Monday, April 8, 2024

ಇಂದು ಸಂಪೂರ್ಣ ಸೂರ್ಯಗ್ರಹಣ : ಈ ರಾಶಿಯವರಿಗೆ ಕಾದಿದೆ ಆಪತ್ತು

ವರ್ಷದ ಮೊದಲ ಸೂರ್ಯಗ್ರಹಣ ಇಂದು ಸಂಭವಿಸುತ್ತಿದೆ. ಸುಮಾರು 54 ವರ್ಷಗಳ ಬಳಿಕ ಸಂಭವಿಸುತ್ತಿರುವ ಸುದೀರ್ಘ ಸೂರ್ಯಗ್ರಹಣ ಇದಾಗಿದ್ದು, ಮಾಹಿತಿಗಳ ಪ್ರಕಾರ ಏಪ್ರಿಲ್ 8 ರಂದು ಸೂರ್ಯಗ್ರಹಣ ರಾತ್ರಿ 9.12 ರಿಂದ 1.25 ರವರೆಗೆ ಇರುತ್ತದೆ. ಈ ಸಂಪೂರ್ಣ ಸೂರ್ಯಗ್ರಹಣ ಉತ್ತರ ಅಮೆರಿಕದಾದ್ಯಂತ ಸಂಭವಿಸಲಿದೆ. ಇದು ಭಾರತದಲ್ಲಿ ಸಂಭವಿಸುವುದಿಲ್ಲ. ಹಾಗಾಗಿ ಸೂತಕ ಅವಧಿ ಇರುವುದಿಲ್ಲ.

ಗ್ರಹಗಳ ಸ್ಥಾನ

ಹಿಂದೂ ಕ್ಯಾಲೆಂಡರ್​ ಮತ್ತು ಜ್ಯೋತಿಷಿಗಳ ಪ್ರಕಾರ, ಭಾರತದಲ್ಲಿ ಸಂಪೂರ್ಣ ಸೂರ್ಯಗ್ರಹಣ ಗೋಚರವಾಗದಿದ್ದರೂ ಕೆಲ ರಾಶಿಯವರ ಬದುಕಲ್ಲಿ ಏರಿಳಿತಗಳು ಆಗುತ್ತದೆ ಎಂದು ಹೇಳುತ್ತಾರೆ. ಸಂಪೂರ್ಣ ಸೂರ್ಯ ಗ್ರಹಣವು ಚೈತ್ರ ಅಮಾವಾಸ್ಯೆ ದಿನದಂದು ನಡೆಯುತ್ತಿದ್ದು. ಮೀನ ಮತ್ತು ರೇವತಿ ರಾಶಿಯಲ್ಲಿ ಸಂಭವಿಸಲಿದೆ. ಗ್ರಹಣದಲ್ಲಿ ಸೂರ್ಯ, ಚಂದ್ರ ಮತ್ತು ಶುಕ್ರನ ಸಂಯೋಗ ಇರುತ್ತದೆ. ರಾಹು ಮತ್ತು ಕೇತುಗಳ ಅಕ್ಷವು ಕನ್ಯಾ ರಾಶಿಯಲ್ಲಿ ಪ್ರಭಾವಶಾಲಿಯಾಗಲಿದೆ. ಜೊತೆಗೆ ಸೂರ್ಯ, ಮಂಗಳ ಮತ್ತು ಕೇತುಗಳ ಪ್ರಭಾವ ಹೆಚ್ಚಿರಲಿದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಹಾಗಿದ್ದರೆ ಜ್ಯೋತಿಷ್ಯದ ಪ್ರಕಾರ, ಯಾವೆಲ್ಲ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ ಅನ್ನೋ ವಿವರ ಇಲ್ಲಿದೆ.

