ವಿಟ್ಲ: ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ರಿ. ಮಂಗಳೂರು ಇದರ ವಿಟ್ಲ ಘಟಕದ ಚತುರ್ಥ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಜರುಗಿತು.

ವಿಟ್ಲ ಘಟಕದ ಗೌರವಾಧ್ಯಕ್ಷರಾದ ಶ್ರೀ ಕೃಷ್ಣಯ್ಯ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಪ್ರಧಾನ ಕಾರ್ಯದರ್ಶಿ ಪೂವಪ್ಪ ಶೆಟ್ಟಿ ಅಳಿಕೆ, ಪದಾಧಿಕಾರಿಗಳಾದ ಕೊರಗಪ್ಪ ಶೆಟ್ಟಿ ಪಟ್ಲಗುತ್ತು, ಬಾಲಕೃಷ್ಣ ಶೆಟ್ಟಿ ಬೇoಗ್ರೋಡಿ, ಅರವಿಂದ ರೈ ಮೂರ್ಜೆಬೆಟ್ಟು, ಭಾಸ್ಕರ ಶೆಟ್ಟಿ, ಸಂಜೀವ ಪೂಜಾರಿ ಗಜಾನನ, ಕೇಶವ ಶೆಟ್ಟಿ ನಡುವಳಚ್ಚಿಲ್, ಶಾಂತಾರಾಮ ಶೆಟ್ಟಿ ಬೆಂಗ್ರೋಡಿ ಮತ್ತಿತರರು ಉಪಸ್ಥಿತರಿದ್ದರು.