Monday, February 10, 2025

ಕಲ್ಲಡ್ಕದ ಶ್ರೀರಾಮ ಪದವಿ ಕಾಲೇಜಿನಲ್ಲಿ ಯೋಗವಿಜ್ಞಾನದ ಪದವಿ

ಕಲ್ಲಡ್ಕ: ಶಿಕ್ಷಣವು ಇಂದು ಸರ್ವಸಾಮಾನ್ಯರನ್ನೂ ತಲುಪಿದೆ. ಒಂದು ಕಾಲದಲ್ಲಿ ವ್ಯಕ್ತಿಯೊಬ್ಬ ಪದವಿಯನ್ನು ಪಡೆಯುವುದೆಂದರೆ ಅದೊಂದು ಪ್ರತಿಷ್ಠೆಯ, ಸಾಧನೆಯ ಸಂಕೇತ. ಆದರೆ ಇಂದು ಕಾಲೇಜು ಶಿಕ್ಷಣವೂ ಕೈಗೆಟುಕದ ಸೊತ್ತೇನಲ್ಲ. ಕೇವಲ ಪದವೀಧರರಾಗುವುದರಿಂದ ಇಂದಿನ ಕಾಲಘಟ್ಟದಲ್ಲಿ ಏನೊಂದನ್ನೂ ಸಾಧಿಸಿದಂತಾಗುವುದಿಲ್ಲ. ಇದರೊಂದಿಗೆ ಆಧುನಿಕ ಜೀವನದ ಸವಾಲುಗಳನ್ನೆದುರಿಸಲು ಬೇಕಾದ ಆಧುನಿಕ ಹಾಗೂ ಮೌಲ್ಯ ಶಿಕ್ಷಣ ಇಂದಿನ ಅಗತ್ಯ.
1980ರ ದಶಕದಿಂದಲೇ ಶಿಕ್ಷಣದ ಜೊತೆಗೆ ಸಂಸ್ಕಾರ ಹಾಗೂ ಶಿಕ್ಷಣದಲ್ಲಿ ಭಾರತೀಯತೆ ಎಂಬ ಧ್ಯೇಯದಡಿಯಲ್ಲಿ ಪ್ರೌಢಶಾಲಾ ಹಂತದವರೆಗೆ ಶಿಕ್ಷಣ, ಭೋಜನ, ಸಮವಸ್ತ್ರ, ಓದುವ ಹಾಗೂ ಬರೆಯುವ ಪುಸ್ತಕಗಳನ್ನು ಉಚಿತವಾಗಿಯೇ ನೀಡುತ್ತಾ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದ ಕಲ್ಲಡ್ಕದ ಸುತ್ತಮುತ್ತಲ ಹಳ್ಳಿಗಳನ್ನು ರಾಜ್ಯ-ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ ಶ್ರೀರಾಮ ವಿದ್ಯಾಕೇಂದ್ರ.

 

