Tuesday, October 31, 2023

ಲಾರಿ ಡಿಕ್ಕಿ ಸ್ಕೂಟರ್ ಸವಾರನಿಗೆ ಗಾಯ

Must read

ಬಂಟ್ವಾಳ: ಲಾರಿ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಗಾಯಗೊಂಡು ಅಸ್ಪತ್ರೆಗೆ ದಾಖಲಾದ ಘಟನೆ ಬಂಟ್ವಾಳ ಸಮೀಪದ ಜಕ್ರಿಬೆಟ್ಟು ಎಂಬಲ್ಲಿ ಇಂದು ಸಂಜೆ ವೇಳೆ ನಡೆದಿದೆ.
ಸರಪಾಡಿ ನಿವಾಸಿ ಚಂದ್ರಹಾಸ ಗಾಯಗೊಂಡು ಬಿಸಿರೋಡಿನ ಖಾಸಗಿ ಅಸ್ಪತ್ರೆಗೆ ದಾಖಲಾಗಿದ್ದಾರೆ.

     

        
ಧರ್ಮಸ್ಥಳ ಕಡೆಯಿಂದ ಪಾರ್ಸೆಲ್ ಹೇರಿಕೊಂಡು ಮಂಗಳೂರು ಕಡೆಗೆ ಧಾವಿಸುವ ವೇಳೆ ಜಕ್ರಿಬೆಟ್ಟು ತಿರುವಿನಲ್ಲಿ ಸ್ಕೂಟರ್ ಸವಾರನಿಗೆ ಡಿಕ್ಕಿ ಹೊಡೆದು ಸವಾರ ಸಣ್ಣಪುಟ್ಟ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾದರೆ, ಡಿಕ್ಕಿ ಹೊಡೆದ ರಭಸಕ್ಕೆ ಲಾರಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಆಲ್ಲೇ ಅಡಿಕೆ ತೋಟಕ್ಕೆ ನುಗ್ಗಿ ಪಲ್ಟಿಯಾಗಿದೆ.
ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಠಾಣಾ ಎಸ್.ಐ.ಮಂಜುಳಾ, ಎ.ಎಸ್.ಐ.ಕುಟ್ಟಿ, ಸಿಬ್ಬಂದಿ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

More articles

Latest article