Thursday, July 10, 2025

ನಾವು ಸಂವಿಧಾನಕ್ಕೆ ಗೌರವ ಕೊಟ್ಟಾಗಲೇ ನೆಮ್ಮದಿಯ ಜೀವನ ಸಾಧ್ಯ: ಮಹಮ್ಮದ್ ಇಮ್ತಿಯಾಜ್ ಅಹಮದ್

ಬಂಟ್ವಾಳ: ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘ ಬಂಟ್ವಾಳ ಸಹಯೋಗದೊಂದಿಗೆ ವಿಶ್ವ ಸಾಮಾಜಿಕ ನ್ಯಾಯ ದಿನವನ್ನು ಗುರುವಾರ ಬಿ.ಸಿ.ರೋಡಿನಲ್ಲಿರುವ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಆಚರಿಸಲಾಯಿತು.
ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ, ಹಿರಿಯ ಸಿವಿಲ್ ನ್ಯಾಯಾಧೀಶ ಮಹಮ್ಮದ್ ಇಮ್ತಿಯಾಜ್ ಅಹಮದ್ ಅವರು ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಬದುಕುವ ಹಕ್ಕು ಇದ್ದು, ಸಾಮಾಜಿಕ ನ್ಯಾಯವೂ ದೊರಕುವಂತಾಗಬೇಕು. ನಾವು ಸಂವಿಧಾನಕ್ಕೆ ಗೌರವ ಕೊಟ್ಟಾಗಲೇ ನೆಮ್ಮದಿಯ ಜೀವನ ಸಾಧ್ಯ ಎಂದರು.
ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ದೀಪಕ್‌ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಶಿಲ್ಪಾ ಜಿ.ತಿಮ್ಮಾಪುರ್, ಜಿಲ್ಲಾ ಕಾನೂನು ಸಮಿತಿಯ ಸೇವೆಗಳ ಪ್ರಾಧೀಕಾರದ ಸದಸ್ಯ ಕೆ.ರಮೇಶ್ ಉಪಾಧ್ಯಾಯ, ಸಹಾಯಕ ಸರಕಾರಿ ಅಭಿಯೋಜಕ ಶೌಕತ್ ಆಲಿ ಭಾಗವಹಿಸಿದ್ದರು.
ಸಂಪನ್ಮೂಲ ವ್ಯಕ್ತಿ ನ್ಯಾಯವಾದಿ ಶಿವಪ್ರಕಾಶ್ ಉಪನ್ಯಾಸ ನೀಡಿದರು. ನ್ಯಾಯವಾದಿ ರವೀಂದ್ರ ಕುಕ್ಕಾಜೆ ಸ್ವಾಗತಿಸಿದರು. ನ್ಯಾಯವಾದಿ ನರೇಂದ್ರನಾಥ್ ಭಂಡಾರಿ ವಂದಿಸಿದರು.

More from the blog

Guru Purnima : ಭಾರತೀಯ ಜನತಾ ಪಾರ್ಟಿ ವತಿಯಿಂದ ಗುರುವಂದನಾ ಕಾರ್ಯಕ್ರಮ..

ಬಂಟ್ವಾಳ : ಜುಲೈ 10 ಗುರುವಾರ ಗುರುಪೂರ್ಣಿಮೆಯಂದು, ಭಾರತೀಯ ಜನತಾ ಪಾರ್ಟಿ ವತಿಯಿಂದ 117ನೇ ಬೂತ್ ನಲ್ಲಿ ಗುರುಗಳನ್ನು ಗುರುತಿಸಿ ಅವರ ಮನೆಗೆ ಹೋಗಿ ಗೌರವಿಸುವ ಗುರುವಂದನಾ ಕಾರ್ಯಕ್ರಮ ನಡೆಯಿತು. ಎಲಬೆ ಪೂವಪ್ಪ ಪೂಜಾರಿಯವರ...

ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮುಂದಿನ ಅಧಿವೇಶನದಲ್ಲೇ ಮಸೂದೆ : ಗೃಹ ಸಚಿವ ಜಿ. ಪರಮೇಶ್ವರ್..

ಮಂಗಳೂರು : ಸುಳ್ಳು ಸುದ್ದಿಗಳ ಹಾವಳಿ ಮತ್ತು ಊಹಾಪೋಹದ ಸುದ್ದಿಗಳ ಹಾವಳಿ ಮಿತಿ ಮೀರುತ್ತಿದೆ. ಈ ಹಿನ್ನಲೆಯಲ್ಲಿ ಸುಳ್ಳು ಸುದ್ದಿ ಹರಡುವುದು ಹಾಗೂ ದ್ವೇಷ ಭಾಷಣ ಮಾಡುವವರ ವಿರುದ್ಧ ಮುಂದಿನ ಅಧಿವೇಶನದಲ್ಲಿ ಮಸೂದೆ...

ರಾಜ್ಯದ ಜಿಲ್ಲಾ ಆಸ್ಪತ್ರೆಗಳಲ್ಲಿ ಗ್ರಂಥಾಲಯ ಸ್ಥಾಪನೆಗೆ ಸೂಕ್ತ ಕ್ರಮ – ದಿನೇಶ್ ಗುಂಡೂರಾವ್.. 

ಮಂಗಳೂರು : ರಾಜ್ಯದ ಜಿಲ್ಲಾ ಆಸ್ಪತ್ರೆಗಳಲ್ಲಿ ಗ್ರಂಥಾಲಯ ಸ್ಥಾಪನೆಗೆ ಸೂಕ್ತ ಕ್ರಮ ಕೈ ಗೊಳ್ಳಲಾಗುವುದುಎಂದು ಅರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಅವರು...

ಕಾರ್ಮಿಕರ ಅಖಿಲ ಭಾರತ ಮುಷ್ಕರದ ಅಂಗವಾಗಿ ಕಾರ್ಮಿಕರ ಪ್ರತಿಭಟನೆ..

ಬಂಟ್ವಾಳ : ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಹಾಗೂ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳಿಂದ ಅಖಿಲ ಭಾರತ ಮುಷ್ಕರದ ದ ಅಂಗವಾಗಿ ಜೆ.ಸಿ.ಟಿ.ಯು ಮತ್ತು ಸಂಯುಕ್ತ ಹೋರಾಟ...