Wednesday, April 24, 2024

ಅಕ್ರಮ ಸಾರಾಯಿ ಮಾರಾಟ: ಇಬ್ಬರ ಬಂಧನ

ಬಂಟ್ವಾಳ: ಅಕ್ರಮವಾಗಿ ಗುಡ್ಡೆಯಲ್ಲಿ ಸಾರಾಯಿ ಮಾರಾಟ ಮಾಡುತ್ತಿದ್ದ ವೇಳೆ ಬಂಟ್ವಾಳ ನಗರ ಠಾಣಾ ಪೋಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ಸಾವಿರಾರು ರೂ ಮೌಲ್ಯದ ಸಾರಾಯಿ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.
ಬಂಟ್ವಾಳ ತಾಲೂಕಿನ ಮಾರ್ನಬೈಲು ಸಮೀಪದ ಕಂದೂರು ಎಂಬಲ್ಲಿರುವ ಬಾರೊಂದರ ಹಿಂಬದಿಯ ಗುಡ್ಡದಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇಲೆ ದಾಳಿ ನಡೆಸಿ ದ ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್ ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.
ಬಂಧಿತರನ್ನು ಕಾರಾಜೆ ನಿವಾಸಿ ದಿನೇಶ್ ಪೂಜಾರಿ ಹಾಗೂ ಬೆಳುವಾಯಿ ನಿವಾಸಿ ಹರೀಶ್ ಎಂದು ಗುರುತಿಸಲಾಗಿದೆ.
ಬಂಧಿತರಿಂದ 20 ಸಾವಿರ ರೂ ಯ ನಗದು ಹಾಗೂ 14,074 ರೂ ಮೌಲ್ಯದ ಸಾರಾಯಿಯನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಲಾಗಿದೆ.
ಕಾರ್ಯಚರಣೆ ಯಲ್ಲಿ ಸಿಬ್ಬಂದಿ ಗಳಾದ ಶಿವರಾಮ್, ಲೋಕೇಶ್, ಬಸವರಾಜ್, ಮಾರುತಿ, ಹಾಗೂ ಚಾಲಕ ವಿಜಯ್ ಅವರು ಭಾಗವಹಿಸಿದ್ದರು.

More from the blog

ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ನ ಹಿಂದುಳಿದ ವರ್ಗಗಳ ಘಟಕದ ಸಭೆ

ಬಂಟ್ವಾಳ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಬಂಟ್ವಾಳ ಮತ್ಗು ಪಾಣೆಮಂಗಳೂರು ಬ್ಲಾಕ್ ನ ಹಿಂದುಳಿದ ವರ್ಗಗಳ ಘಟಕದ ಸಭೆ ಬಿಸಿರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಿತು. ಹಿಂದುಳಿದ...

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಹನುಮೋತ್ಸವ ಶ್ರೀಮದ್ರಾಮಾಯಣ ಮಹಾಯಜ್ಞ

ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಮಂಗಳವಾರ ಶ್ರೀ ಹನುಮೋತ್ಸವದ ಅಂಗವಾಗಿ ಭಗವನ್ನಾಮಸಂಕೀರ್ತನೆ ಮಂಗಲ, ಶ್ರೀಮದ್ರಾಮಾಯಣ ಮಹಾಯಜ್ಞದ ಸಂದರ್ಭದಲ್ಲಿ ದತ್ತಪ್ರಕಾಶ ಪತ್ರಿಕೆಯ 25ನೇ ವರ್ಷದ ಪ್ರಥಮ ಸಂಚಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ಶ್ರೀ ಸಂಸ್ಥಾನದ...

ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ: 690 ಕೋಟಿ ರೂ.ಗಳ ವ್ಯವಹಾರ 2.97 ಕೋ. ರೂ. ನಿವ್ವಳ ಲಾಭ

ವಿಟ್ಲ: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ 2023-24ನೇ ಸಾಲಿನಲ್ಲಿ 690 ಕೋಟಿ ರೂ.ಗಳ ವ್ಯವಹಾರ ನಡೆಸಿ, ಹೊಸ ದಾಖಲೆ ನಿರ್ಮಿಸಿದೆ. ಬ್ಯಾಂಕ್ 2.97 ಕೋಟಿ ರೂ. ನಿವ್ವಳ ಲಾಭ ಗಳಿಸಿ, ಕಳೆದ...

ರೈಲು ಡಿಕ್ಕಿ ಹೊಡೆದು ವ್ಯಕ್ತಿ ಮೃತ್ಯು

ಪುತ್ತೂರು: ಪುತ್ತೂರು-ಮಂಗಳೂರು ರೈಲು ಮಾರ್ಗದ ಮುರ ಎಂಬಲ್ಲಿ ರೈಲು ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಏ.23ರ ಬೆಳಿಗ್ಗಿನ ಜಾವ ಸಂಭವಿಸಿದೆ. ಮೃತಪಟ್ಟ ವ್ಯಕ್ತಿಯನ್ನು ಕಾಸರಗೋಡು ಚಂದ್ರಗಿರಿಯ ಮೇಲ್ಪರಂಬ ಕಲನಾಡಿನ ಜಿ ಎನ್ ರ್ಕ್ವಾಟ್ರಸ್ ನಿವಾಸಿ...