Saturday, April 6, 2024

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪ್ರಮುಖರ ಮನೆಗೆ ಲೋಕಸಭಾ ಅಭ್ಯರ್ಥಿ ಬ್ರಿಜೇಶ್ ಚೌಟ ಭೇಟಿ

ಬಂಟ್ವಾಳ: ರಾಷ್ಟ್ರದ ಹಿತಾಸಕ್ತಿಯ ದೃಷ್ಟಿಯಿಂದ, ವಿಕಸಿತ ಭಾರತದ ಸಂಕಲ್ಪಕ್ಕೆ ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗಬೇಕು, ಈ ನಿಟ್ಟಿನಲ್ಲಿ ರಾಜ್ಯದ ಪ್ರತಿಯೊಂದು ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಗೆಲುವು ಸಾಧಿಸಬೇಕಾಗಿದೆ ಎಂದು ಮಂಗಳೂರು ಲೋಕಸಭಾ ಅಭ್ಯರ್ಥಿ ಬ್ರಿಜೇಶ್ ಚೌಟ ಹೇಳಿದರು.

ಅವರು ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಎರಡನೇ ಸುತ್ತಿನ ಪ್ರವಾಸ ಕೈಗೊಂಡು ಪ್ರಮುಖರ ಮನೆ ಭೇಟಿ ಮಾಡಿ ಮಾತನಾಡಿದರು.

ಮನೆ ಭೇಟಿ ಕಾರ್ಯಕ್ರಮದ ಸಂದರ್ಭದಲ್ಲಿ ಗ್ರಾಮದಲ್ಲಿ ಕಾರ್ಯಕರ್ತರ ಜೊತೆ, ಗ್ರಾ.ಪಂ.ಜನಪ್ರತಿನಿಧಿಗಳ ಹಾಗೂ ಬೂತ್ ಪ್ರಮುಖರ ಜೊತೆ ಮಾತನಾಡಿ ಚುನಾವಣಾ ವಿಚಾರದಲ್ಲಿ ಚರ್ಚೆ ಮಾಡಿದ್ದೇನೆ. ಎಲ್ಲರ ಗುರಿ ಪ್ರಧಾನಿ ಮೋದಿಯವರನ್ನು ಗೆಲ್ಲಿಸಿ ಭಾರತದ ದೇಶವನ್ನು ಶಕ್ತಿವಂತ ದೇಶವನ್ನಾಗಿ ಮಾಡುವ ಒಂದೇ ಗುರಿಯಾಗಿದೆ. ಗ್ರಾಮಗ್ರಾಮಕ್ಕೆ ಬೇಟಿ ನೀಡಿದಾಗ ಕಾರ್ಯಕರ್ತರ ಉತ್ಸಾಹ, ಹುರುಪು ಪಕ್ಷಕ್ಕೆ ಶಕ್ತಿ ತುಂಬಿದೆ ಎಂದು ಅವರು ತಿಳಿಸಿದರು.

ಎ.26 ರಂದು ನಡೆಯುವ ಚುನಾವಣೆಯವರೆಗೆ ಪಕ್ಷದ ಗೆಲುವಿಗಾಗಿ ಒಟ್ಟಾಗಿ,ಒಂದಾಗಿ ಕೆಲಸ ಮಾಡುವ ಎಂದು ತಿಳಿಸಿದರು.

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ, ನನಗೆ ವಿಶ್ವಾಸವಿದೆ ಕ್ಷೇತ್ರದ ಜನತೆ ಬಹಳ ಪ್ರೀತಿಯನ್ನು ನೀಡಿ ಎರಡು ಬಾರಿ ಜನರ ಸೇವೆ ಮಾಡುವುದಕ್ಕಾಗಿ ಅವಕಾಶ ನೀಡಿ ವಿಧಾನ ಸಭೆಗೆ ಕಳುಹಿಸಿದ್ದಾರೆ,ಅದೇ ರೀತಿಯ ಪ್ರೀತಿ ವಿಶ್ವಾಸವನ್ನು ಬ್ರಿಜೇಶ್ ಚೌಟ ಅವರಿಗೂ ನೀಡಿ ಬಂಟ್ವಾಳ ಕ್ಷೇತ್ರದಲ್ಲಿ ಅತ್ಯಂತ ಬಹುಮತದ ಮತಗಳನ್ನು ನೀಡಿ ಬಿಜೆಪಿಗೆ ಬಲತುಂಬುವ ಕಾರ್ಯ ಮಾಡಬೇಕಾಗಿದೆ ಎಂದು ತಿಳಿಸಿದರು.

