ಬಂಟ್ವಾಳ: ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾ.ಪಂ.ವ್ಯಾಪ್ತಿಯ ನಲ್ಕೆಮಾರ್ ಶಾಲೆಯಲ್ಲಿ ಮತದಾನದ ಯಂತ್ರ ಕೆಟ್ಟುಹೊಗಿದ್ದು ಮತದಾನ ಪ್ರಕ್ರಿಯೆ ಇನ್ನೂ ಕೂಡಾ ಆರಂಭವಾಗಿಲ್ಲ.
ಭಾಗ ಸಂಖ್ಯೆ 52, ಕ್ರ.ಮ.ಸಂಖ್ಯೆ 328 ಬೂತ್ ನ ಒಂದು ಕೊಠಡಿಯ ಮತಯಂತ್ರ ಕೆಟ್ಟುಹೊಗಿದ್ದು ಮತದಾನಕ್ಕಾಗಿ ಬಂದ ವರು ಕೆಲವರು ಕಾದು ಕಾದು ಸುಸ್ತಾದರೆ ಇನ್ನು ಹಿರಿಯ ವ್ಯಕ್ತಿಗಳು ವಾಪಾಸು ಮನೆಗೆ ಹೋಗುವಂತಾಯಿತು.
ಕೂಲಿ ಕೆಲಸ ಸಹಿತ ಇತರ ಕಡೆಗಳಿಗೆ ಕೆಲಸಕ್ಕೆ ತೆರಳುವ ಜನರು ಮತ ಚಲಾಯಿಸಿ ಹೋಗುವ ಯೋಚನೆಯಿಂದ ಏಳು ಗಂಟೆಗೆ ಬಂದು ಸರತಿ ಸಾಲಿನಲ್ಲಿ ನಿಂತಿದ್ದರು. ಆದರೆ ಮತಯಂತ್ರ ಕೆಟ್ಟುಹೊಗಿದ್ದರಿಂದ ಅವರಿಗೆ ಸಾಕಷ್ಟು ತೊಂದರೆಯಾಯಿತು.
