ಬಾಯಿಯ ದುರ್ವಾಸನೆ ಶೇಕಡಾ 80% ಜನರಲ್ಲಿ ಕಂಡು ಬರುತ್ತದೆ. ಆದರೆ ಅದರ ಅರಿವು ಅವರಿಗಿರುವುದಿಲ್ಲ. ಬಾಯಿಯ ದುರ್ವಾಸನೆ ಎನ್ನುವುದು ಒಂದು ನಿರಂತರ ಸ್ಥಿರವಾದ ಅಸಹನೀಯವಾದ ಮತ್ತು ಅಸುಖಕರವಾದ ವಾಸನೆ ಬಾಯಿಯಿಂದ ಶ್ವಾಸೋಭ್ಯಾಸ ಮಾಡುವಾಗ ಹೊರಹೊಮ್ಮತ್ತಿರುತ್ತದೆ. ಸುಮಾರು 85% ಜನರಲ್ಲಿ ಈ ವಾಸನೆಗೆ ಪ್ರಮುಖಕಾರಣ ಬಾಯಿಯ ಶುಚಿತ್ವವನ್ನು ಸರಿಯಾಗಿ ಪಾಲಿಸದಿರುವುದೇ ಆಗಿರುತ್ತದೆ. ಇನ್ನು ಳಿದ 15 ರಿಂದ 20 ಶೇಕಡಾ ರೋಗಿಗಳಲ್ಲಿ ಆಂತರಿಕ ಅಂಗಾಂಗಗಳ ಮತ್ತು ಸಮಸ್ಯೆಗಳಿಂದ ಮತ್ತು ಬಾಹ್ಯ ಕಾರಣಗಳಿಂದ ಆಗಿರಬಹುದು.ನಾವು ತಿಂದ ಬಳಿಕ ಬಾಯಿಯನ್ನು ಸ್ವಚ್ಛಗೊಳಿಸದಿದ್ದಲ್ಲಿ ಆಹಾರ ಪದಾರ್ಥಗಳ ಮೇಲೆ ಬ್ಯಾಕ್ಟೀರಿಯಾಗಳು ವಿಜೃಂಭಿಸಿ ಆವಿಯಾಗುವ ಗಂಧಕ ಮತ್ತು ಜಲಜನಕದ ಸೆಲ್ಪೈಡ್ ಮುಂತಾದ ಅನಿಲಯುಕ್ತ ವಸ್ತುಗಳು ಉತ್ಪತ್ತಿಯಾಗಿ ಬಾಯಿಯ ವಾಸನೆಯನ್ನು ಹೆಚ್ಚು ಮಾಡಬಹುದು. ಈ ರೀತಿಯ ಸೂಕ್ಷ್ಮಣುಗಳು ವಸಡಿನ ಎಡೆಗಳಲ್ಲಿ ಕಂಡು ಬರಬಹುದು. ಅಲ್ಲದೆ ಹಲ್ಲಿನ ಸೂತ್ರ ಇರುವದಂತ ಪಾಚಿ ಅಥವಾ ದಂತಗಾರೆಗಳ ಮೇಲೆ ವಾಸ ಮಾಡುತ್ತಿರುತ್ತದೆ.
ಹಲವಾರು ಕಾರಣಗಳಿಂದ ಈ ಸೂಕ್ಷ್ಮಾಣು ಜೀವಿಗಳು ವೃದ್ಧಿಸಬಹುದು. ಅದಕ್ಕೆ ಪೂರಕವಾಗುವ ಅಂಶಗಳೆಂದರೆ :
1. ಜೊಲ್ಲುರಸಕಡಿಮೆಯಾಗುವುದು (ಜೊಲ್ಲುರಸ ಗ್ರಂಥಿಗಳ ರೋಗದಿಂದ)
2. ಜೊಲ್ಲುರಸಗಳಲ್ಲಿ ಕೆಲವೊಮ್ಮೆ ಹಲ್ಲು ಬೆಳೆದು, ಜೊಲ್ಲುರಸ ಸಾವಾಕಾಶವಾಗಿ ಸ್ರವಿಸದೇಇರಬಹುದು.
3. ಜೊಲ್ಲುರಸದ ಪ್ರಮಾಣ ಕಡಿಮೆಯಾಗುವುದು ಅಥವಾ ನಾವು ತೆಗೆದುಕೊಳ್ಳುವ ಔಷಧಿಗಳಿಂದ ಜೊಲ್ಲುರಸದಉತ್ಪಾದನೆಕಡಿಮೆಯಾಗಬಹುದು .
