Wednesday, April 24, 2024

ಕೆ.ಎಸ್.ಎಸ್.ಕಾಲೇಜ್: ಅಧ್ಯಯನ ವಿನಿಮಯ ಕಾರ್ಯಕ್ರಮ 

ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯದ ವಾಣಿಜ್ಯಶಾಸ್ತ್ರ ಮತ್ತು ಉದ್ಯಮಾಡಳಿತ ವಿಭಾಗವು ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಆಶ್ರಯದಲ್ಲಿ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದೊಂದಿಗೆ ಮಾಡಿಕೊಂಡ ಎಂ.ಓ.ಯು .ಪ್ರಕಾರ ಅಧ್ಯಯನ ವಿನಿಮಯ ಕಾರ್ಯಕ್ರಮ ಮಹಾವಿದ್ಯಾಲಯದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯ ಕಲ್ಲಡ್ಕ ಇಲ್ಲಿನ 10 ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಂದ ವಿವಿಧ ವಿಷಯಗಳಾದ ನಾಯಕತ್ವ ಕಲೆ, ಸಂವಹನ ಕಲೆ, ಸೃಜನಶೀಲತೆ ಮತ್ತು ಸಮಯ ನಿರ್ವಹಣೆ ಬಗ್ಗೆ ತಮ್ಮ ವಿಚಾರಗಳನ್ನು ಮಂಡಿಸಿದರು. ಕಾರ್ಯಕ್ರಮದಲ್ಲಿ ಪ್ರಭಾರ ಪ್ರಾಂಶುಪಾಲರದ ಡಾ. ದಿನೇಶ.ಕೆ,ಐಕ್ಯೂಎಸಿ ಸಂಯೋಜಕರಾದ ಲತಾ ಬಿಟಿ ಕಾರ್ಯಕ್ರಮದ ಸಂಯೋಜಕರಾದ ಶಿವಪ್ರಸಾದ್ ಎಸ್ ಹಾಗೂ ಶ್ರೀರಾಮ ಪದವಿ ಮಹಾವಿದ್ಯಾಲಯದ ಉಪನ್ಯಾಸಕರಾದ ಹರ್ಷಿತ್ ಕುಮಾರ್ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಕೌಶಿಕ್ ಉಪಸ್ಥಿತರಿದ್ದರು

ಶ್ರೀರಾಮ ಪದವಿ ಮಹಾವಿದ್ಯಾಲಯ ಕಲ್ಲಡ್ಕ ಇಲ್ಲಿನ ವಿದ್ಯಾರ್ಥಿಗಳಾದ ನಾಮದೇವ್ ಭೂಮಿಕ, ಪ್ರತಿಕ್ಷಾ ಕೆ , ಪ್ರತಿಕ್ಷಾ ನಿಶ್ವಿತಾ ಪಲ್ಲವಿ ಲಕ್ಷಮಿತಾ,ಪೂರ್ಣಿಮಾ ವಿಸ್ಮಿತ ಪುನೀತ, ಕಾರ್ಯಕ್ರಮ ಸಂಯೋಜಕರಾದ ಶಿವಪ್ರಸಾದ್ ಎಸ್ ಸ್ವಾಗತಿಸಿ ವಿದ್ಯಾರ್ಥಿ ಕೌಶಿಕ್ ಧನ್ಯವಾದಗೈದರು. ಕುಮಾರಿ ಭಾರತಿ ಕಾರ್ಯಕ್ರಮ ನಿರೂಪಿಸಿದರು. ಎರಡು ಮಹಾವಿದ್ಯಾಲಯದ ನಡುವೆ ಕಳೆದ ಅಕ್ಟೋಬರ್ ತಿಂಗಳಲ್ಲಿ ಎಂ ಓ ಯು ಒಡಂಬಡಿಕೆ ನಡೆದಿತ್ತು

More from the blog

ವಿಟ್ಲದಲ್ಲಿ ಬಿಜೆಪಿಯಿಂದ ರೋಡ್ ಶೋ: ಮತಯಾಚನೆ 

ವಿಟ್ಲ: ದ.ಕ ಜಿಲ್ಲಾ ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಪರ ವಿಟ್ಲದಲ್ಲಿ ಬಿಜೆಪಿಯಿಂದ ರೋಡ್ ಶೋ ನಡೆಯಿತು. ವಿಟ್ಲದ ಜೈನ ಬಸದಿಯಿಂದ ಹೊರಟ ರೋಡ್ ಶೋ ವಿಟ್ಲ ಮುಖ್ಯ ಪೇಟೆಯಲ್ಲಿ ಸಂಚರಿಸಿ,...

ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ನ ಹಿಂದುಳಿದ ವರ್ಗಗಳ ಘಟಕದ ಸಭೆ

ಬಂಟ್ವಾಳ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಬಂಟ್ವಾಳ ಮತ್ಗು ಪಾಣೆಮಂಗಳೂರು ಬ್ಲಾಕ್ ನ ಹಿಂದುಳಿದ ವರ್ಗಗಳ ಘಟಕದ ಸಭೆ ಬಿಸಿರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಿತು. ಹಿಂದುಳಿದ...

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಹನುಮೋತ್ಸವ ಶ್ರೀಮದ್ರಾಮಾಯಣ ಮಹಾಯಜ್ಞ

ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಮಂಗಳವಾರ ಶ್ರೀ ಹನುಮೋತ್ಸವದ ಅಂಗವಾಗಿ ಭಗವನ್ನಾಮಸಂಕೀರ್ತನೆ ಮಂಗಲ, ಶ್ರೀಮದ್ರಾಮಾಯಣ ಮಹಾಯಜ್ಞದ ಸಂದರ್ಭದಲ್ಲಿ ದತ್ತಪ್ರಕಾಶ ಪತ್ರಿಕೆಯ 25ನೇ ವರ್ಷದ ಪ್ರಥಮ ಸಂಚಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ಶ್ರೀ ಸಂಸ್ಥಾನದ...

ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ: 690 ಕೋಟಿ ರೂ.ಗಳ ವ್ಯವಹಾರ 2.97 ಕೋ. ರೂ. ನಿವ್ವಳ ಲಾಭ

ವಿಟ್ಲ: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ 2023-24ನೇ ಸಾಲಿನಲ್ಲಿ 690 ಕೋಟಿ ರೂ.ಗಳ ವ್ಯವಹಾರ ನಡೆಸಿ, ಹೊಸ ದಾಖಲೆ ನಿರ್ಮಿಸಿದೆ. ಬ್ಯಾಂಕ್ 2.97 ಕೋಟಿ ರೂ. ನಿವ್ವಳ ಲಾಭ ಗಳಿಸಿ, ಕಳೆದ...