ವಿದ್ಯಾಕೇಂದ್ರಕ್ಕೆ 30 ವರ್ಷಗಳು ತುಂಬಿದ ಹಿನ್ನಲೆಯಲ್ಲಿ 2009ರಲ್ಲಿ ಆರಂಭಗೊಂಡ ಶ್ರೀರಾಮ ಪದವಿ ಕಾಲೇಜಿಗೆ ಈ ಶೈಕ್ಷಣಿಕ ವರ್ಷದಲ್ಲಿ ದಶಮಾನ ಸಂಭ್ರಮ. ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಂಸ್ಕಾರಭರಿತ ಶಿಕ್ಷಣಕ್ಕೆ ಹೆಸರುವಾಸಿಯಾದ ಶ್ರೀರಾಮ ವಿದ್ಯಾಕೇಂದ್ರದ ಅಂಗಸಂಸ್ಥೆಯಾದ ಶ್ರೀರಾಮ ಪದವಿ ಕಾಲೇಜಿನಲ್ಲಿ ಈಗಾಗಲೇ ನೂರಾರು ಮಂದಿ ತಮ್ಮ ಜೀವನಕ್ಕೆ ಭದ್ರ ಅಡಿಪಾಯ ಹಾಕಿದ್ದಾರೆ. ಈಗಾಗಲೇ ಬಿ.ಎ., ಬಿ.ಕಾಂ. ಹಾಗೂ ಬಿ.ಎಸ್ಸಿ. ಪದವಿಗಳನ್ನು ಹೊಂದಿದ ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೊಳಪಟ್ಟ ಈ ಕಾಲೇಜಿನಲ್ಲಿ ಈ ಶೈಕ್ಷಣಿಕ ವರ್ಷದಿಂದ ಬಿಎ ಹಾಗೂ ಬಿಎಸ್ಸಿಯಲ್ಲಿ ಯೋಗವಿಜ್ಞಾನವನ್ನು ಬೋಧಿಸಲಾಗುವುದು.
ಯೋಗವಿಜ್ಞಾನವು ಜಗತ್ತಿಗೆ ಭಾರತದ ಕೊಡುಗೆ. ಇಂದು ಯೋಗವು ವಿಶ್ವಮನ್ನಣೆಯನ್ನು ಪಡೆದಿದೆ. ಅನೇಕ ರೋಗಗಳಿಗೆ ಯೋಗವೇ ರಹದಾರಿಯೆಂಬುದನ್ನು ಜಗತ್ತು ಇಂದು ಒಪ್ಪುತ್ತಿದೆ. ಯೋಗಕ್ಕೆ ವ್ಯಾಪಕವಾದ ಉದ್ಯೋಗವಕಾಶಗಳೂ ಜಗತ್ತಿನೆಲ್ಲೆಡೆ ಸೃಷ್ಟಿಯಾಗಿದೆ. ಹೀಗಿರುವ ಸಂದರ್ಭದಲ್ಲಿ ಯೋಗವಿಜ್ಞಾನವನ್ನು ಪದವಿಯಲ್ಲಿ ಒಂದು ವಿಷಯವಾಗಿ ಅಧ್ಯಯನ ಮಾಡಲು ಅವಕಾಶವಿರುವ ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಏಕೈಕ ಕಾಲೇಜು ಕಲ್ಲಡ್ಕದ ಶ್ರೀರಾಮ ಪ್ರಥಮದರ್ಜೆ ಕಾಲೇಜು. ಯೋಗವಿಜ್ಞಾನಕ್ಕೆ ಪೂರಕವಾದ ವಾತಾವರಣ, ಪರಿಸರ ದಿವಸ ಕೂಡಿದ 18 ಎಕರೆ ವಿಶಾಲವಾದ ಹಚ್ಚ ಹಸಿರಿನ ಸಸ್ಯರಾಶಿಯಿಂದ ಕಂಗೊಳಿಸುವ ನಮ್ಮ ಸಂಸ್ಥೆಯ ಆವರಣದಲ್ಲಿ ಯೋಗ ಬಿ.ಎ. ಹಾಗೂ ಬಿ.ಎಸ್ಸಿ.ಗೆ ಈಗಾಗಲೇ ದಾಖಲಾತಿ ಪ್ರಾರಂಭಗೊಂಡಿದೆ.

