Monday, January 26, 2026

ಯುವಶಕ್ತಿ ಸೇವಾಪಥದ ಮೂಲಕ ಶ್ರೀದೇವಿ ಪುತ್ತೂರು ಆರೋಗ್ಯನಿಧಿ ಹಸ್ತಾಂತರ

ಪ್ರತಿಭಾವಂತ ವಿದ್ಯಾರ್ಥಿನಿ..ತನ್ನ ಭಾಷಣಗಳ ಮೂಲಕ ರಾಷ್ಟೀಯವಾದದ ಚಿಂತನೆಗಳನ್ನು ಸಮಾಜಕ್ಕೆ ಬಿತ್ತುತ್ತಿದ್ದ ಸಹೋದರಿ ಶ್ರೀದೇವಿ ಪುತ್ತೂರುರವರು ತೀವ್ರ ರಸ್ತೆ ಅಪಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದು ಸುಮಾರು 15 ಲಕ್ಷ ರೂ ಚಿಕಿತ್ಸಾವೆಚ್ಚದ ಅವಶ್ಯಕತೆಗಾಗಿ ಕುಟುಂಬ ಸದಸ್ಯರು ಸಹೃದಯಿ ಸಮಾಜದ ನೆರವನ್ನು ಬಯಸಿದ್ದರು..

ಆ ಪ್ರಯುಕ್ತ ತಕ್ಷಣ ಕಾರ್ಯಪ್ರವೃತ್ತವಾದ ಸಾಮಾಜಿಕ ಸೇವಾ ಸಂಸ್ಥೆ ಯುವಶಕ್ತಿ ಸೇವಾಪಥ ಶ್ರೀದೇವಿ ಪುತ್ತೂರು ಆರೋಗ್ಯ ನಿಧಿ ಯೋಜನೆಯನ್ನು ಕೈಗೆತ್ತಿಕೊಂಡು ಕೇವಲ 24 ಗಂಟೆಗಳಲ್ಲಿ ಸಮಾಜದ ದಾನಿಗಳಿಂದ ಸಾಮಾಜಿಕ ಜಾಲತಾಣದ ಮೂಲಕ 4,34,950 ರೂ ಸಂಗ್ರಹಿಸಿ ಶ್ರೀದೇವಿಯ ಹೆತ್ತವರಲ್ಲಿ ಹಸ್ತಾಂತರಿಸಿದೆ.

ಯುವಶಕ್ತಿ ಸೇವಾಪಥದ ಸದಸ್ಯರು ಮಂಗಳೂರು ಮಂಗಳಾ ಆಸ್ಪತ್ರೆಗೆ ತೆರಳಿ ಆರೋಗ್ಯ ನಿಧಿಯನ್ನು ಹಸ್ತಾಂತರಿಸಿದ್ದಾರೆ.

ಕಳೆದ ಪೆಬ್ರವರಿಯಲ್ಲಿ ನಡೆದ ಯುವಶಕ್ತಿ ಸೇವಾಪಥ ದ ಪ್ರಥಮ ವಾರ್ಷಿಕ ಸಂಭ್ರಮದ ಪ್ರಮುಖ ಭಾಷಣಗಾರ್ತಿಯಾಗಿ ಶ್ರೀದೇವಿ ಪುತ್ತೂರು ಭಾಗವಹಿಸಿದ್ದರು.

ಅಲ್ಪಾವಧಿಯಲ್ಲಿ ದೊಡ್ಡ ಮನಸ್ಸಿನಲ್ಲಿ ಸಹಕರಿಸಿದ ಸೇವಾಬಂಧುಗಳಿಗೆ ಯುವಶಕ್ತಿ ಸೇವಾಪಥ ವಂದನೆಗಳನ್ನು ಸಮರ್ಪಿಸುತ್ತದೆ

More from the blog

ಮಾಣಿಯಲ್ಲಿ ಹಿಂದೂ ಸಂಗಮ…

ಬಂಟ್ವಾಳ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ಪ್ರಯುಕ್ತ ಮಾಣಿ ಪೆರಾಜೆ ಬರಿಮಾರ್ ನೆಟ್ಲ ಮುಡ್ನೂರು, ಅನಂತಾಡಿ ಗ್ರಾಮಗಳನ್ನು ಒಳಗೊಂಡ ಮಾಣಿ ಮಂಡಲದ ಹಿಂದೂ ಸಂಗಮ ಕಾರ್ಯಕ್ರಮ ನೇರಳಕಟ್ಟೆ ಗಣೇಶ ನಗರದಿಂದ ಬೃಹತ್ ಶೋಭಾಯಾತ್ರೆ...

ಜಕ್ರಿಬೆಟ್ಟು : ಕಿಂಡಿ ಅಣೆಕಟ್ಟಿನಲ್ಲಿ ನೀರು ಸಂಗ್ರಹ ಆರಂಭ

ಬಂಟ್ವಾಳ: ಬಂಟ್ವಾಳದ ಜಕ್ರಿಬೆಟ್ಟುನಲ್ಲಿ ಜೀವನದಿ ನೇತ್ರಾವತಿ ನದಿಗೆ ಅಡ್ಡಲಾಗಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಸುಮಾರು 13.5. ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಸೇತುವೆ ಸಹಿತ ಕಿಂಡಿ ಅಣೆಕಟ್ಟು(ಬ್ರಿಡ್ಜ್ ಕಂ ಬ್ಯಾರೇಜ್)ಗೆ ಗೇಟ್ ಹಾಕಿ ನೀರು...

ಅಮ್ಮುoಜೆ : ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ..

ಬಂಟ್ವಾಳ : ಅಮ್ಮುoಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜಾತ್ರಾ ಮಹೊತ್ಸವವು ವಿಜೃಂಭಣೆಯಿಂದ ನಡೆಯಿತು. ಜ.25ರಂದು ಭಾನುವಾರ ಬಲಿ ಉತ್ಸವ ನಡೆಯಿತು. ಶ್ರೀಕ್ಷೇತ್ರ ಪೊಳಲಿಯ ಸುಬ್ರಮಣ್ಯ ತಂತ್ರಿಯವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನಡೆಯಿತು. ದೇವಳದ ಅರ್ಚಕ ನರೇಂದ್ರ ಭಟ್,...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...