ಬೆಳ್ತಂಗಡಿ: ಧರ್ಮಸ್ಥಳದ ಶಾಂತಿವನದಲ್ಲಿರುವ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ ಅನುವರ್ತನಾ ಚಿಕಿತ್ಸಾ ಘಟಕವನ್ನು ಡಿ. ಹರ್ಷೇಂದ್ರ ಕುಮಾರ್ ಅವರು ಇಂದು (ನ.23) ಉದ್ಘಾಟಿಸಿದರು.


ಲೋಕಾಯುಕ್ತ ವಿಭಾಗದ ಜಿಲ್ಲಾ ನ್ಯಾಯಾಧೀಶ ಎಚ್.ಎ. ಮೋಹನ್, ಡಾ.ಶಿವಪ್ರಸಾದ್ ಶೆಟ್ಟಿ, ಡಾ.ಶಶಿಕಿರಣ್ ಡಿ, ಶಶಿಕಾಂತ್ ಜೈನ್ ಉಪಸ್ಥಿತರಿದ್ದರು. ಪಾದಗಳಿಗೆ ಮಸಾಜ್ ಮಾಡಿ ದೇಹದ ಅಂಗಗಳಿಗೆ ಹಾಗೂ ಮನಸ್ಸಿಗೆ ಮುದ ನೀಡುವ ಚಿಕಿತ್ಸಾ ಕ್ರಮವೇ ಅನುವರ್ತನಾ ಚಿಕಿತ್ಸೆ.

