Wednesday, June 25, 2025

ಬಿ.ಸಿ.ರೋಡಿನಲ್ಲಿ ಯಕ್ಷಗಾನದ ವೈಭವ

ಡಿಸೆಂಬರ್ ತಿಂಗಳ ಈ ಕೊರೆಯುವ ಚಳಿಯಲ್ಲಿ ಬೀಳುವ ಮಂಜಿನ ಹನಿಗಳನ್ನು ಮೀರಿ ಬಿ.ಸಿ.ರೋಡು ಮತ್ತು ಇಲ್ಲಿನ ಆಸುಪಾಸಿನಲ್ಲಿ ಚೆಂಡೆಯ ಅಬ್ಬರದ ಧ್ವನಿ ಮೊಳಗಲಿದೆ. ಎಲ್ಲರ ಕಿವಿಗಳಿಗೂ ಭಾಗವತರ ಏರಿಳಿತದ ಆ ಸುಮಧುರ ಗಾನ ಶೈಲಿಯು ಅಲೆ ಅಲೆಯಾಗಿ ಕೇಳಿಬರಲಿದೆ. ಹೌದು ಕರಾವಳಿಯ ಗಂಡು ಕಲೆ ಯಕ್ಷಗಾನ ಈ ಡಿಸೆಂಬರ್ 15 ರಿಂದ ಅಲ್ಲಲ್ಲಿ ನಡೆಯುತ್ತಾ ಇರುವುದು ಒಂದು ರೀತಿಯಲ್ಲಿ ಯಕ್ಷಗಾನ ಪ್ರಿಯರಿಗೆ ರಸದೌತಣವಿದ್ದಂತೆ.

ವೃತ್ತಿಪರ ಮೇಳ ಮತ್ತು ಸಣ್ಣಪುಟ್ಟ ತಂಡಗಳು ತಮ್ಮನ್ನು ತಾವು ಯಕ್ಷಗಾನದಲ್ಲಿ ತೊಡಗಿಸಿಕೊಂಡು ಪ್ರೇಕ್ಷಕರಿಗೆ ಹಬ್ಬದ ವಾತಾವರಣವನ್ನುಂಟು ಮಾಡುವುದಂತೂ ನಿಜ. ಹಿಂದೊಂದು ಕಾಲದಲ್ಲಿ ಜನರು ಯಕ್ಷಗಾನ ನೋಡುವುದಕ್ಕಾಗಿ ದೂರ ದೂರ ಹೋಗುತ್ತಿದ್ದರು. ಆದರೆ ಈಗ ಬಹಳ ಹತ್ತಿರಲ್ಲಿಯೇ ಯಕ್ಷಗಾನಗಳನ್ನು ನೋಡುವ ಅವಕಾಶ ಜನರಿಗೆ ಲಭಿಸುತ್ತಿದೆ.

ಇದೇ ರೀತಿ ಡಿ.15 ರಿಂದ ಡಿ.21 ವರೆಗೆ ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಪ್ತಾಯ ಸಮಿತಿಯವರ ವತಿಯಿಂದ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿ ಎಡನೀರು ಮೇಳದವರಿಂದ ಮೆಲ್ಕಾರ್ ಆರ್.ಕೆ. ಎಂಟರ್‌ಪ್ರೈಸಸ್‌ನ ಎದುರುಗಡೆ ಯಕ್ಷಗಾನ ಸಪ್ತಾಹ ನಡೆಯಲಿದೆ. ಗಿರಿಜಾ ಕಲ್ಯಾಣ-ತಾರಕಾಸುರ ವಧೆ, ಶರಸೇತು-ಸುಭದ್ರಾ ಕಲ್ಯಾಣ, ಕನಕಾಂಗಿ ಕಲ್ಯಾಣ, ಅತಿಕಾಯ-ಇಂದ್ರಜಿತು, ಮಾಗಧ ವಧೆ-ಪುರುಷಾಮೃಗ-ರಕ್ತರಾತ್ರಿ, ವಸ್ತ್ರಾಪಹಾರ-ಗದಾಪರ್ವ, ದ್ರೌಪಧಿ ಪ್ರತಾಪ ಹೀಗೆ 7 ದಿನಗಳು ನಡೆಯುತ್ತಿದೆ.

