Wednesday, April 10, 2024

ನೋಟ ಮತದಾನ ಅಭಿಯಾನ ಮಾಡುವವರ ವಿರುದ್ಧ ಕಾನೂನು ಕ್ರಮಕ್ಕೆ ತಾ.ಪಂ.ಸದಸ್ಯ ಪ್ರಭಾಕರ್ ಪ್ರಭು ಒತ್ತಾಯ…

ನೋಟ (NOTA) ಮತದಾನ ಅಭಿಯಾನ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಾಜಿ ತಾ.ಪಂ‌.ಸದಸ್ಯ ಪ್ರಭಾಕರ್ ಪ್ರಭು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲವೊಂದು ವ್ಯಕ್ತಿಗಳು ಮತ್ತು ಸಂಘಟನೆಗಳು ನೋಟ ಮತದಾನ ಅಭಿಯಾನ ಎಂಬ ಹೆಸರಿನಲ್ಲಿ ಕರಾವಳಿಯ ಬುದ್ಧಿವಂತ ಪ್ರಬುದ್ಧ ಮತದಾರರನ್ನು ದಾರಿ ತಪ್ಪಿಸಿ ಮತದಾನದ ಹಕ್ಕನ್ನು ಕಸಿಯುವ ಹುನ್ನಾರ ನಡೆಸುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬರುತ್ತಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಜಿಜ್ಞಾಸೆ ಮೂಡಿಬರುತ್ತಿದ್ದು, ನೋಟ ಮತದಾನ ಬಗ್ಗೆಗಿನ ವ್ಯಾಖ್ಯಾನ ಕುರಿತು ನಿರ್ಧಿಷ್ಟ ಕಾನೂನು ಮಾಹಿತಿ ಇಲ್ಲದೆ ತಮ್ಮೊಳಗೆ ಚರ್ಚೆ ಮಾಡುತ್ತಿರುವುದಾಗಿದೆ.

ಪ್ರತಿಯೊಂದು ಚುನಾವಣೆಗೆ ಸಂಬಂಧಿಸಿದ ನಾಮಪತ್ರ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳ ನಾಮಪತ್ರಗಳನ್ನು ಸಂಬಂದಪಟ್ಟ ಚುನಾವಣಾಧಿಕಾರಿಗಳು ಪರಿಶೀಲನೆ ಮಾಡಿದ ನಂತರ ಸಂವಿಧಾನ ಬದ್ದವಾಗಿ ಎಲ್ಲಾ ರೀತಿಯಲ್ಲಿ ಅರ್ಹತೆ ಇರುವುದನ್ನು ಖಾತರಿಪಡಿಸಿಕೊಂಡು ನಾಮಪತ್ರಗಳನ್ನು ಆಯಾ ಚುನಾವಣಾಧಿಕಾರಿಗಳು ಅಂಗೀಕಾರ ಮಾಡಿ ಅರ್ಹತೆ ಇಲ್ಲದಿದ್ದರೆ ತಿರಸ್ಕಾರ ಮಾಡುವುದು ಚುನಾವಣೆಯ ನಿಯಾಮವಳಿಯಾಗಿರುತ್ತದೆ.

ಹೀಗೆ ಅಂತಿಮವಾಗಿ ಕಣದಲ್ಲಿರುವ ಯಾವುದೇ ಅಭ್ಯರ್ಥಿಗಳಿಗೆ ಮತವನ್ನು ನೀಡಲು ಮತದಾರನಿಗೆ ಇಚ್ಚೆ ಇಲ್ಲದಿದ್ದಲ್ಲಿ ಆ ಮತದಾರ “ನೋಟ” ಎನ್ನುವ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಇದಕ್ಕಾಗಿಯೇ ನೋಟ ಅವಕಾಶವನ್ನು ಎಲ್ಲಾ ಅಭ್ಯರ್ಥಿಗಳ ನಂತರದ ಸ್ಥಾನದಲ್ಲಿ ಇರಿಸಲಾಗಿದೆ. ಹಾಗಾಗಿ ಯಾರೂ ಕೂಡ ನೋಟವನ್ನು ಬಳಸುವಂತೆ ಹೇಳಿಕೆ, ಪ್ರಚೋದನೆ , ಒತ್ತಡ, ಒತ್ತಾಯ ಮಾಡುವಂತಿಲ್ಲ .

