ಬಂಟ್ವಾಳ ಹೋಟೆಲ್ ರಂಗೋಲಿಯ ಹೊರಾಂಗಣದಲ್ಲಿ ಯಕ್ಷಮಿತ್ರರು ಕೈಕಂಬ ಬಿ. ಸಿ. ರೋಡು ಆಶ್ರಯದಲ್ಲಿ 15 ನೇ ವರ್ಷದ ಯಕ್ಷಗಾನ ಕಾರ್ಯಕ್ರಮ ನಡೆಯಲಿದ್ದು ಹನುಮಗಿರಿ ಮೇಳದವರಿಂದ ನಮೋ ರಘುವಂಶ ದೀಪ ಎಂಬ ಪ್ರಸಂಗ ಪ್ರದರ್ಶನಗೊಳ್ಳಲಿದೆ.

ಮಾರ್ಚ್ 24 ರಂದು ಸಂಜೆ 5ರಿಂದ ರಾತ್ರಿ 10ರವರೆಗೆ ಯಕ್ಷಗಾನ ನಡೆಯಲಿದ್ದು. ಸನ್ಮಾನ ಕಾರ್ಯಕ್ರಮ ನೆರವೇರಲಿದೆ.ಕಲಾವಿದ ದಿವಾಕರ ರೈ ಸಂಪಾಜೆ ಅವರನ್ನು ಸನ್ಮಾನಿಸಲಾಗುವುದು. ಶ್ರೀಚಂದ್ರಹಾಸ ರೈ ಬಾಲಾಜಿ ಬೈಲು ಅವರು ಸನ್ಮಾನ ಕಾರ್ಯ ನೆರವೇರಿಸುವರು.
ಅಥಿತಿಗಳಾಗಿ ಡಾ.ಅಜಕ್ಕಲ ಗಿರೀಶ್ ಭಟ್.ಮಾಜಿ ಅಧ್ಯಕ್ಷರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಭಾಗವಹಿಸುವರು ಎಂದು ಯಕ್ಷಮಿತ್ರರು ಕೈಂಕಬ ಪ್ರಕಟಣೆ ತಿಳಿಸಿದೆ