ಡಿಸೆಂಬರ್ 22ರಂದು ಬಿ.ಸಿ.ರೋಡಿನಲ್ಲಿ ಅಯ್ಯಪ್ಪ ಭಕ್ತವೃಂದದವರ ವತಿಯಿಂದ ಸುಂಕದಕಟ್ಟೆ ಮೇಳದವರಿಂದ ಸತ್ಯ ದೈವೊಲು ಅದೇ ದಿನ ಬಡಗು ತಿಟ್ಟಿನ ಪೆರ್ಡೂರು ಮೇಳದವರಿಂದ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ಚಂದ್ರಹಾಸ-ಚಂದ್ರಾವಳಿ ವಿಲಾಸ ಟೆಂಟ್ ನೊಳಗೆ ಕೂತು ಯಕ್ಷಗಾನವನ್ನು ಸವಿಯಬಹುದು.

ಡಿಸೆಂಬರ್ 23ರಂದು ನರಿಕೊಂಬುವಿನ ವಿವೇಕ ಜಾಗೃತ ಬಳಗದವರ ವತಿಯಿಂದ ಹವ್ಯಾಸಿ ಕಲಾವಿದರಿಂದ ಕೃಷ್ಣಲೀಲೆ-ಕಂಸವಧೆ, ಡಿಸೆಂಬರ್ 24ರಂದು ಮೊಗರ್ನಾಡು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ತೆಂಕು-ಬಡಗು ಕಲಾವಿದರ ಅಪೂರ್ವ ಸಂಗಮದಲ್ಲಿ ಮದನಾಕ್ಷಿ-ತಾರಾವಳಿ, ವೀರಮಣಿ ಕಾಳಗ, ಗಧಾಯುದ್ಧ, ದ್ರೌಪದಿ ಪ್ರತಾಪ ಯಕ್ಷಗಾನ ನಡೆಯಲಿದೆ.

ಇವಿಷ್ಟು ಯಕ್ಷಗಾನದ ಬಗ್ಗೆಯಾದರೆ ಇನ್ನೊಂದೆಡೆ ಡಿಸೆಂಬರ್ 23ರಿಂದ 30ರ ವರೆಗೆ ಕರಾವಳಿ ಕಲೋತ್ಸವ ನಡೆಯಲಿದ್ದು ಈ ವೇದಿಕೆಯಲ್ಲಿ ನಾಟಕ ಸ್ಪರ್ಧೆ, ಫಿಲ್ಮ್ ಡ್ಯಾನ್ಸ್ ಸ್ಪರ್ಧೆ, ಚೆಂಡೆ ಸ್ಪರ್ಧೆಗಳು ನಡೆಯುವುದರ ಜೊತೆಗೆ ಬೇರೆ ಬೇರೆ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಕಲಾಪ್ರಿಯರಿಗೆ ಎಲ್ಲ ರೀತಿಯಿಂದಲೂ ಸಂತೋಷವನ್ನುಂಟು ಮಾಡುವುದರಲ್ಲಿ ಸಂಶಯವಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಬಿ.ಸಿ.ರೋಡಿನಲ್ಲಿ ಇನ್ನು 12 ದಿನದಲ್ಲಿ ಸಾಂಸ್ಕೃತಿಕ ಜಾತ್ರೆಗೆ ಸಾಕ್ಷಿಯಾಗಲಿದೆ.