ಇವುಗಳೊಂದಿಗೆ ವಿದ್ಯಾರ್ಥಿಗಳನ್ನು ಮಾತುಗಾರರನ್ನಾಗಿ ರೂಪಿಸಲು, ಮಂಥನ ಹೆಸರಿನ ವೇದಿಕೆ, ಓದುವ ಹವ್ಯಾಸ ಬೆಳೆಸಲು ಪ್ರಜ್ಞಾನ ಹೆಸರಿನ ಸಾಹಿತ್ಯಿಕ ವೇದಿಕೆ, ಸಂಸ್ಕೃತಿಯ ಅಡಿಪಾಯ ಹಾಕಲು ಪ್ರದೀಪ್ತ ಸಾಂಸ್ಕೃತಿಕ ಸಂಘ, ಯಕ್ಷಗಾನ ತರಬೇತಿ, ಪರಿಸರ ಜಾಗೃತಿಗಾಗಿ ಪ್ರಕೃತಿ ಪರಿಸರ ಸಂಘ, ಎನ್ನೆಸ್ಸೆಸ್, ರೆಡ್‌ಕ್ರಾಸ್, ಭಾಷಾ ಬೆಳವಣಿಗೆಗೆ ಸಂಸ್ಕೃತ, ಕನ್ನಡ, ಇಂಗ್ಲೀಷ್ ಸಂಘಗಳು ಹೀಗೆ ಪ್ರತಿಭೆಗೆ ತಕ್ಕಂತೆ ಜೋಡಿಕೊಳ್ಳಲು ಹತ್ತು ಹಲವು ಸಂಘಗಳಿವೆ. 15,000ಕ್ಕೂ ಅಧಿಕ ಪುಸ್ತಕಗಳಿರುವ ಗ್ರಂಥಾಲಯ, ಒಂದೇ ಬಾರಿಗೆ 100ಕ್ಕೂ ಹೆಚ್ಚು ಮಂದಿ ಕುಳಿತು ಅಧ್ಯಯನ ಮಾಡಬಹುದಾದ ವಾಚನಾಲಯ, ಕಾಲೇಜಿನ ವಾತಾವರಣದಲ್ಲೇ ಬಾಲಕ ಬಾಲಕಿಯರಿಗೆ ಹಾಸ್ಟೆಲ್ ಸೌಲಭ್ಯ ಅಲ್ಲದೇ ನೈತಿಕ ಆಧ್ಯಾತ್ಮಿಕ ವಿಕಾಸಕ್ಕಾಗಿ ಪ್ರತಿನಿತ್ಯ ಧ್ಯಾನ, ಪ್ರಾಣಾಯಾಮ ಸಹಿತ ಪ್ರಾರ್ಥನೆ ಇತ್ಯಾದಿಗಳು ನಮ್ಮ ವಿಶೇಷತೆಗಳು.
ಅನುಭವಿ ಉಪನ್ಯಾಸಕರಿಂದ, ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಒದಗಿಸಲು ಉದ್ಯೋಗ ಮಾಹಿತಿ ಕೇಂದ್ರ ಹಾಗೂ ರಾಷ್ಟ್ರಪ್ರಜ್ಞೆಯ ವಿಕಸನಕ್ಕಾಗಿ ರಾಷ್ಟ್ರೀಯ ವಿಚಾರಗಳ ವಿಚಾರಸಂಕಿರಣ, ಮಿಲಿಟರಿ ಶಿಕ್ಷಣ ನೀಡಲು ಮಿಲಿಟರಿ ಮಾರ್ಗದರ್ಶನ ಘಟಕ ಹಾಗೂ ಪದವಿ ವಿಭಾಗ ವಿದ್ಯಾರ್ಥಿಗಳೆಲ್ಲರಿಗೆ ಮಧ್ಯಾಹ್ನ ಭೋಜನ ವ್ಯವಸ್ಥೆ, ಕಂಪ್ಯೂಟರ್ ಶಿಕ್ಷಣ, ಆಪ್ತಸಂವಾದ, ಕೆರಿಯರ್ ಗೈಡೆನ್, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ, ರಾಜ್ಯ- ರಾಷ್ಟ್ರೀಯ ಮಟ್ಟದ ವಿಚಾರಸಂಕಿರಣದಲ್ಲಿ ವಿಷಯ ಮಂಡನೆ ಮಾಡುವಂತೆ ತಯಾರಿ, ಅಲ್ಲದೇ 1 ವಾರಗಳ ಕಾಲ ಆಸಕ್ತಿ ವಿದ್ಯಾರ್ಥಿಗಳಿಗೆ 3500/- ರೂ ಗಳಲ್ಲಿ ಭಾರತದರ್ಶನ ಎಂಬ ಹೆಸರಿನಲ್ಲಿ ಶೈಕ್ಷಣಿಕ ಪ್ರವಾಸ ಹಾಗೂ ರಾಜ್ಯ ರಾಷ್ಟ್ರ ಮಟ್ಟದ ಅನೇಕ ಗಣ್ಯರ ಗಮನ ಸೆಳೆದ ಕ್ರೀಡೋತ್ಸವದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ.
ಊರಿನಲ್ಲಿ ಕೃಷಿ ಮಾಡದೇ ಪಾಳು ಬಿದ್ದ ಗದ್ದೆಗಳನ್ನು ಉಳುಮೆ ಮಾಡಿ, ನೇಜಿ ನೆಟ್ಟು, ಕಳೆ ತೆಗೆದು ಗೊಬ್ಬರವಿಕ್ಕಿ, ಕಟಾವು ಮಾಡಿ ಭತ್ತದ ಬೆಳೆ ಪಡೆಯುವುದು ಹಾಗೂ ಅದರ ಹುಲ್ಲಿನಿಂದ ಕಾಲೇಜಿನ ಪಕ್ಕದಲೇ ಇರುವ ವಸುಧಾರಾ ಹೆಸರಿನ ಗೋಶಾಲೆಯ ನಿರ್ವಹಣೆ ಮಾಡುವುದು ಇತ್ಯಾದಿ ಜೀವನ ನಿರ್ವಹಣಾ ಭಾಗವನ್ನೂ ಆಸಕ್ತ ವಿದ್ಯಾರ್ಥಿಗಳಿಗೆ ಹೇಳಿಕೊಡಲಾಗುತ್ತದೆ. ಹೀಗೆ ವಿದ್ಯಾರ್ಥಿಯೊಬ್ಬನ ಸರ್ವತೋಮುಖ ಬೆಳವಣಿಗೆಗೆಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ವಿದ್ಯಾಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು ಈ ಶೈಕ್ಷಣಿಕ ವರ್ಷದ ದಾಖಲಾತಿ ಆರಂಭಗೊಂಡಿದೆ.

