ದೆಹಲಿ: ಕೊರೋನ ಎರಡನೇ ಅಲೆಯಿಂದ ತತ್ತರಿಸಿರುವ ಭಾರತದಲ್ಲಿ ಸೋಂಕು ಇನ್ನಷ್ಟು ಹರಡುವುದನ್ನು ತಡೆಗಟ್ಟಳು ನಾವು ಈ ಮೂರು ಕಾರ್ಯವನ್ನು ತುರ್ತಾಗಿ ಮಾಡಬೇಕಾಗಿದೆ ಎಂದು ಭಾರತದ ಪ್ರಧಾನ ವೈದ್ಯಕೀಯ ವಿಜ್ಞಾನ ಸಂಸ್ಥೆ ಏಮ್ಸ್ನ ಮುಖ್ಯಸ್ಥ ಡಾ. ರಣದೀಪ್? ಗುಲೆರಿಯಾ ತಿಳಿಸಿದ್ದಾರೆ.


ಕಂಟೈನ್‌ಮೆAಟ್ ಜೋನ್‌ಗಳನ್ನು ಸೃಷ್ಟಿಸುವುದು, ಜನಜಂಗುಳಿಯನ್ನು ನಿಯಂತ್ರಿಸುವುದು ಮತ್ತು ಲಸಿಕೆಯನ್ನು ಉತ್ತೇಜಿಸುವ ಕ್ರಮಗಳನ್ನು ಅನುಸರಿಸುವ ಮೂಲಕ ಹೆಚ್ಚುತ್ತಿರುವ ಮಹಾಮಾರಿ ಕರೊನಾ ವೈರಸ್ ವಿರುದ್ಧ ಪರಿಣಾಮಕಾರಿ ಹೋರಾಟವನ್ನು ನಡೆಸಬಹುದು ಎಂದು ಅವರು ಸಲಹೆ ನೀಡಿದ್ದಾರೆ.
ಕೊರೋನ ಮೊದಲ ಅಲೆ ನಿಯಂತ್ರಿಸಲು ಈ ಹಿಂದೆ ಣಾಅವು ದೇಶವನ್ನು ಕೆಂಪು, ಹಸಿರು, ಕಿತ್ತಳೆ ವಲಯಗಳಾಗಿ ಹೇಗೆ ವಿಂಗಡಿಸಿದ್ದೇವೋ ಅದನ್ನು ಮತ್ತೆ ಮಾಡಬೇಕು. ಪರೀಕ್ಷೆ, ಟ್ರ‍್ಯಾಕಿಂಗ್ ಮತ್ತು ಚಿಕಿತ್ಸೆಯೊಂದಿಗೆ ಕಟ್ಟುನಿಟ್ಟಾದ ಕಂಟೈನ್‌ಮೆAಟ್ ವಲಯ ರಚಿಸಬೇಕು. ಎರಡನೆಯದಾಗಿ ನಾವು ಜನಸಂದಣಿಯನ್ನು ನಿಷೇಧಿಸಬೇಕು. ಮೂರನೆಯದಾಗಿ ನಾವು ಲಸಿಕೆಯನ್ನು ಹೆಚ್ಚಿಸಬೇಕು ಎಂದು ಅವರು ಹೇಳಿದರು.












