Thursday, April 25, 2024

ಮತದಾನದಂದು ಫೋಟೋ ಕ್ಲಿಕ್ಕಿಸಿ.. 25 ಸಾವಿರ ರೂ. ಬಹುಮಾನ ಗೆಲ್ಲಿ

ನಾಳೆ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಇನ್ನು ಮತದಾನದ ಸಂದರ್ಭದಲ್ಲಿ ರಾಜ್ಯ ಚುನಾವಣಾ ಅಯೋಗವು ಛಾಯಾಚಿತ್ರ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.
ನಾಳೆ ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಲಿದ್ದು, ಸುಮಾರು 2,88,19,342 ಮತದಾರರು ಮತದಾನ ಮಾಡಲಿದ್ದಾರೆ. ಅದರಲ್ಲಿ 1,44,28,099 ಪುರುಷರು, 1,43,88,176 ಮಹಿಳೆಯರು ಮತದಾನ ಮಾಡಲಿದ್ದಾರೆ. ಸುಮಾರು 3,067 ತೃತೀಯ ಲಿಂಗಿಗಳು ಮತ ಚಲಾಯಿಸಲಿದ್ದಾರೆ.
ಮತದಾನ ವಿಷಯವಾಗಿ ಈ ಸ್ಪರ್ಧೆಯನ್ನು ಏರ್ಪಡಿಸಿದೆ. ಎಲೆಕ್ಷನ್​ ದಿನ ವಿಶಿಷ್ಟ ಫೋಟೋದಲ್ಲಿ ಸೆರೆಹಿಡಿದರೆ ನಗದು ಬಹುಮಾನ ನೀಡುವುದಾಗಿ ರಾಜ್ಯ ಚುನಾವನಾ ಆಯೋಗ ಘೋಷಿಸಿದೆ.  ಅಷ್ಟು ಮಾತ್ರವಲ್ಲ, ಅತ್ಯುತ್ತಮ ಫೋಟೋ ಕ್ಲಿಕ್ಕಿಸಿದರೆ ಪ್ರಮಾಣ ಪತ್ರದ ಜೊತೆಗೆ ನಗದನ್ನು ನೀಡುವುದಾಗಿ ತಿಳಿಸಿದೆ.
ಫೋಟೋ ಕ್ಲಿಕ್ಕಿಸಿದ ಬಳಿಕ ಛಾಯಾಗ್ರಾಹಕರ ವಿವರಗಳನ್ನು [email protected] ಸಲ್ಲಿಸಬೇಕಿದೆ. ಮೇ 15ರವರೆಗೆ ಫೋಟೋ ಕಳುಹಿಸಲು ಸಮಯವಕಾಶ ನೀಡಲಾಗಿದೆ.
ಅತ್ಯುತ್ತಮ ಫೋಟೋಗೆ ಬಹುಮಾನ ಸಿಗಲಿದೆ. ಅಂದಹಾಗೆಯೇ ಬೆಸ್ಟ್​ ಫೋಟೋ ಕ್ಲಿಕ್ಕಿಸಿದ ವಿಜೇತರಿಗೆ ಪ್ರಥಮ 25 ಸಾವಿರ, ದ್ವಿತೀಯ 15 ಸಾವಿರ ಮತ್ತು ತೃತೀಯ 10 ಸಾವಿರ ಬಹುಮಾನ ಸಿಗಲಿದೆ. ಇದಲ್ಲಿದೆ ಸಮಾಧಾನಕರ ಬಹುಮಾನವಾಗಿ 6 ಸಾವಿರ ರೂಪಾಯಿ ಜೊತೆಗೆ ವಿಶೇಷ ಬಹುಮಾನವಾಗಿ 5 ಸಾವಿರ ರೂಪಾಯಿ ನಗದು ಸಿಗಲಿದೆ.

More from the blog

ಅಡಿಕೆ ಹಾಗೂ ಹಿಂಗಾರ ಕಳ್ಳತನ : ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಕೆಲಸಗಾರರು

ಕಿನ್ನಿಗೋಳಿ: ಅಡಿಕೆ ಹಾಗೂ ಹಿಂಗಾರ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ತೋಟದ ಕೆಲಸಗಾರರು ಹಿಡಿದು ಮುಲ್ಕಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಅಡಿಕೆ ಕಳ್ಳನನ್ನು ಅಂಗಾರ ಗುಡ್ಡೆ ನಿವಾಸಿ ವಿಜಯ ಎಂದು ಗುರುತಿಸಲಾಗಿದೆ. ಇಲ್ಲಿನ ಕೆಂಚನಕೆರೆಯ ಉದ್ಯಮಿ...

ಅಡಿಕೆ ದರ ಏರಿಕೆ : ಚುನಾವಣೆ ಬಳಿಕ ಮತ್ತಷ್ಟು ಏರಿಕೆ..?

ಪುತ್ತೂರು:ಲೋಕಸಭಾ ಚುನಾವಣೆ ಮುಗಿದ ಬಳಿಕ ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆ ಧಾರಣೆ ಏರಿಕೆ ಕಾಣುವ ಸಾಧ್ಯತೆಯನ್ನು ಮಾರುಕಟ್ಟೆ ಮೂಲಗಳು ವ್ಯಕ್ತಪಡಿಸಿರುವುದು ಬೆಳೆಗಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಚುನಾವಣೆ ದಿನಾಂಕ ಘೋಷಣೆಯ ಮೊದಲು ಅಂದರೆ ಫೆಬ್ರವರಿಯಲ್ಲಿ...

ಕೆ.ಎಸ್.ಎಸ್.ಕಾಲೇಜ್: ಅಧ್ಯಯನ ವಿನಿಮಯ ಕಾರ್ಯಕ್ರಮ 

ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯದ ವಾಣಿಜ್ಯಶಾಸ್ತ್ರ ಮತ್ತು ಉದ್ಯಮಾಡಳಿತ ವಿಭಾಗವು ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಆಶ್ರಯದಲ್ಲಿ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದೊಂದಿಗೆ ಮಾಡಿಕೊಂಡ ಎಂ.ಓ.ಯು .ಪ್ರಕಾರ ಅಧ್ಯಯನ ವಿನಿಮಯ ಕಾರ್ಯಕ್ರಮ...

ವಿಟ್ಲದಲ್ಲಿ ಬಿಜೆಪಿಯಿಂದ ರೋಡ್ ಶೋ: ಮತಯಾಚನೆ 

ವಿಟ್ಲ: ದ.ಕ ಜಿಲ್ಲಾ ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಪರ ವಿಟ್ಲದಲ್ಲಿ ಬಿಜೆಪಿಯಿಂದ ರೋಡ್ ಶೋ ನಡೆಯಿತು. ವಿಟ್ಲದ ಜೈನ ಬಸದಿಯಿಂದ ಹೊರಟ ರೋಡ್ ಶೋ ವಿಟ್ಲ ಮುಖ್ಯ ಪೇಟೆಯಲ್ಲಿ ಸಂಚರಿಸಿ,...