ಉತ್ತಮ ಫಲಿತಾಂಶಕ್ಕಾಗಿ ಕಾರ್ಯಕರ್ತರು ಜೊತೆಯಾಗಿ ಶ್ರಮಿಸಬೇಕು ಎಂದು ತಿಳಿಸಿದರು.

ಜಿ.ಪಂ.ಮಾಜಿ ಸದಸ್ಯ ತುಂಗಪ್ಪ ಬಂಗೇರ ಮಾತನಾಡಿ, ದೇಶ ಉಳಿಯಬೇಕಾದರೆ ಮೋದಿ ಮತ್ತೊಮ್ಮೆ ‌ಪ್ರಧಾನಿಯಾಗಬೇಕು. ಪಕ್ಷಕ್ಕೆ ದ್ರೋಹ ಮಾಡದೆ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರನ್ನು ದಾಖಲೆಯ ಅಂತರದಲ್ಲಿ ಗೆಲ್ಲಿಸಿಕೊಡುವಂತೆ ಮನವಿ ಮಾಡಿದರು. ಚುನಾವಣೆಯವರೆಗೆ ಪ್ರತಿ ಮನೆಯ ಸಂಪರ್ಕ ಮಾಡುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದರು.

ಕಲ್ಲಡ್ಕ ಶ್ರೀರಾಮ ಮಂದಿದರಲ್ಲಿ ಶ್ರೀ ರಾಮನಿಗೆ ಪೂಜೆ ಸಲ್ಲಿಸಿ ಬಳಿಕ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಎರಡನೇ ಸುತ್ತಿನ ಮತಯಾಚನೆ ನಡೆಸಿದರು.

ಕಲ್ಲಡ್ಕ ಡೊಂಬಯ್ಯ ಸಪಲ್ಯ, ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಅಮ್ಟೂರು ಗ್ರಾಮದ ಕರಿಂಗಾನ ಗುತ್ತು ಶ್ರೀನಿವಾಸ ಕಾಮತ್ ಅವರ ಜುಮಾದಿ ಬಂಟ ಭಂಡಾರದ ಮನೆಗೆ,

ಮನೋಜ್ ಕಟ್ಟೆಮಾರ್ ಅವರ ಮನೆಯಲ್ಲಿರುವ ಅಮ್ಟೂರು ಕಟ್ಟೆಮಾರ್ ಮಂತ್ರದೇವತೆ ಸಾನಿಧ್ಯಕ್ಕೆ, ಮೊಗರ್ನಾಡು ಉದ್ಯಮಿ ರಘ ಸಪಲ್ಯರ ಮನೆಗೆ,ಬಂಟ್ವಾಳ ತಾಲೂಕು‌ ಬಿಲ್ಲವ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಅವರ ಮನೆಗೆ ಬೇಟಿ,ಪಾಣೆಮಂಗಳೂರು ನವಜೀವನ‌ವ್ಯಾಯಮ ಶಾಲೆಗೆ ಬೇಟಿ,ಅಂಚನ್ ಮಾಲೀಕತ್ವದ ಪ್ರಸಿದ್ದ ಮಳಿಗೆಯಾದ ಬಂಟ್ವಾಳ ಅಂಚನ್ ಸಿಲ್ಸ್ಕ್ ಗೆ,

ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಅವರ ಮನೆಗೆ, ವಾಮದಪದವು ಅಜ್ಜಿಬೆಟ್ಟು, ಶ್ರೀನಿವಾಸ ಕ್ಯಾಶ್ಯೂ ಪ್ಯಾಕ್ಟರಿ,ಹಾಗೂ ಪಚ್ಚಿನಡ್ಕ ಭುವನೇಶ್ ಅವರ ಮನೆಗೆ ಭೇಟಿ ನೀಡಿದರು.