ಸಿಂಹ ರಾಶಿ: ಸೂರ್ಯ ಗ್ರಹಣದ ಕಾರಣದಿಂದ ಮೇಷ ರಾಶಿಯವರು ಸಮಸ್ಯೆಗಳನ್ನ ಅನುಭವಿಸುತ್ತಾರೆ. ಮುಖ್ಯವಾಗಿ ನಿಮ್ಮ ವಿರುದ್ಧ ಪಿತೂರಿ ಮಾಡಲು ಪ್ರಯತ್ನಿಸುವುದರಿಂದ ನಿಮ್ಮ ಎಲ್ಲಾ ಶತ್ರುಗಳು ತೊಂದರೆಯನ್ನು ಎದುರಿಸಬಹುದು ಮತ್ತು ವೈಫಲ್ಯವನ್ನು ಎದುರಿಸಬೇಕಾಗುತ್ತದೆ. ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳು ನಿಮ್ಮ ವಿರುದ್ಧ ತಿರುಗಿ ಬೀಳಬಹುದು. ಅಲ್ಲದೇ, ಸಮಾಜದಲ್ಲಿ ನೀವು ಗೌರವವನ್ನ ಕಳೆದುಕೊಳ್ಳಹುದು. ನಿಮ್ಮ ಆರೋಗ್ಯ, ಆರ್ಥಿಕ ಮತ್ತು ವೈವಾಹಿಕ ಸ್ಥಿತಿ ಹದಗೆಡುತ್ತದೆ.

ಕನ್ಯಾ ರಾಶಿ: ನಿಮ್ಮ ವೃತ್ತಿ ಮತ್ತು ಕುಟುಂಬಕ್ಕೆ ಸಂಬಂಧಿಸಿದ ನಿಮ್ಮ ಎಲ್ಲಾ ಚಿಂತೆಗಳು ಈ ಗ್ರಹಣದ ಕಾರಣದಿಂದ ಹೆಚ್ಚಾಗುತ್ತದೆ. ಮುಖ್ಯವಾಗಿ ನೀವು ಹಣಕಾಸಿನ ವಿಚಾರದಲ್ಲಿ ನಷ್ಟವನ್ನ ಎದುರಿಸುವ ಸಾಧ್ಯತೆ ಇದೆ. ಹಾಗಾಗಿ ಈ ಸಮಯದಲ್ಲಿ ನೀವು ಯಾವುದೇ ಹೂಡಿಕೆ ಮಾಡದಿದ್ದರೆ ಬಹಳ ಉತ್ತಮ. ಇದರಿಂದ ನಿಮಗೆ ಮುಂದಿನ ದಿನಗಳಲ್ಲಿ ಸಮಸ್ಯೆ ಆಗುತ್ತದೆ. ಇನ್ನು ನಿಮ್ಮ ಆರೋಗ್ಯ ಸಹ ಈ ಸಮಯದಲ್ಲಿ ಕೈ ಕೊಡುವ ಸಾಧ್ಯತೆ ಇದೆ.

ತುಲಾ ರಾಶಿ: ನಿಮ್ಮ ಕುಟುಂಬದಲ್ಲಿ ಸಣ್ಣ ಸಣ್ಣ ವಿಚಾರಕ್ಕೆ ಜಗಳ ಆಗುತ್ತದೆ. ಅಲ್ಲದೇ, ನೀವು ಈ ಸಮಯದಲ್ಲಿ ಮನಸ್ತಾಪಗಳನ್ನ ಎದುರಿಸಬೇಕಾಗುತ್ತದೆ. ನೀವು ಸಂಬಂಧಗಳನ್ನ ಸುಧಾರಿಸಲು ಅದೆಷ್ಟೇ ಪ್ರಯತ್ನಪಟ್ಟರೂ ಸಹ ಆಗುವುದಿಲ್ಲ.

ವೃಶ್ಚಿಕ ರಾಶಿ: ನಿಮ್ಮ ವೃತ್ತಿಜೀವನದಲ್ಲಿ ನೀವು ಯಾವುದೇ ಅಡಚಣೆಯನ್ನು ಎದುರಿಸುವ ಸಾಧ್ಯತೆ ಇದೆ. ಆರ್ಥಿಕ ಲಾಭ ಪಡೆಯಲು ನೀವು ಬಹಳ ಪರದಾಡಬೇಕಾಗುತ್ತದೆ. ಹಣದ ವಿಚಾರದಲ್ಲಿ ನೀವು ಯಾರನ್ನೂ ನಂಬದಿರುವುದು ಬಹಳ ಉತ್ತಮ ಎನ್ನಲಾಗುತ್ತದೆ. ಒಂದರ ನಂತರ ಒಂದು ಸಮಸ್ಯೆಗಳು ನಿಮ್ಮನ್ನ ಹುಡುಕಿಕೊಂಡು ಬರುವ ಸಾಧ್ಯತೆ ಇದೆ. ಇದರಿಂದ ನಿಮಗೆ ಆರೋಗ್ಯ ಸಮಸ್ಯೆಗಳು ಸಹ ಬರುವ ಸಾಧ್ಯತೆ ಇದೆ.

