Sunday, October 22, 2023

ಶ್ರೀ ಗುರು ನಾರಾಯಣ ಶಿಕ್ಷಣ ಸಂಸ್ಥೆಯಿಂದ ವಿದ್ಯಾಥಿಗಳ ಕಣ್ಣಿನ ತಪಾಸನೆ-ಮಾಹಿತಿ ಕಾರ್ಯಗಾರ

Must read

ಮುಂಬಯಿ: ದೂರದೃಷ್ಠಿವುಳ್ಳ ಪಾಲಕರಿಂದ ಮಕ್ಕಳ ಜಾಗೃತಿ ಸಾಧ್ಯವಾಗಿದ್ದು ವಿನಯತೆಯ ಬುದ್ಧಿವಾದ ಮಕ್ಕಳ ಮಾನಸಿಕ ವಿಕಾಸಕ್ಕೆ ಪೂರಕವಾಗಿರುತ್ತದೆ ಮತ್ತು ಪಾಲಕರು ಜಾಗೃತವಾಗಿದ್ದಾಗಲೇ ಮಕ್ಕಳು ಸಂಸ್ಕಾರಯುತ ವಾಗಿ ಬೆಳೆಯುತ್ತಾರೆ. ಆದುದರಿಂದ ಬರೇ ಬರಹ, ಶಿಕ್ಷಣಕ್ಕಿಂತ ಪಾಲಕರರ ನುಡಿನಡೆಗಳಿಂದಲೇ ಮಕ್ಕಳಲ್ಲಿ ಬದಲಾವಣೆ ತರಲುಸಾಧ್ಯ. ಪಾಲಕರು ಮಕ್ಕಳ ದೇಹದ ಫಿಟ್‌ನೆಸ್ ಜೊತೆಗೆ ಮಾನಸಿಕ ಸಮತೋಲನವನ್ನೂ ತಿಳಿದು ಮಕ್ಕಳನ್ನು ಪ್ರೀತ್ಯಾಧಾರಗಳಿಂದ ಬೆಳೆಸುವ ಅಗತ್ಯವಿದೆ. ಆದುದರಿಂದ ನಾವು ಪಾಲಕರು ಎನ್ನುವ ಅಹಂ ಮರೆತು ತಮ್ಮ ಜೀವನಶೈಲಿಯಲ್ಲಿ ಕೆಲವು ಚಿಕ್ಕಪುಟ್ಟ ಮಾರ್ಪಾಡುಗಳನ್ನು ಮಾಡಿಕೊಂಡರೆ ಸುಸಂಸ್ಕೃತ ಮಕ್ಕಳನ್ನು ಸಮಾಜಕ್ಕೆ ನೀಡಲು ಸಾಧ್ಯವಾಗುವುದು. ತಮ್ಮ ದಿನನಿತ್ಯ ಜೀವನದಲ್ಲಿ ಮನೆಯೊಳಗೆ ನಡೆಯುವ ಆಗುಹೋಗುಗಳಲ್ಲಿ, ಬಳಸುವ ಭಾಷೆ ಮತ್ತು ನಡೆತೆಯಲ್ಲಿ ಹಿತಮಿತನ್ನು ಕಂಡುಕೊಂಡಾಗ ಮಕ್ಕಳು ಮತ್ತು ಪೋಷಕರಲ್ಲಿ ಸಾಮರಸ್ಯದ ಬಾಳು ಸಾಧ್ಯವಾಗುವುದು ಎಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪೋಲಿಸು ಸಂಪರ್ಕಾಧಿಕಾರಿ ಗೋಪಾಲಕೃಷ್ಣ ಕುಂದರ್ ಬಜ್ಪೆ ತಿಳಿಸಿದರು.

 

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಆಡಳಿತ್ವದ ಶ್ರೀ ಗುರು ನಾರಾಯಣ ಶಿಕ್ಷಣ ಸಮೂಹ ಸಂಸ್ಥೆ ಪಡುಬೆಳ್ಳೆ (ಉಡುಪಿ) ತನ್ನ ಕನ್ನಡ ಮಾಧ್ಯಮ ಪ್ರೌಢಶಾಲೆ, ಆಂಗ್ಲ ಮಾಧ್ಯಮ ಪ್ಲೇಸ್ಕೂಲ್, ನರ್ಸರಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನೊಳಗೊಂಡು ಕಳೆದ ಮಂಗಳವಾರ ಪಡುಬೆಳ್ಳೆಯಲ್ಲಿನ ವಿದ್ಯಾ ಸಂಕುಲದಲ್ಲಿ ಆಯೋಜಿಸಿದ್ದ ವಿದ್ಯಾಥಿಗಳ ಕಣ್ಣಿನ ಧರ್ಮಾರ್ಥ ತಪಾಸನೆ ಉದ್ಘಾಟಿಸಿ, ಸಂತೃಪ್ತ ಮಾತಾಪಿತರು ವಿಚಾರವಾಗಿ ಮಾಹಿತಿಯನ್ನಿತ್ತು ಗೋಪಾಲಕೃಷ್ಣ ಮಾತನಾಡಿದರು.

