ವಿಟ್ಲ: ವಿಟ್ಲ ಪಡ್ನೂರು ಗ್ರಾಮದ ಎತ್ತುಗಲ್ಲು, ದ. ಕ. ಜಿ. ಪಂ. ಕಿ. ಪ್ರಾ. ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಗಳ ಸಂಘವನ್ನು ರಚಿಸಲಾಯಿತು.

ವೇದಿಕೆಯಲ್ಲಿ ಗಡಿಯಾರ ಗುಡಿ ಶಶಿ ಭಟ್, ಪಡಾರು, ಪಂಚಾಯತ್ ವಾರ್ಡ್ ಸದಸ್ಯರಾದ ಶ್ರೀಮತಿ ಜಯಭಾರತಿ, ಶಾಲಾ SDMC ಅಧ್ಯಕ್ಷ ರಾದ ಪ್ರಮೀಳಾ. Y. ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಶಶಿ ಭಟ್ ಪಡಾರು ಅವರನ್ನು ಸರ್ವಾ ನುಮತದಿಂದ ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ಜಯಭಾರತಿ ಮತ್ತು ಉಪಾಧ್ಯಕ್ಷರಾಗಿ ವೆಂಕಪ್ಪ ಸಫಲ್ಯ ಹಾಗೂ ಹರಿಣಾಕ್ಷ ಚೆಂಬರಡ್ಕ, ಕಾರ್ಯದರ್ಶಿ ಯಾಗಿ ಕಿಶೋರ್ ಶೆಟ್ಟಿ ಪಡಾರು ಜತೆ ಕಾರ್ಯದರ್ಶಿಯಾಗಿ ರವಿಕೃಷ್ಣ ಭಟ್ ಎತ್ತುಗಲ್ಲು ಅವರನ್ನು ಆಯ್ಕೆ ಮಾಡಲಾಯಿತು.