ಸರಪಾಡಿ: ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಕೇಸರಿ ಯುವಕ ಮಂಡಲದ ಆಶ್ರಯದಲ್ಲಿ ಯಕ್ಷಗಾನ ನ್ರತ್ಯ ತರಭೇತಿ ಕೇಂದ್ರವು ಇಂದು ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಇವರಿಂದ ಉದ್ಘಾಟಿಸಲ್ಪಟ್ಟಿತು. ಅವರು ಮಾತಾಡುತ್ತಾ ಕಲಿಕಾ ಆಸಕ್ತರು ಶ್ರದ್ದೆ ಹಾಗೂ ಶಿಸ್ತಿನಿಂದ ಕಲಿಯುವಂತ ವಾತಾವರಣ ಸೃಷ್ಠಿ ಮಾಡಬೇಕು ಪ್ರೇರಣೆ ನೀಡುವ ಸಮರ್ಥ ಗುರುವಿನಿಂದ ಕಲಿಯಬೇಕು.ಕಲಿಯುವವ ಮೊದಲು ಉತ್ತಮ ಪ್ರೇಕ್ಷಕನಾದರೆ ಅವನೇ ಉತ್ತಮಕಲಾವಿದ ನಾಗುತ್ತಾನೆ ಎಂದು ಹೇಳಿದರು. ವೇದಿಕೆಯಲ್ಲಿ ಯುವಕ ಮಂಡಲದ ಅಧ್ಯಕ್ಷ ಹರಿಪ್ರಸಾದ ಶೆಟ್ಟಿ,ಪಡ್ಡಾಯಿ ಮಜಲು, ಮಣಿನಾಲ್ಕೂರು ಸೇವಾ ಸಹಕಾರಿ ಸಂಘದ ನಿರ್ದೇಶಕ ವಿಶ್ವನಾಥ ಪೂಜಾರಿ ಬೆಂಗತ್ಯಾರು,ಬಿ ಜೆ ಪಿ ನಾಯಕ ಆನಂದ ಶೆಟ್ಟಿ ಬಾಚಕೆರೆ, ರಾಜೇಂದ್ರ ಪೂಜಾರಿ ಕಡಮಜೆ, ಕಿಶೋರ್ ಕುಮಾರ್ ಹಠಡಡ್ಕ,ಮತ್ತು ತರಬೇತುದಾರ ಶಶಿಧರ ಬಾಚಕೆರೆ ಉಪಸ್ಥಿತರಿದ್ದರು. ಕಾರ್ಯಕ್ರಮ ಆಯೋಜಕ
ಪುರುಷೋತ್ತಮ ಪೂಜಾರಿ ಮಜಲು ನಿರೂಪಿಸಿದರು.














