Thursday, April 11, 2024

ಬ್ರೈಟ್ ಭಾರತ್ ಸಂಸ್ಥೆಯ ವತಿಯಿಂದ ಪ್ರಜ್ಞಾ ಆಶ್ರಮಕ್ಕೆ ವಿಲ್ ಚಯರ್ ಹಸ್ತಾಂತರ, ರೋಗಿಗಳಿಗೆ ಸಿಹಿತಿಂಡಿ ಹಾಗು ಅಕ್ಕಿ ವಿತರಣಾ ಕಾರ್ಯಕ್ರಮ

ಪುತ್ತೂರು: ಬ್ರೈಟ್ ಭಾರತ್ ಸಂಸ್ಥೆಯ ವತಿಯಿಂದ, ಪುತ್ತೂರಿನ ಬಿರಮಲೆ ಬೆಟ್ಟದಲ್ಲಿರುವ ಪ್ರಜ್ಞಾ ಆಶ್ರಮಕ್ಕೆ ವಿಲ್ ಚಯರ್ ಹಸ್ತಾಂತರ ಹಾಗು ಆಶ್ರಮದ ಭಿನ್ನ ಸಾಮರ್ಥ್ಯದ ರೋಗಿಗಳಿಗೆ ಸಿಹಿತಿಂಡಿ ಹಾಗು ಅಕ್ಕಿ ವಿತರಣಾ ಕಾರ್ಯಕ್ರಮ ಇಂದು ಆಶ್ರಮದ ವಠಾರದಲ್ಲಿ ನಡೆಯಿತು.

ಇಂದು ಪ್ರಜ್ಞಾ ಆಶ್ರಮಕ್ಕೆ ತೆರಳಿದ ಬ್ರೈಟ್ ಭಾರತ್ ಸಂಸ್ಥೆಯ ಪಾಲುದಾರರು, ಅಲ್ಲಿನ ಭಿನ್ನ ಸಾಮರ್ಥ್ಯದ ರೋಗಿಗಳೊಂದಿಗೆ, ಒಂದಿಷ್ಟು ಸಮಯ ಕಳೆದು, ಆಶ್ರಮಕ್ಕೆ ಬೇಕಾದ ಅಕ್ಕಿ, ವಿಲ್ ಚಯರ್ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಮಾಜಸೇವಕರಾದ ಅಲಿ ಪರ್ಲಡ್ಕ, ಸಂತೋಷ್ ಗೋಳಿಕಟ್ಟೆ, ಮೂರ್ತಿ ಕಲಾವಿದರಾದ ತಾರಾನಾಥ ಆಚಾರ್ಯ, ಆಶ್ರಮದ ಮುಖ್ಯಸ್ಥರಾದ ಅಣ್ಣಪ್ಪ, ಹಾಗು ಅವರ ಪತ್ನಿ ಜ್ಯೋತಿ ಮತ್ತು ಬ್ರೈಟ್ ಭಾರತ್ ಸಂಸ್ಥೆಯ ಪಾಲುದಾರರು ಉಪಸ್ಥಿತರಿದ್ದರು.

More from the blog

ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗ್ರಾಮ,ಮನೆ,ಮನ ಅಭಿಯಾನದ ಅಂಗವಾಗಿ ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಬೇಟಿ ನೀಡಿ...

ಗುಡ್ಡೆ ಅಂಗಡಿ ನೂರೂದ್ದೀನ್ ಮಸೀದಿಯಲ್ಲಿ ಈದ್ ಮುಬಾರಕ್ ಆಚರಣೆ

ಗುಡ್ಡೆ ಅಂಗಡಿ ನೂರೂದ್ದೀನ್ ಮಸೀದಿಯಲ್ಲಿ ಈದ್ ಮುಬಾರಕ್ ಆಚರಣೆ ನಡೆಯಿತು. ಖತೀಬರಾದ ಅಸ್ವೀಫ್ ಧಾರಿಮಿ ಅವರು ನೇತೃತ್ವ ವಹಿಸಿ ಈದ್ ಸಂದೇಶವನ್ನು ಸಾರಿದರು.. ಪುರಸಭಾ ಸದಸ್ಯ ಅಬುಬಕ್ಕರ್ ಸಿದ್ದೀಕ್, ಎನ್‌.ಜೆ.ಎಮ್ ಮಸೀದಿ  ಇದರ ಅಧ್ಯಕ್ಷ...

ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ : ಇವತ್ತಿನ ‌ಬೆಲೆ ಎಷ್ಟು ಗೊತ್ತಾ…?

ಯುಗಾದಿ ಹಬ್ಬ. ಇದು ಸಂಬಂಧ ಬೆಸೆಯುವ ಹಬ್ಬ. ಅಂದಹಾಗೆಯೇ ದೇಶದಾದ್ಯಂತ ಜನರು ಇಂದು ಸಂಭ್ರಮದಲ್ಲಿದ್ದಾರೆ. ಆದರೆ ಇದರ ನಡುವೆ ಚಿನ್ನದ ಬೆಲೆ ಏರಿಕೆಯ ಬಿಸಿಯಿಂದ ಕೊಂಚ ಬೇಸರವು ಅವರಲ್ಲಿ ಆವರಿಸಿದೆ. ಕಳೆದ ಎರಡು ದಿನಗಳ...

300 ರೂ. ಗಡಿಯತ್ತ ಹಸಿ ಕೊಕ್ಕೊ… 900 ರೂ. ಗಡಿಯತ್ತ ಒಣ ಕೊಕ್ಕೊ

ಪುತ್ತೂರು: ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹಸಿ ಕೊಕ್ಕೊ, ಒಣ ಕೊಕ್ಕೊ ಧಾರಣೆ ಮತ್ತಷ್ಟು ಜಿಗಿದಿದ್ದು, ಹೊರ ಮಾರುಕಟ್ಟೆಯಲ್ಲಿಯೂ ಅತ್ಯಧಿಕ ದರ ದಾಖಲಾಗಿದೆ. ಒಣ ಕೊಕ್ಕೊ 900 ರೂ. ಗಡಿಯತ್ತ, ಹಸಿ ಕೊಕ್ಕೊ 300 ರೂ....