ಆಶೆ ಹುಟ್ಟಿಸಿ ಮಕ್ಕಳನ್ನು ಪ್ರೋತ್ಸಹಿಸುವ ಬದಲು ಮಕ್ಕಳ ಮನಸ್ಸುಗಳನ್ನು ಅರ್ಥೈಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬಿಸಿ ವಿಶ್ವಾಸ ಮೂಡಿಸಿ ಶಿಸ್ತನ್ನು ಕಲಿಸಿರಿ. ಆ ಮಕ್ಕಳು ಯಾವೊತ್ತೂ ಅನಾಗರೀಕತೆಯನ್ನು ಸಹಿಸಲಾರವು. ಅವಾಗಲೇ ಮಕ್ಕಳಲ್ಲಿ ಕೆಟ್ಟ ಅಭ್ಯಾಸಗಳಿಂದ ದೂರವಿರಿಸಲು ಸಾಧ್ಯವಾಗುವುದು. ಆಶೆಗಳಿಂದ ಮಕ್ಕಳ ಪರಿಸ್ಥಿತಿ ಕಪಟವಾಗಿ ಮಾರ್ಪಡಬಹುದು ಇದರಿಂದ ಎಚ್ಚರಿಕೆಯಿಂದಿರಿ ಎಂದ ಮಕ್ಕಳ ವಿಕಾಸನದಲ್ಲಿ ಪಾಲಕರ ಪಾತ್ರ ವಿಷಯವಾಗಿ ಸಂಪನ್ಮೂಲ ವ್ಯಕ್ತಿಯಾಗಿದ್ದು ಮಾತನಾಡಿದ ಗೋಪಾಲಕೃಷ್ಣ ಪಾಲಕರನ್ನು ಸಲಹಿದರು.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಅಧ್ಯಕ್ಷತೆಯಲ್ಲಿ ಜರುಗಿಸಲ್ಪಟ್ಟ ಅವಳಿ ಕಾರ್ಯಕ್ರಮದಲ್ಲಿ ಅತಿಥಿ ಅಭ್ಯಾಗತರುಗಳಾಗಿ ಮಂಗಳೂರುನ ಆರ್ಕಿಟೆಕ್ಟ್ ಪ್ರಮಲ್ ಕುಮಾರ್, ರೋಟರಿ ಕ್ಲಬ್ ಶಿರ್ವಾ ಅಧ್ಯಕ್ಷ ದಯಾನಂದ ಶೆಟ್ಟಿ ದೆಂದೂರು, ಪ್ರಸಾದ್ ನೇತ್ರಾಲಯ ಉಡುಪಿ ಇದರ ವೈದ್ಯಾಧಿಕಾರಿ ಡಾ| ಕ್ರಿಸ್ಸ್ ಡಿಸೋಜಾ, ಶಾಲಾಡಳಿತ ಮಂಡಳಿ ಸದಸ್ಯರಾದ ಸುಕನ್ಯಾ ಶಿವಾಜಿ ಎಸ್.ಸುವರ್ಣ ವೇದಿಕೆಯಲ್ಲಿದ್ದರು.

ಡಾ| ಕ್ರಿಸ್ಸ್ ಮಾತನಾಡಿ ಕಣ್ಣಿನ ಜೋಪಾಸನೆ ಪ್ರತೀಯೊಬ್ಬರ ಕರ್ತವ್ಯವಾಗಿದೆ. ಕಣ್ಣಿನ ಉತ್ತಮ ಆರೋಗ್ಯ ಮತ್ತು ಕಾರ್ಯನಿರ್ವಹಣೆಗೆ ಹಲವು ಪರಿಸರ ಮತ್ತು ವೈಯಕ್ತಿಕ ಕಾರಣಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದುದರಿಂದ ಬಾಲ್ಯಾವಸ್ಥೆಯಲ್ಲೇ ನೇತ್ರ ರಕ್ಷಣೆಯನ್ನು ಪ್ರಧಾನವಾಗಿಸಿ ಅವುಗಳ ಪಾಲನೆ ಮಾಡಬೇಕು ಎಂದು ಮಾಹಿತಿಯನ್ನು ಹಂಚಿಕೊಂಡರು ಎಂದರು.