More from the blog

ಕೊಳ್ನಾಡು : ಬಾರೆಬೆಟ್ಟು ಮಂಟಮೆಯಲ್ಲಿ ಕಾಲಾವಧಿ ಜಾತ್ರೆ

ವಿಟ್ಲ : ಕೊಳ್ನಾಡು ಗ್ರಾಮದ ಕಾರಣಿಕದ ಪ್ರಸಿದ್ಧ ದೈವಕ್ಷೇತ್ರ 'ಬಾರೆಬೆಟ್ಟು ಮಂಟಮೆ'ಯ ಕಾಲಾವಧಿ ಜಾತ್ರೆಯು ವಿಜೃಂಭಣೆಯಿಂದ ಜರಗಿತು. ಶ್ರೀ ಮಲರಾಯಿ ಮತ್ತು ಬಂಟ ದೈವದ ದೈವದ ಕೊಟ್ಯದಾಯನ ನೇಮೋತ್ಸವ ನಡೆಯಿತು. ಇದೇ ಸಂದರ್ಭದಲ್ಲಿ ಶ್ರೀ ಮಲರಾಯಿ...

ಪಣೋಲಿಬೈಲು ಕ್ಷೇತ್ರದಲ್ಲಿ ಫೆ.12ರಿಂದ ಫೆ.16ರವರೆಗೆ ಅಗೇಲು ಸೇವೆ & ಕೋಲ ಸೇವೆ ಇಲ್ಲ

ಬಂಟ್ವಾಳ: ಸಜೀಪಮೂಡ ಗ್ರಾಮದ ಕಾರಣಿಕ ಕ್ಷೇತ್ರ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಫೆ.12ರಿಂದ ಫೆ.16ರವರೆಗೆ ಅಗೇಲು ಸೇವೆ ಮತ್ತು ಕೋಲ ಸೇವೆ” ಇರುವುದಿಲ್ಲ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ. ನಂದಾವರ ಶ್ರೀ ವಿನಾಯಕ ಶಂಕರ...

ಬೆಳ್ತಂಗಡಿ : ಗ್ರಾಮ ಆಡಳಿತಾಧಿಕಾರಿಗಳಿಂದ 2 ನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ

ಬೆಳ್ತಂಗಡಿ : ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳು ಮತ್ತು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಮೇರೆಗೆ ಫೆ. 10 ರಿಂದ ಬೆಳ್ತಂಗಡಿಯಲ್ಲಿ...

ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ನಡೆಯಿತು ಪೂರ್ವಭಾವಿ ಸಭೆ

ಬಂಟ್ವಾಳ:  ಶ್ರೀ ರಾಜರಾಜೇಶ್ವರಿ ದೇವಸ್ಥಾನ ಪೊಳಲಿ ಇಲ್ಲಿ ನಡೆಯುವ ಶತಚಂಡಿಕಯಾಗದ ಹಾಗೂ ಕುಪ್ಪೆಟ್ಟು ಬರ್ಕೆ ಕರ್ಪೆ ಪ್ರತಿಷ್ಠಾ ಮಹೋತ್ಸವದ ಬಗ್ಗೆ ಪೂರ್ವಭಾವಿ ಸಭೆಯು ಕಡೆಗುಂಡ್ಯ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್...