ಬಿಸಿರೋಡಿನ ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರಕ್ಕೆ ಬೇಟಿ ನೀಡಿ ಪ್ರಸಾದ ಸ್ವೀಕರಿಸಿದರು.

ಮೂಡುನಡುಗೋಡು ಗ್ರಾಮದ ದಡ್ಡಲಕಾಡು ಶ್ರೀ ಜಗದಂಬಿಕಾ ಶ್ರೀ ಮಹಮ್ಮಾಯಿ ಗುಳಿಗ ಅಣ್ಣಪ್ಪ ಕ್ಷೇತ್ರದಲ್ಲಿ ನಡೆಯುವ ಪ್ರತಿಷ್ಠಾವರ್ಧಂತ್ಯುವ ಹಾಗೂ 63 ನೇ ವರ್ಷಾವಧಿ ಮಹೋತ್ಸವ ಕಾರ್ಯಕ್ರಮಕ್ಕೆ ಬೇಟಿ ನೀಡಿ ಪ್ರಸಾದ ಸ್ವೀಕರಿಸಿದರು.

ಹರಿಕೃಷ್ಣ ಬಂಟ್ವಾಳ ಅವರ ಸಹೋದರ ಕಾಯೆರ್ ಮಾರ್ ದಿನೇಶ್ ಪೂಜಾರಿ ಅವರ ಮನೆಯಲ್ಲಿ ನಡೆಯುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಶ್ರೀ ದೇವಿಮಹಾತ್ಮೆ ಯಕ್ಷಗಾನದ ಅಂಗವಾಗಿ ಮನೆಗೆ ಬೇಟಿ ನೀಡಿದರು.

ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ,ಪದ್ಮನಾಭ ಕೊಟ್ಟಾರಿ, ಬಿಜೆಪಿ ಪ್ರಮುಖರಾದ ಜಗದೀಶ್ ಶೇಣವ, ಪೂಜಾ ಪೈ, ಹರಿಕೃಷ್ಣ ಬಂಟ್ವಾಳ, ಸುಲೋಚನ ಜಿ.ಕೆ.ಭಟ್, ದೇವಪ್ಪ ಪೂಜಾರಿ, ಸಂದೇಶ್ ಶೆಟ್ಟಿ ಅರೆಬೆಟ್ಟು, ದಿನೇಶ್ ಅಮ್ಟೂರು, ಸುದರ್ಶನ ಬಜ, ಪುರುಷೋತ್ತಮ ಸಾಲಿಯಾನ್ ನರಿಕೊಂಬು, ಯಶೋಧರ ಕರ್ಬೆಟ್ಟು, ರವೀಶ್ ಶೆಟ್ಟಿ ಕರ್ಕಳ, ರಾಮ್ ದಾಸ ಬಂಟ್ವಾಳ, ಗಣೇಶ್ ರೈ ಮಾಣಿ, ಸುರೇಶ್ ಕೋಟ್ಯಾನ್ ನರಿಕೊಂಬು, ವಜ್ರನಾಥ ಕಲ್ಲಡ್ಕ, ಬಿ.ಕೆ.ಅಣ್ಣುಪೂಜಾರಿ, ಪುರುಷೋತ್ತಮ ಶೆಟ್ಟಿ, ಮೋನಪ್ಪ ದೇವಸ್ಯ, ಲಖಿತಾ ಆರ್ ಶೆಟ್ಟಿ, ವಿಜಯ ಅಮ್ಟಾಡಿ, ಕಾರ್ತಿಕ್ ಬಲ್ಲಾಳ್,ಗೋವಿಂದ ಪ್ರಭು, ಹರಿಪ್ರಸಾದ್,ಹಿರಣ್ಮಯಿ, ಹರ್ಷಿಣಿಪುಷ್ಪಾನಂದ, ಕಾಂತಪ್ಪ,ಶಂಕರ್ ಶೆಟ್ಟಿ ಬೆದ್ರಮಾರ್, ಸಂಪತ್ ಸುವರ್ಣ ಕಡೇಶಿವಾಲಯ, ಅರವಿಂದ ರೈ, ಲಕ್ಮೀನಾರಾಯಣ ಹೆಗ್ಡೆ, ಬಾಳ್ತಿಲ,ಮೋಹನ್ ಪಿ.ಎಸ್, ಲೋಕಾನಂದ ಪೂಜಾರಿ, ಮಮತ ಗೌಡ, ಜಯಂತ ಗೌಡ ಅಮ್ಟೂರು, ಅಭಿಷೇಕ್ ಶೆಟ್ಟಿ ನೆಟ್ಲ , ದಿನೇಶ್ ಶೆಟ್ಟಿ ದಂಬೆದಾರ್, ಶ್ಯಾಮ್ ಪ್ರಸಾದ್ ಪೂಂಜ, ರವಿರಾಮ್, ಪುರುಷ ಸಾಲಿಯಾನ್ ನೆತ್ತರೆಕೆರೆ,ಪುರುಷೋತ್ತಮ ಕೊಟ್ಟಾರಿ ಮತ್ತಿತರರು ಉಪಸ್ಥಿತರಿದ್ದರು.