ಬಡಗು ಯಕ್ಷಗಾನಕ್ಕೆ ತುಡರ್ ಯಕ್ಷಮಿತ್ರೆರ್‌ರ ಸೇವೆ
ಕಳೆದ ಕೆಲವು ವರ್ಷಗಳಿಂದ ಬಿ.ಸಿ.ರೋಡಿನಲ್ಲಿ ಬಡಗುತಿಟ್ಟಿನ ಯಕ್ಷಗಾನವನ್ನು ‘ತುಡರ್ ಯಕ್ಷ ಮಿತ್ರೆರ್’ ಸಂಘಟನೆ ಬಡಗುತಿಟ್ಟು ಯಕ್ಷಗಾನವನ್ನು ನೋಡುವ ಅವಕಾಶ ಮಾಡಿಕೊಡಬೇಕೆಂಬ ಉದ್ದೇಶದಿಂದ ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಇವರಿಂದ ಯಕ್ಷಗಾನ ಬಯಲಾಟವನ್ನು ನಡೆಸುತ್ತಿದ್ದಾರೆ. ನಾಗವಲ್ಲಿ, ಶಂಕರಾಭರಣ, ಕ್ಷಮಯಾಧರಿತ್ರಿ, ಅಹಂಬ್ರಹ್ಮಾಸ್ಮಿ ಎಂಬ ಯಕ್ಷಗಾನ ಪ್ರಸಂಗಗಳನ್ನು ಮಾಡಿಸಿ ಆ ಮೂಲಕ ಬಡಗಿನ ನಾಟ್ಯ, ಅವರ ಶೈಲಿಯು ಬಂಟ್ವಾಳ ತಾಲೂಕಿನ ಯಕ್ಷಗಾಭಿಮಾನಿಗಳಿಗೆ ಪರಿಚಯಿಸಿದ್ದಾರೆ ಎನ್ನುವುದು ಹೆಮ್ಮೆಯ ಸಂಗತಿ.

More from the blog

ವೀರಕಂಭ ಗ್ರಾಮದ ರೈತರಿಗೆ ಕೃಷಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಬಂಟ್ವಾಳ ತಾಲೂಕು 2025-26 ನೇ ಸಾಲಿನ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆಯಡಿ ರೈತರಿಗೆ ಕೃಷಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ...

ಆಕ್ಸಿಯಂ-4 ಉಡಾವಣೆ ಯಶಸ್ವಿ – ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತರಿಕ್ಷಯಾನ ಶುರು..

ಆಕ್ಸಿಯಮ್ 4 ಮಿಷನ್ ಬುಧವಾರ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ. ಮಧ್ಯಾಹ್ನ ಭಾರತೀಯ ಕಾಲಮಾನ 12.01ಕ್ಕೆ ಆಕ್ಸಿಯಮ್-4 ಬಾಹ್ಯಾಕಾಶ ಯೋಜನೆಯ ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್ಎಕ್ಸ್ ಫಾಲ್ಕನ್-9 ನೌಕೆ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ...

Rain Alert : ರಾಜ್ಯದಲ್ಲಿ ಮುಂಗಾರು ಚುರುಕು – ಕರಾವಳಿ ಸೇರಿ ಹಲವೆಡೆ 3 ದಿನ ಭಾರೀ ಮಳೆ ಸಾಧ್ಯತೆ..

ಮಂಗಳೂರು : ಕರ್ನಾಟಕದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮುಂಗಾರು ಚುರುಕುಗೊಂಡಿದೆ. ಕರಾವಳಿ ಸೇರಿ ಹಲವೆಡೆ ಧಾರಾಕಾರ ಮಳೆಯಾಗುವ ಸಾಧ್ಯತೆ ಇದ್ದು, 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮುಂಗಾರು ಆರಂಭವಾಗಿ 15 ದಿನಗಳು ಕಳೆದರೂ...

ರಾಜ್ಯ ಮಟ್ಟದ ಸಾಹಿತ್ಯ ಸ್ಪರ್ಧೆಯ ಬಹುಮಾನ ವಿತರಣೆ

ಬಂಟ್ವಾಳ : ಕವಿ‌, ಸಾಹಿತಿ, ಸಂಘಟಕ ಯುವವಾಹಿನಿಯ ಸಲಹೆಗಾರ ಬಿ ತಮ್ಮಯ ನೆನಪಿನ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆ ಆಯೋಜಿಸಲಾತ್ತು. ಈ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಹೊಸಪೇಟೆ , ವಿಜಯನಗರ, ಬೆಂಗಳೂರು, ಚಿತ್ರದುರ್ಗ,...