ಬಂಟ್ವಾಳ: ಎಲ್ಲಾ ಜೀವರಾಶಿಗಳ ಜೀವ ಜಲ ನೀರಿನ ಸಧ್ಸಳಕೆ ಮತ್ತು ನೀರಿಂಗಿಸುವ ಕ್ರಮದ ಮೂಲಕ ನೀರನ್ನು ಕಾಪಾಡಬೇಕೆಂದು ರೋಟರಿ ವಲಯ ಕಾರ್ಯದರ್ಶಿ ನಾರಾಯಣ ಹೆಗ್ಡೆ ಹೇಳಿದರು. ಕಲುಷಿತ ನೀರಿನಿಂದ ಸಾಂಕ್ರಾಮಿಕ ಯೋಗದಿಂದ ತೊಂದರೆ ,ಜೀವ ಹಾನಿಯಾಗುತ್ತಿದೆ. ನಮ್ಮಲ್ಲಿ ನೀರಿನ ಸಂರಕ್ಷಣೆ ಮಾಡುವ ವಿಧಾನ ಅಳವಡಿಸಿಕೊಳ್ಳಲು ಅವಕಾಶ ಇದೆ. ರೋಟರಿ ಸಂಸ್ಥೆ ಯ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಅವರು ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ವತಿಯಿಂದ ರೋಟರಿ ಸಭಾಂಗಣ ಬಿ ಸಿ ರೋಡಿನಲ್ಲಿ ನಡೆದ ವಿಶ್ವ ಜಲ ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಉಮೇಶ್ ನಿರ್ಮಲ್ ವಿಶ್ವ ಜಲ ದಿನದ ಅಂಗವಾಗಿ ನರಿಕೊಂಬು ಗ್ರಾಮದ 10 ಅಂಗನವಾಡಿಗಳಿಗೆ ಶುದ್ಧ ಕುಡಿಯುವ ನೀರಿನ ಕೊಡುಗೆ ನೀಡುವ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಕಾರ್ಯದರ್ಶಿ ಜಯರಾಜ್ ಬಂಗೇರ ಉಪಸ್ತಿತರಿದ್ದರು.