ನೋಟಕ್ಕೆ ಮತದಾನ ಮಾಡಲು ಪ್ರಚೋದನೆ ಮಾಡುವುದು ದುರುದ್ದೇಶದಿಂದ ಕೂಡಿದ ಪ್ರೇರಣೆಯಾಗಿರುತ್ತದೆ .ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೋಟಕ್ಕೆ ಮತದಾನ ಮಾಡುವಂತೆ ಪ್ರಚೋದನೆ ಮಾಡುವವರು ಕೇವಲ ಒಂದೇ ಒಂದು ವಿಷಯಕ್ಕೆ ಅಂಟಿಕೊಂಡು ಸೀಮಿತ ವಿಷಯಕ್ಕೆ ಸಂಬಂಧಪಟ್ಟಿರುವುದಾಗಿದೆ. ಇಲ್ಲಿ ಮತದಾನ ಮಾಡುವ ಪ್ರಬುದ್ಧ ಮತದಾರ ತನ್ನ ಇಚ್ಚೆಯಂತೆ ಅಭ್ಯರ್ಥಿಯ ಅರ್ಹತೆ ಮತ್ತು ಸಮಗ್ರ ಚಿಂತನೆ ಬಗ್ಗೆ ಪರಿಗಣಿಸಿ ಮತದಾನ ಮಾಡಿರುವುನಾಗಿರುತ್ತಾನೆ

ಈ ವಿಷಯದಲ್ಲಿ ಒಂದಕ್ಕೊಂದು ತಾಳೆಯಾಗದೇ ಇರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಜ್ಙಾವಂತ ಮತದಾರರು ನೋಟವನ್ನು ಮಾನ್ಯ ಮಾಡಬೇಕಾದ ಅವಶ್ಯಕತೆ ಇರುವುದಿಲ್ಲ .

ಒಬ್ಬ ವ್ಯಕ್ತಿಗೆ ಅಥವಾ ಸಂಘಟನೆಗೆ ತಮಗೆ ಸಂಬಂಧಪಟ್ಟ ವಿಷಯದ ನ್ಯಾಯಕ್ಕಾಗಿ ನೋಟ ಮತದಾನಕ್ಕೆ ಪ್ರಚೋದಿಸುವ ಬದಲಿಗೆ ತಮಗೆ ಬೇಕಾದ ಅಭ್ಯರ್ಥಿಯನ್ನು ಚುನಾವಣೆಯ ಕಣಕ್ಕಿಳಿಸಿ ಸ್ಪರ್ಧಿಸುವ ಮೂಲಕ ತಮಗಾದ ಅನ್ಯಾಯದ ಬಗ್ಗೆ ನ್ಯಾಯವನ್ನು ಪಡೆಯುವ ಅವಕಾಶವಿರುತ್ತದೆ. ಈ ರೀತಿಯಲ್ಲಿ ನೋಟಕ್ಕೆ ಪ್ರಚೋದಿಸುವುದರಿಂದ ಭಾರತದ ಪ್ರಜಾ ಪ್ರಭುತ್ವಕ್ಕೆ ಧಕ್ಕೆ ಆಗಲಿದ್ದು, ನೋಟ ಮತದಾನ ಅಭಿಯಾನ ಪರ ವ್ಯಕ್ತಿಗಳು ಪರೋಕ್ಷವಾಗಿ ಯಾವುದೇ ಒಂದು ಪಕ್ಷದ ಪರ ಅಭ್ಯರ್ಥಿಗೆ ಬೆಂಬಲಿಸಿದಂತೆ ಸಾರ್ವಜನಿಕರಲ್ಲಿ ಭಾಸವಾಗುತ್ತಿದ್ದು, ಸಮಾಜವನ್ನು ಮೂರ್ಖರನ್ನಾಗಿ ಮಾಡುವ ಷಡ್ಯಂತ್ರವಾಗಿದೆ.