More from the blog

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ : ಇಬ್ಬರು ಗಂಭೀರ

ಬಂಟ್ವಾಳ: ಮುಂಜಾನೆ ವೇಳೆ ರಾಷ್ಟ್ರೀಯ ಹೆದ್ದಾರಿಯ ಬಿಸಿರೋಡಿನ ಕೈಕಂಬ ಎಂಬಲ್ಲಿ ಬೈಕ್ ಒಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಸವಾರ ಹಾಗೂ ಸಹಸವಾರ ಇಬ್ಬರು ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ...

ಸರ್ಕಾರದ ಕೋವಿ ಠೇವಣಿ ಕ್ರಮ: ಪರವಾನಿಗೆ ಪಡೆದ ರೈತರಿಂದ ಚುನಾವಣೆ ಬಹಿಷ್ಕಾರ 

ವಿಟ್ಲ: ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯ ದ.ಕ.ಜಿಲ್ಲಾ ಸಮಿತಿ ಮತ್ತು ಕೋವಿ ಪರವಾನಿಗೆ ಪಡೆದ ರೈತ ಬಳಕೆದಾರರ ಸಂಘವು ಈ ಬಾರಿ ಚುನಾವಣೆ ಬಹಿಷ್ಕರಿಸುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ...

ಟ್ರಾಫಿಕ್ ಪೊಲೀಸ್ ಠಾಣೆಯ ಕಾಮಗಾರಿಯನ್ನು ಪೊಲೀಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ

ಬಂಟ್ವಾಳ; ಬಿಸಿರೋಡಿನ ಪಾಣೆಮಂಗಳೂರಿನಲ್ಲಿ ಅಂದಾಜು ರೂ.3.18 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಟ್ರಾಫಿಕ್ ಪೋಲೀಸ್ ಠಾಣೆಯ ಕಾಮಗಾರಿಯನ್ನು ಪೋಲಿಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ ನಡೆಸಿದರು. ಉತ್ತಮ ಗುಣಮಟ್ಟದಲ್ಲಿ ಠಾಣೆಯ ಕೆಲಸವನ್ನು ಮಾಡುವ...

ಸೌಜನ್ಯ ಹೋರಾಟ ಸಮಿತಿಯಿಂದ ನೋಟ ಅಭಿಯಾನ

ಮಂಗಳೂರು: ರಾಜಕೀಯ ಪಕ್ಷಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ಗಮನ ಸೆಳೆಯುವ ಉದ್ದೇಶದಿಂದ ಸೌಜನ್ಯ ಪರ ಹೋರಾಟ ಸಮಿತಿ ವತಿಯಿಂದ ಮುಂಬರುವ‌ ಲೋಕಸಭಾ ಚುನಾವಣೆಯಲ್ಲಿ ನೋಟಕ್ಕೆ ಮತ ಚಲಾಯಿಸಲು ಜನ ಸಾಮಾನ್ಯರನ್ನು ಪ್ರೇರೇಪಿಸಲು ನೋಟ...