ಮೀನ ರಾಶಿ: ನಿಮ್ಮ ಕೆಲಸ ಅಥವಾ ವ್ಯವಹಾರದಲ್ಲಿ ನಿಮ್ಮ ಯಶಸ್ಸಿನಿಂದ ಶತ್ರುಗಳ ಕಾಟ ಜಾಸ್ತಿ ಆಗುತ್ತದೆ. ಅವರು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ ಇದೆ. ಆದಾಯ ಹೆಚ್ಚಿಸಲು ಹೋಗಿ ನೀವು ತೊಂದರೆಗೆ ಸಿಲುಕುವ ಸಾಧ್ಯತೆ ಇದೆ.

 

More from the blog

ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌ : ವಾರಾಂತ್ಯದಲ್ಲಿ ಚಿನ್ನದ ದರ ತುಸು ಇಳಿಕೆ…

ಬೆಂಗಳೂರು: ಚಿನ್ನದ ದರದಲ್ಲಿ ಮತ್ತೆ ಹಾವು ಏಣಿಯಾಟ ಶುರುವಾಗಿದೆ. ಕಳೆದೆರಡು ದಿನಗಳಿಂದ ನಿರಂತರ ಏರಿಕೆ ಕಂಡಿದ್ದ ಬಂಗಾರದ ಬೆಲೆ ಇದೀಗ ಇಳಿಕೆಯಾಗಿದೆ. ನಿನ್ನೆಯ ದರಕ್ಕೆ ಹೋಲಿಸಿದರೆ 10ಗ್ರಾಂ ಚಿನ್ನದ ಮೇಲೆ 450 ರೂ...

ನೀತಿ ಸಂಹಿತೆ ಇರುವಾಗ ಆಶ್ಲೇಷ ಬಲಿ ಮಂಟಪ ಕಾಮಗಾರಿ ಆರಂಭ ಸಮರ್ಪಕವಲ್ಲ- ಹರೀಶ್ ಇಂಜಾಡಿ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಹಿಂದಿನ ಆಡಳಿತ ಮಂಡಳಿಯ ಕೊನೇ ದಿನಗಳಲ್ಲಿ ದಾನಿಗಳು ಕ್ಷೇತ್ರದಲ್ಲಿ ಆಶ್ಲೇಷ ಬಲಿ ಮಂಟಪ ನಿರ್ಮಿಸಲು ಮುಂದೆ ಬಂದರು. ಇದು ಸ್ವಾಗತಾರ್ಹ ಬೆಳವಣಿಗೆ. ಆದರೆ...

ಪ್ರಧಾನಿ ಮೋದಿ ಕರೆ : ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ  ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ “ಮೆಹಂದಿ ಅಭಿಯಾನ" ನಡೆಸುವಂತೆ ಸೂಚನೆ ನೀಡಿದ್ದಾರೆ. ಜತೆಗೆ ಮೋದಿ...

ದಿನದಿಂದ ದಿನಕ್ಕೆ ಏರುತ್ತಿದೆ ತಾಪಮಾನ : ಕಡಬ, ಅಜೆಕಾರಿನಲ್ಲಿ ದಾಖಲೆಯ ಉಷ್ಣಾಂಶ

ಮಂಗಳೂರು: ಮುಂದಿನ ಎರಡು ದಿನಗಳ ಕಾಲ ಬಿಸಿಲಿನ ಶಾಕ ಮತ್ತಷ್ಟು ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ ಕರಾವಳಿ ಭಾಗದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಎ. 4ರಿಂದ 5ರ...