ಆದುದರಿಂದ ನೋಟಕ್ಕೆ ಮತದಾನ ಮಾಡುವಂತೆ ಮತದಾರರಿಗೆ ಪ್ರಚೋದನೆ ಮಾಡುವುದು ,ಹಾಗೂ ನೋಟ ಅಭಿಯಾನಕ್ಕೆ ಪ್ರಚಾರ ಮಾಡುವ ಅಧಿಕಾರ ಯಾವುದೇ ವ್ಯಕ್ತಿಗೆ ಹಾಗೂ ಯಾವುದೇ ಸಂಘಟನೆಗಳಿಗೆ ಇರುವುದಿಲ್ಲವಾಗಿದೆ. ನೋಟವು ಮತದಾರರ ವೈಯಕ್ತಿಕ ಆಯ್ಕೆಯ ವಿಚಾರವಾಗಿರುತ್ತದೆ. ನ್ಯಾಯಕ್ಕಾಗಿ ಭಾರತದಲ್ಲಿ ಸಂವಿಧಾನ ಬದ್ದವಾದ ನ್ಯಾಯಲಯಗಳಿವೆ ಹೊರತು ನ್ಯಾಯಕ್ಕಾಗಿ ನೋಟ ಮತದಾನ ಮಾಡುವ ಕ್ರಮ ಸರಿಯಲ್ಲವಾಗಿದೆ .

ಕರಾವಳಿ ಜಿಲ್ಲೆಯಲ್ಲಿ ಯಾರಿಂದ ಯಾರು ಅನ್ಯಾಯಕ್ಕೆ ಒಳಾಗಾಗಿದ್ದಾರೆ ಅವರಿಗೆ ನ್ಯಾಯ ಸಿಗಲೇಬೇಕು ಅದರಲ್ಲಿ ಎರಡೂ ಮಾತಿಲ್ಲ. ಹಾಗಾಂತ ವಿಷಯಾಂತರ ಮಾಡಿ ಮತದಾರರ ದಾರಿ ತಪ್ಪಿಸುವುದು ಅಪರಾಧವಾಗಿರುತ್ತದೆ. ನೋಟ ಮತದಾನದಿಂದ ಇದಕ್ಕೆ ನ್ಯಾಯ ಸಾಧ್ಯವೇ ಇಲ್ಲ ಹಾಗೂ ನೋಟಕ್ಕೆ ಮತದಾನ ಮಾಡಿ ಮೂರ್ಖರಾಗುವ ಸಂಭವವೇ ಹೆಚ್ಚು .ಅಂದರೆ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಪರೀಕ್ಷೆ ಬರೆದು ಫಲಿತಾಂಶದಲ್ಲಿ ಪಾಸ್ ಅಥವಾ ಫೇಲ್ ಆಗಿರುತ್ತಾರೆ. ಹಾಗಂತ ಪರೀಕ್ಷೆ ಬರೆಯದವನು ಫಲಿತಾಂಶದ ನಿರೀಕ್ಷೆ ಮಾಡಲು ಸಾಧ್ಯವಿಲ್ಲ .ಫಲಿತಾಂಶವೇ ಇಲ್ಲ ಅಂದ ಮೇಲೆ ಪ್ರಯತ್ನ ಯತಕ್ಕಾಗಿಬೇಕು. ನಾವೆಲ್ಲಾ ಪ್ರಬುದ್ಧ ಮತದಾರರು ಚುನಾವಣೆ ಎಂಬ ಯುದ್ದದಲ್ಲಿ ರಾಷ್ಟ್ರದ ಹಿತಕ್ಕಾಗಿ ,ಧರ್ಮದ ರಕ್ಷಣೆಗಾಗಿ ,ಸತ್ಯ ಮತ್ತು ನ್ಯಾಯ ಪರವಾದ ಫಲಿತಾಂಶಕ್ಕಾಗಿ ಪ್ರಯತ್ನಿಸಬೇಕು ವಿನಾಃ ಶೂನ್ಯಕ್ಕಾಗಿ ಅಲ್ಲ .ಆದುದರಿಂದ ನೋಟ ಬೇಡ ,ಕಡ್ಡಾಯ ಮತ ಚಲಾಯಿಸೋಣ.

ಮತದಾರರಲ್ಲಿ ವಿನಂತಿ

ಯಾವುದೇ ಒತ್ತಡ, ಅಮಿಷಕ್ಕೆ ,ಒತ್ತಾಯಕ್ಕೆ ಮುಜುಗರಗಳಿಗೆ ಮನಿದು ನೋಟಕ್ಕೆ ಮತದಾನ ಮಾಡದಿರೋಣ. ಹಾಗೂ ಕಡ್ಡಾಯ ಮತದಾನ ಮಾಡೋಣ ಎಂದು ಈ ಮೂಲಕ ವಿನಂತಿ

ಈ ಹಿನ್ನಲ್ಲೆಯಲ್ಲಿ ನೋಟ ಮತದಾನ ಅಭಿಯಾನ ಮಾಡುವವರ ವಿರುದ್ದ ಪ್ರಜಾ ಪ್ರತಿನಿಧಿ ಕಾಯ್ದೆಯನ್ವಯ ಕಾನೂನು ಕ್ರಮ ಕೈಗೊಳ್ಳಲು ಈ ಮೂಲಕ ವಿನಂತಿ ಮಾಡಿದ್ದಾರೆ.

More from the blog

ಗುಡ್ಡೆ ಅಂಗಡಿ ನೂರೂದ್ದೀನ್ ಮಸೀದಿಯಲ್ಲಿ ಈದ್ ಮುಬಾರಕ್ ಆಚರಣೆ

ಗುಡ್ಡೆ ಅಂಗಡಿ ನೂರೂದ್ದೀನ್ ಮಸೀದಿಯಲ್ಲಿ ಈದ್ ಮುಬಾರಕ್ ಆಚರಣೆ ನಡೆಯಿತು. ಖತೀಬರಾದ ಅಸ್ವೀಫ್ ಧಾರಿಮಿ ಅವರು ನೇತೃತ್ವ ವಹಿಸಿ ಈದ್ ಸಂದೇಶವನ್ನು ಸಾರಿದರು.. ಪುರಸಭಾ ಸದಸ್ಯ ಅಬುಬಕ್ಕರ್ ಸಿದ್ದೀಕ್, ಎನ್‌.ಜೆ.ಎಮ್ ಮಸೀದಿ  ಇದರ ಅಧ್ಯಕ್ಷ...

ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ….?​ ಇಲ್ಲಿದೆ ಮಾಹಿತಿ

ಬೆಂಗಳೂರು: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶೇ 81.15 ಮಂದಿ ಉತ್ತೀರ್ಣಗೊಂಡಿದ್ದಾರೆ. 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 1,28,448 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ...

ಶಾಲಾ ಸಮುದಾಯದತ್ತ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಮಾಣಿ: ಶೈಕ್ಷಣಿಕ ವಿಚಾರಗಳ ಸಂಬಂಧಿತವಾದ ಒಳ್ಳೆಯ ಚಚೆ೯ಗಳು ಮೂಡಿಬಂದಾಗ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಕೆಲಸಗಳು ಮೂಡಲು ಸಾಧ್ಯ ‌. ಪ್ರತಿಯೊಬ್ಬ ವಿದ್ಯಾರ್ಥಿ, ಪೋಷಕರು,ತನ್ನ ಶಾಲೆಯ ಬಗ್ಗೆ ಒಳ್ಳೆಯ ಭಾವನೆ, ಸಂಬಂಧ ಇರಬೇಕು...

ಮೈಟ್ ಎಜುಕೇಶನ್ ಸಂಸ್ಥೆಯ ವತಿಯಿಂದ 2024ರ ಪ್ರಾಕ್ಟಿಕಲ್ ಪರೀಕ್ಷೆ

ಮಂಗಳೂರು ಹಾಗೂ ಬಿಸಿರೋಡ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಟ್ ಎಜುಕೇಶನ್ ಸಂಸ್ಥೆಯ ವತಿಯಿಂದ 2024ರ ಪ್ರಾಕ್ಟಿಕಲ್ ಪರೀಕ್ಷೆ ಸೋಮವಾರ ಬಿಸಿರೋಡ್ ಶಾಖೆಯಲ್ಲಿ ನಡೆಯಿತು. ಟೀಚರ್ಸ್ ಟ್ರೈನಿಂಗ್ ವಿಭಾಗದ ವಿದ್ಯಾರ್ಥಿನಿಯರಿಂದ ಪ್ರಸ್ತುತ ವರ್ಷದಲ್ಲಿ ತಯಾರಿಸಿದ ಎಲ್ಲಾ ಕಲಿಕಾ...