ಬೆಂಗಳೂರು: ನಾಳೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆ ಮತದಾನಕ್ಕೆ ಚುನಾವಣಾ ಆಯೋಗದಿಂದ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಾಗಾಗಿ ಚುನಾವಣಾ ಕಾರ್ಯಕ್ಕೆ ಬಸ್ ಬಳಕೆಯಾಗುವುದರಿಂದ ಇಂದು, ನಾಳೆ ಸರ್ಕಾರಿ ಸಾರಿಗೆ, ಖಾಸಗಿ ಬಸ್ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ ಇದೆ.
ಚುನಾವಣೆ ಕೆಲಸಕ್ಕೆ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಖಾಸಗಿ ಬಸ್ಗಳ ಬಳಕೆ ಮಾಡಲಾಗುತ್ತಿದೆ. 2,100 ಕೆಎಸ್ಆರ್ಟಿಸಿ, 1,700 ಬಿಎಂಟಿಸಿ ಬಸ್ಗಳನ್ನು ಆಯೋಗ ಬಳಕೆ ಮಾಡಿಕೊಂಡಿದೆ. ಹೀಗಾಗಿ ಎರಡು ದಿನ ಸರ್ಕಾರಿ ಬಸ್ಗಳ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ ಇದೆ.