯಾಗಿ ಲೋಕಸಭಾ ಚುನಾವಣೆ ಅತ್ಯಂತ ಉತ್ತಮ ರೀತಿಯಲ್ಲಿ ನಡೆದಿದೆ.