ಬಂಟ್ವಾಳ: ಶಿಕ್ಷಣ, ರಕ್ಷಣೆ ಹಾಗೂ ಆರೋಗ್ಯ ಕ್ಷೇತ್ರದ ಸಾಧಕರನ್ನು ತನ್ನ ಕಾರ್ಯಕ್ರಮದಲ್ಲಿ ಗುರುತಿಸುವ ಮೂಲಕ ನೇರಳಕಟ್ಟೆಯ ವೈಸಿಜಿ ಸಂಘಟನೆ ಮಹತ್ತರ ಕಾರ್ಯ ನಡೆಸಿದೆ ಎಂದು ವಿಟ್ಲ ಅರಮನೆಯ ಕೃಷ್ಣಯ್ಯ ಕೆ. ಹೇಳಿದರು.
ನೇರಳಕಟ್ಟೆ ಶ್ರೀ ಕಲ್ಕುಡ ಕಲ್ಲುರ್ಟಿ ಜಾತ್ರೋತ್ಸವದ ಅಂಗವಾಗಿ ನೇರಳಕಟ್ಟೆ ಗಣೇಶ ನಗರದ ಯಂಗ್ ಚಾಲೆಂಜರ್ಸ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ(ರಿ.) ದ ಆಶ್ರಯದಲ್ಲಿ ಬುಧವಾರ ರಾತ್ರಿ ಹಮ್ಮಿಕೊಳ್ಳಲಾದ “ವೈಸಿಜಿ ನೈಟ್-2019” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯುವಮನಸ್ಸುಗಳು ಒಂದಾದರೆ ಸಾಮಾಜಿಕ ಅಭಿವೃದ್ಧಿಯ ಕಾರ್ಯ ನಡೆಸಲು ಸಾಧ್ಯ ಎಂಬುದನ್ನು ಇಲ್ಲಿನ ಯುವಕರ ತಂಡ ತೋರಿಸಿಕೊಟ್ಟಿದೆ , ಇಂತಹ ಕಾರ್ಯಕ್ರಮ ನಿರಂತರವಾಗಿರಲಿ ಎಂದರು.
ನಿವೃತ್ತ ಮುಖ್ಯೋಪಾಧ್ಯಾಯ ರಾಮಚಂದ್ರ ಮೂಲ್ಯ ಮಾತನಾಡಿ, ವೈಸಿಜಿ ತಂಡ ಮಾದರಿಯಾದ ಕಾರ್ಯಕ್ರಮದ ಮೂಲಕ ದೇಶಭಕ್ತಿ ಮೆರೆದಿದೆ ಎಂದು ಶ್ಲಾಘಿಸಿದರು.
ಚಲನಚಿತ್ರ ನಟ ಚಂದ್ರಹಾಸ ರೈ ಕರಿಂಕ,ಕಬಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸುಲೋಚನಾ ಡಿ.ರೈ, ಅಧ್ಯಾಪಕಿ ಕೋಮಲಾಂಗಿ ಶುಭಹಾರೈಸಿದರು.
ಉದ್ಯಮಿ ನಿತಿನ್ ಅರ್ಬಿ, ಅಂಗನವಾಡಿ ಶಿಕ್ಷಕಿ ವಸಂತಿ ಮುಖ್ಯ ಅತಿಥಿಯಾಗಿದ್ದರು.
ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕ ಜನಾರ್ಧನ ಕುಲಾಲ್, ನಾಟಿವೈದ್ಯ ಸಚ್ಚಿದಾನಂದ ಶೆಟ್ಟಿ, ಪ್ರಗತಿಪರ ಕೃಷಿಕ ಚಂದಪ್ಪ ಮಾಸ್ಟರ್ ರವರನ್ನು ಅತಿಥಿಗಳು ಸನ್ಮಾನಿಸಿದರು.
ಸಭಾಕಾರ್ಯಕ್ರಮದ ವೇದಿಕೆಗೆ ಹುತಾತ್ಮಯೋಧ ಎಚ್.ಗುರು ಮಂಡ್ಯ ಹೆಸರಿಡಲಾಗಿತ್ತು. ಇದೇ ಸಂದರ್ಭ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ತಿಲಕ್ ರಾಜ್ ಶೆಟ್ಟಿಯವರ ವೈದ್ಯಕೀಯ ಚಿಕಿತ್ಸೆಗೆ ಸಂಘದ ವತಿಯಿಂದ ನೆರವಿನ ಮೊತ್ತ ನೀಡಲಾಯಿತು.
ಸಂಘದ ಅಧ್ಯಕ್ಷ ವಿಶುಕುಮಾರ್ ಎನ್ , ಗೌರವಾಧ್ಯಕ್ಷ ಜಯಂತ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೌರವ ಕಾರ್ಯದರ್ಶಿಗಳಾದ ಶೀತಲ್ ಕೆ.ವಿ., ಮೋಹನ್ ಆಚಾರ್ಯ, ಉಪಾಧ್ಯಕ್ಷ ಪ್ರಶಾಂತ್ ಬಿ., ಕೋಶಾಧಿಕಾರಿ ಸತೀಶ್ ಆಚಾರ್ಯ, ಪದಾಧಿಕಾರಿಗಳಾದ ಲೋಕೇಶ್ ಆಚಾರ್ಯ, ಕಿರಣ್ ಕುಮಾರ್, ಹರೀಶ್, ಸುನಿಲ್,ಶರತ್ ಆಚಾರ್ಯ, ಗೌರೀಶ್,
ಗೌರವ ಸಲಹೆಗಾರರಾದ ಡಿ.ಕೆ.ಸ್ವಾಮಿ, ನಾಗರಾಜ ಶೆಟ್ಟಿ ಮಾಣಿ, ಚೇತನ್ ರೈ, ಜಗದೀಶ್ ಗೌಡ ಮತ್ತಿತರರು ಸಹಕರಿಸಿದರು.
ಗೌರವಸಲಹೆಗಾರ ಭೋಜನಾರಾಯಣ ಸ್ವಾಗತಿಸಿದರು. ಶಿಕ್ಷಕ ಗೋಪಾಲಕೃಷ್ಣ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಉಪೇಂದ್ರ ಆಚಾರ್ಯ ವಂದಿಸಿದರು.
ಸಭಾಕಾರ್ಯಕ್ರಮಕ್ಕೆ ಮುನ್ನ ಶಾರದಾ ಕಲಾಶಾಲೆ ನೇರಳಕಟ್ಟೆ ತಂಡದ ಕಲಾವಿದರಿಂದ ನೃತ್ಯಸಂಭ್ರಮ ಹಾಗೂ ಸಭಾಕಾರ್ಯಕ್ರಮದ ಬಳಿಕ ನಮ್ಮ ಕಲಾವಿದೆರ್ ಬೆದ್ರ ತಂಡದಿಂದ “ಪಾಂಡುನ ಅಲಕ್ಕ ಪೋಂಡು” ತುಳು ಹಾಸ್ಯ ನಾಟಕ ನಡೆಯಿತು.