Saturday, May 4, 2024

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್​ ಬೆದರಿಕೆ

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಫೋಟಿಸುವುದಾಗಿ ಬೆದರಿಕೆಯ ಇಮೇಲ್ ಬಂದಿರುವುದಾಗಿ ವರದಿಯಾಗಿದೆ.

ಬೆದರಿಕೆ ಹಿನ್ನೆಲೆಯಲ್ಲಿ ಪೊಲೀಸರು ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಬಿಗಿಗೊಳಿಸಿದ್ದಾರೆ.

ಮೂಲಗಳ ಪ್ರಕಾರ, ಏಪ್ರಿಲ್ 29 ರಂದು ಇಮೇಲ್ ಸ್ವೀಕರಿಸಲಾಗಿದೆ. ಬಂದಿರುವ ಬೆದರಿಕೆಯ ಬಗ್ಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಪೊಲೀಸ್ ದೂರು ದಾಖಲಿಸಿದ್ದಾರೆ.

ವಿಮಾನ ನಿಲ್ದಾಣದ ಮೂರು ಸ್ಥಳಗಳಲ್ಲಿ ಸ್ಫೋಟಕ ಸಾಧನಗಳನ್ನು ಇರಿಸಲಾಗಿದೆ ಎಂದು ಇಮೇಲ್ ಉಲ್ಲೇಖಿಸಿದೆ ಎಂದು ಮೂಲಗಳು ತಿಳಿಸಿವೆ.

ಇಮೇಲ್‌ನ ಮೂಲದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

More from the blog

ತೋಟದ ಕೆರೆಗೆ ಬಿದ್ದು ಮಗು ಸಾವು

ಬೆಳ್ತಂಗಡಿ: ತಾಯಿಯ ಜತೆ ನಿತ್ಯವೂ ಮನೆಯ ತೋಟದ ಕೆರೆಯ ಬಳಿಗೆ ಹೋಗುತ್ತಿದ್ದ ಒಂದು ವರ್ಷ ಒಂಭತ್ತು ತಿಂಗಳ ಗಂಡು ಮಗುವೊಂದು ತಾಯಿಗೆ ಅರಿವಿಲ್ಲದೆ ಕೆರೆಯ ಬಳಿ ಹೋಗಿದ್ದು, ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವನ್ನಪ್ಪಿದ...

ವೇಷ ಕಳಚುವ ವೇಳೆ ಹೃದಯಾಘಾತ… ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ನಿಧನ

ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದಲ್ಲಿ ಸುಧೀರ್ಘ ಕಾಲ ಸೇವೆ ಸಲ್ಲಿಸಿದ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮೇ. 1(ಬುಧವಾರ) ದಂದು ಕೋಟದಲ್ಲಿ ನಡೆಯುತ್ತಿದ್ದ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ...

ಪ್ರಯಾಣಿಕರ ಗಮನಕ್ಕೆ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ..ಯಾವಾಗ, ಏನು..? ಇಲ್ಲಿದೆ ವಿವರ

ಮಂಗಳೂರು: ಮಂಗಳೂರಿನ ನೇತ್ರಾವತಿ ಕ್ಯಾಬಿನ್‌ ಮತ್ತು ಮಂಗಳೂರು ಜಂಕ್ಷನ್‌ ಸ್ಟೇಷನ್‌ ಮಧ್ಯೆ ಹಳಿ ನಿರ್ವಹಣ ಕಾಮಗಾರಿ ಇರುವುದರಿಂದ ಕೆಲವೊಂದು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ನಂ. 16649 ಮಂಗಳೂರು ಸೆಂಟ್ರಲ್‌ ನಾಗರಕೋವಿಲ್‌ ಪರಶುರಾಮ ಎಕ್ಸ್‌ಪ್ರೆಸ್‌ ಮೇ...

ಲೋಕಸಭಾ ಚುನಾವಣೆ: ವಿವಿಧ ತಂಡಗಳಿಗೆ ಕಾರ್ಯಭಾರ

ಮಂಗಳೂರು: 17-ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾ ಮತದಾನ ಪೂರ್ಣಗೊಂಡಿದ್ದು, ಮುಂದಿನ ಅವಧಿಯಲ್ಲಿ ಚುನಾವಣಾ ಪ್ರಕ್ರಿಯೆಗಳಿಗಾಗಿ ನಿಯೋಜಿತಗೊಂಡ ವಿವಿಧ ತಂಡಗಳ ಕಾರ್ಯಭಾರ ಕುರಿತು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ...