Saturday, April 13, 2024

ಲೋಕಸಭಾ ಚುನಾವಣೆ : ಮತಯಂತ್ರಗಳ ಕಮಿಷನಿಂಗ್‌ ಕಾರ್ಯ…. ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ಭೇಟಿ

ಬಂಟ್ವಾಳ :ಮೊಡಂಕಾಪಿನಲ್ಲಿರುವ ಇನ್ಫೆಂಟ್‌ ಜೀಸಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ದಿನ ಲೋಕಸಭಾ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ 205 ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಳಸಲಾಗುವ ಮತಯಂತ್ರಗಳ ಕಮಿಷನಿಂಗ್‌ ಕಾರ್ಯವು ನಡೆಯಿತು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ರವರು ಕಮಿಷನಿಂಗ್‌ ಕಾರ್ಯ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದರು.

ಪೂರ್ವಾಹ್ನ 6.00 ಗಂಟೆಯಿಂದಲೇ ಕರ್ತವ್ಯ ನಿರತರಾಗಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತಾವೇ ಸ್ವತಃ ಮಧ್ಯಾಹ್ನದ ಊಟವನ್ನು ಬಡಿಸಿ, ಪ್ರಶಂಸೆ ವ್ಯಕ್ತಪಡಿಸಿದರು.

205-ಬಂಟ್ವಾಳದ ಸಹಾಯಕ ಚುನಾವಣಾಧಿಕಾರಿ ಡಾ. ಉದಯ ಶೆಟ್ಟಿ, ಚುನಾವಣಾ ನೋಡಲ್ ಅಧಿಕಾರಿ ರಾಜು ಮೋಗವೀರ, ತಹಶೀಲ್ದಾರ್‌ ಅರ್ಚನಾ ಭಟ್‌, ಸೆಕ್ಟರ್ ಅಧಿಕಾರಿಗಳು ಚುನಾವಣಾ ಉಪತಹಶೀಲ್ದಾರ್‌ ನವೀನ್‌ ಕುಮಾರ್‌ ಬೆಂಜನಪದವು, ಉಪತಹಸೀಲ್ದಾರ್ ದಿವಾಕರ ಮುಗಳಿಯ,ವಿಷಯ ನಿರ್ವಾಹಕ ಮಂಜುನಾಥ ಕೆ ಹೆಚ್‌, ಕಂದಾಯ ನಿರೀಕ್ಷಕರು, ತಾಲೂಕು ಕಚೇರಿ ಸಿಬ್ಬಂದಿ ವರ್ಗ,ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಗ್ರಾಮಸಹಾಯಕರು, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

More from the blog

ಜಮೀನಿನ ವಿಚಾರದಲ್ಲಿ ತಕರಾರು ನಡೆಸಿ ಹಲ್ಲೆ ಪ್ರಕರಣ : ಶಿಕ್ಷೆ ಪ್ರಕಟ

ಬಂಟ್ವಾಳ: ಜಮೀನಿನ ವಿಚಾರದಲ್ಲಿ ತಕರಾರು ಉಂಟಾಗಿ ಹಲ್ಲೆ ನಡೆಸಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಶಿಕ್ಷೆ ಪ್ರಕಟಗೊಳಿಸಿದ ಬಗ್ಗೆ ವರದಿಯಾಗಿದೆ. ದೇವಸ್ಯ ಪಡೂರು ಗ್ರಾಮ,ಕುಟ್ಟಿಕಳ ,ಅಲ್ಲಿಪಾದೆ ಎಂಬಲ್ಲಿ ನೀಲಯ್ಯ ಮೂಲ್ಯ ಹಾಗೂ ಶ್ರೀನಿವಾಸ್ ಪೂಜಾರಿ ರವರಿಗೆ...

ಮಯ್ಯರಬೈಲು: ಏ.14 ರಂದು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಯುಗಾದಿ ಉತ್ಸವ ಕಾರ್ಯಕ್ರಮ

ಮಾತೃಭೂಮಿ ಯುವ ಬಳಗ ಹಾಗೂ ಮಾತೃಭೂಮಿ ಮಹಿಳಾ ಮಂಡಳಿ ಮಯ್ಯರಬೈಲು ಇವರ ಜಂಟಿ ಅಶ್ರಯದಲ್ಲಿ ಚತುರ್ಥ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಯುಗಾದಿ ಉತ್ಸವ ಕಾರ್ಯಕ್ರಮ ಏ.14 ರಂದು ಮಯ್ಯರಬೈಲಿನಲ್ಲಿ...

ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯ ಮತ್ತು ಯುವ ಸ್ಪಂದನ ಸಮಾಲೋಚನೆ ಸೇವೆಗಳ ಕುರಿತು ಕಾರ್ಯಕ್ರಮ

ಸರಕಾರಿ ಪ್ರಥಮ ದರ್ಜೆ ಕಾಲೇಜು ಬಂಟ್ವಾಳ ಕಾಮಾಜೆ ಇಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜನ ಆರೋಗ್ಯ ಕೇಂದ್ರ ಎಪಿಡಿಮಿಯೋಲಜಿ ವಿಭಾಗ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಬೆಂಗಳೂರು,...

ಯುವಮೋರ್ಚಾ ಬಂಟ್ವಾಳ ವತಿಯಿಂದ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಬಿ. ಸಿ ರೋಡಿನ ರಕ್ತೇಶ್ವರಿ ದೇವಸ್ಥಾನದಲ್ಲಿ ಪ್ರಾರ್ಥನೆ

ಯುವಮೋರ್ಚಾ ಬಂಟ್ವಾಳ ವತಿಯಿಂದ ನರೇಂದ್ರ ಮೋದಿ ಮತೊಮ್ಮೆ ಪ್ರಧಾನಿಯಾಗಲೆಂದು ರಕ್ತೇಶ್ವರಿ ದೇವಸ್ಥಾನ ಬಿ. ಸಿ ರೋಡಿನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.