ದಯಾನಂದ ದೆಂದೂರು ಮಾತನಾಡಿ ಮಕ್ಕಳಲ್ಲಿ ಹೊಸ ಚೈತನ್ಯ ಮೂಡಿಸುವ ಸಾಮಾಜಿಕ ಕಳಕಳಿಯುಳ್ಳ ಕಾರ್ಯಕ್ರಮ ಇದಾಗಿದೆ. ಅಂಧಾಕಾರಮುಕ್ತ ಬಾಳಿಗೆ ಇಂತಹ ಕಾರ್ಯಕ್ರಮಗಳು ಪೂರಕವಾಗಿದ್ದು, ಪೋಷಕರು ಈ ಬಗ್ಗೆ ಅತ್ಯಂತ ಸೂಕ್ಷ ವಿಚಾರವಾಗಿ ಪರಿಗಣಿಸಿ ಮಕ್ಕಳ ಕಣ್ಣಿನ ಆರೋಗ್ಯದತ್ತ ಗಮನಿಸಬೇಕು. ದೃಷ್ಟಿ ಸರಿಯಿದ್ದಾಗ ಮಾತ್ರ ಸಮಾಜವನ್ನು ಒಳ್ಳೆಯ ದೃಷ್ಠಿಯಿಂದ ಕಾಣಲು ಸಾಧ್ಯ ಎಂದರು.

ಚಂದ್ರಶೇಖರ ಪೂಜಾರಿ ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಮಾತನಾಡಿ ಮನುಷ್ಯನಲ್ಲಿ ಒಳ್ಳೆಯ ನಜರು ಇದ್ದಾಗ ಮಾತ್ರ ಆತನ ಬದುಕು ಸಾರ್ಥವಾಗುವುದು. ನಾವು ಎಷ್ಟು ಪ್ರತಿಭಾನ್ವಿತರಾಗಿದ್ದು ಪ್ರಭಾವಿಗಳಾದರೂ ದೃಷ್ಟಿಹೀನರಾಗಿದ್ದರೆ ಬದುಕು ಕತ್ತಲನ್ನಾವರಿಸುತ್ತದೆ. ಇವೆಲ್ಲವನ್ನು ಮನವರಿಸಿ ನಾವು ಇಂತಹ ನೇತ್ರ ತಪಾಸನಾ ಶಿಬಿರ ಆಯೋಜಿಸಿದ್ದೇವೆ. ಈ ಬಗ್ಗೆ ಶಿಕ್ಷಕರೂ, ಪಾಲಕರೂ ಮಕ್ಕಳಲ್ಲಿ ವಿಶೇಷ ಲಕ್ಷ ವಹಿಸಿ ಮಕ್ಕಳ ದೃಷ್ಟಿ ಸೆಳೆಯಬೇಕು. ಮಕ್ಕಳನ್ನು ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿ ರಾಷ್ಟ್ರದ ಒಳ್ಳೆಯ ಪ್ರಜೆಗಳಾಗುವಂತೆ ಪ್ರೇರಕರಾಗಬೇಕು ಎಂದ ಕಿವಿಮಾತುಗಳನ್ನಾಡಿದರು.

ಪ್ರಸಾದ್ ನೇತ್ರಾಲಯ ಉಡುಪಿ ಸಂಸ್ಥೆಯ ಎಸ್.ನವ್ಯ, ಕೆ.ಅಮರ್‌ನಾಥ್, ಹರ್ಷ ಪೂಜಾರಿ, ಮಧು ವರ್ಗೀಸ್ ಉಪಸ್ಥಿತರಿದ್ದು ವಿದ್ಯಾಥಿಗಳ ಕಣ್ಣಿನ ಧರ್ಮಾರ್ಥ ತಪಾಸನೆ ನಡೆಸಿದ್ದು, ಅವರನ್ನು ಅಧ್ಯಕ್ಷ ಚಂದ್ರಶೇಖರ ಪೂಜಾರಿ ಸ್ಮರಣಿಕೆಗಳನ್ನಿತ್ತು ಅಭಿವಂದಿಸಿದರು.

ಚಂದ್ರ ಪೂಜಾರಿ ಶಂಕರಪುರ, ಹೊನ್ನಯ ಶೆಟ್ಟಿ, ಮತ್ತಿತರ ಗಣ್ಯರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾಥಿಗಳ ನೂರಾರು ಪಾಲಕರು ಉಪಸ್ಥಿತರಿದ್ದು ಕು| ಸುರಭಿ ಜೋಗಿ ಪ್ರಾರ್ಥನೆ ಹಾಡಿದರು. ಶಾಲಾ ಆಡಳಿತಾಧಿಕಾರಿ ಜಿನರಾಜ್ ಸಿ.ಸಾಲಿಯಾನ್ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಸಂಗೀತ ವಿ.ಕೋಟ್ಯಾನ್ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಧ್ಯಾಪಕಿ ಉಷಾ ಸತೀಶ್ ಧನ್ಯವದಿಸಿದರು.

More articles

Latest article