ಬಂಟ್ವಾಳ: ಬೆಂಜನಪದವು ಸರಕಾರಿ ಪದವಿಪೂರ್ವ ಕಾಲೇಜು ಬೆಂಜನಪದವು ಪ್ರೌಢಶಾಲಾ ವಿಭಾಗದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಉಚಿತ ಯಕ್ಷಗಾನ ನಾಟ್ಯ ತರಗತಿ ಉದ್ಘಾಟನೆ ಗೊಂಡಿತು.


ಫೌಂಡೇಶನ್ ನ ಸಂಚಾಲಕರಾದ ಶ್ರೀ ವಾಸುದೇವ ಐತಾಳ್ ದೀಪ ಪ್ರಜ್ವಲಿಸಿ ಉದ್ಘಾಟನೆ ಮಾಡಿದರು. ಯಕ್ಷಗಾನ ಕಲೆಯ ವೈಶಿಷ್ಟ್ಯ ಮತ್ತು ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಕೆಯಿಂದಾಗಬಹುದಾದ ಪ್ರಯೋಜನಗಳ ಕುರಿತು ಅವರು ಮಾತನಾಡಿದರು.
ಯಕ್ಷಗಾನ ಅಭ್ಯಾಸ ಪಠ್ಯಪುಸ್ತಕ ವನ್ನು ಶಾಲೆಯ ಗ್ರಂಥಾಲಯ ಕ್ಕೆ ಕೊಡುಗೆಯಾಗಿ ನೀಡಿದರು ಅಮ್ಮುಂಜೆ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಶಾಲಾಭಿವೃದ್ಧಿ ಸಮಿತಿ ಯ ಅಧ್ಯಕ್ಷರು ಆಗಿರುವ ಶ್ರೀ ವಾಮನ ಆಚಾರ್ಯ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಅಧ್ಯಾಪಕ ಅನಂತಪದ್ಮನಾಭ ಶಾಲಾಭಿವೃದ್ಧಿ ಸಮಿತಿ ಯ ಸದಸ್ಯರಾದ ಶ್ರೀಮತಿ ಶಾಂತಿ ,ಯಕ್ಷಗುರು ಶ್ರೀ ಸಂದೇಶ್ ಮರಕಡ ವೇದಿಕೆಯಲ್ಲಿ ಉಪಸ್ಥಿತರಿದ್ದರು
ಶ್ರೀಮತಿ ಪ್ರತಿಭಾ ಭಟ್ ಸ್ವಾಗತಿಸಿದರು.ಶ್ರೀಮತಿ ಶಾಲಿನಿ ತಂತ್ರಿ ವಂದಿಸಿದರು. ಶ್ರೀಮತಿ ಶಾಂತಿ ನಿರೂಪಿಸಿದರು.ಶಿಕ್ಷಕರಾದ ಉಷಾಲತಾ ,ಡೋಮಿ. ಪಿ. ಉಪಸ್ಥಿತರಿದ್ದರು.