ಬಾಯಿ ಎಂಬುದು ನಮ್ಮದೇಹದ ಹೆಬ್ಬಾಗಿಲು ಇದ್ದಂತೆ. ನಾವು ಸೇವಿಸುವ ಆಹಾರ ಬಾಯಿಯ ಮುಖಾಂತರವೇ ದೇಹದ ಒಳಗೆ ಹೋಗಬೇಕು. ಬಾಯಿ ಎಂದರೆ ದೇಹದ ಆರೋಗ್ಯ ಕನ್ನಡಿ ಇದ್ದಂತೆ. ದೇಹದ ಆರೋಗ್ಯ ಸ್ಥಿತಿಯನ್ನು ಬಾಯಿಯ ಆರೋಗ್ಯದ ಸ್ಥಿತಿಯನ್ನು ಅನುಸರಿಸಿ ಅಂದಾಜಿಸಬಹುದು. ಆಂಗ್ಲ ಭಾಷೆಯಲ್ಲಿ ಬಾಯಿಯ ದುರ್ವಾಸನೆಯನ್ನು ಎಂದು ಕರೆಯುತ್ತಾರೆ. ಶೇಕಡಾ 80% ಜನರಲ್ಲಿ ಬಾಯಿಯ ದುರ್ವಾಸನೆಯ ತೊಂದರೆ ಇರುತ್ತದೆ. ಎಷ್ಟು ಬಾರಿ ಹಲ್ಲು ಶುಚಿಗೊಳಿಸಿದರೂ ಬಾಯಿಯಿಂದ ದುರ್ವಾಸನೆ ಬರುತ್ತಿರುತ್ತದೆ.ಇದರ ಯಾತನೆ ಅನುಭವಿಸಿದವರಿಗೆ ಮಾತ್ರಗೊತ್ತು. ಜೊತೆಗೆ ಇಂತಹ ವ್ಯಕ್ತಿಗಳ ಜೊತೆ ವ್ಯವಹರಿಸುವ ಅಥವಾ ಜೀವನ ನಡೆಸುವ ವ್ಯಕ್ತಿಗೆ ನಿಜಕ್ಕೂಒಂದು ಹಿಂಸೆ ಅಂದರೂತಪ್ಪಲ್ಲ. ಸಮಾಜದಲ್ಲಿ ಹಲವಾರು ಜನರ ಜೊತೆ ಬೆರೆಯುವ ವ್ಯಕ್ತಿಗಳಿಗೆ ಈ ರೀತಿಯ ತೊಂದರೆ ಇದ್ದಲ್ಲಿ ಖಂಡಿತವಾಗಿಯೂ ಮುಜುಗರ ಅನಿಸಬಹುದು.
ಬಾಯಿಯ ದುರ್ವಾಸನೆಗೆ ಕಾರಣಗಳು ಹಲವಾರು ಇರಬಹುದು. ಧೂಮಪಾನ ಮದ್ಯಪಾನ ಮತ್ತು ತಂಬಾಕುಯುಕ್ತ ಮಿಶ್ರಣಗಳು ತಿನ್ನುವ ವ್ಯಕ್ತಿಗೆ ಒಂದು ರೀತಿಯ ದುರ್ವಾಸನೆ ಇರು ತ್ತದೆ. ಈ ಚಟವಿಲ್ಲದವರಿಗೂ ಬಾಯಿಯ ದುರ್ವಾಸನೆ ಬರಬಹುದು. ಬಹಳಷ್ಟು ಜನರಲ್ಲಿ ಬಾಯಿಯ ವಾಸನೆಗೇ ಮುಖ್ಯಕಾರಣ, ಬಾಯಿಯನ್ನು, ಹಲ್ಲುಗಳನ್ನು ಮತ್ತು ನಾಲಗೆಗಳನ್ನು ಶುಚಿಗೊಳಿಸದೇ ಇರುವುದು ಮೇಲೆ ತಿಳಿಸಿದಂತೆ ನಾವು ನಮ್ಮ ಬಾಯಿಯನ್ನುಆಹಾರ ಪದಾರ್ಥ ಸೇವನೆಯ ಬಳಿಕ ಶುಚಿಗೊಳಿಸದಿದ್ದಲ್ಲಿ, ಸೂಕ್ಷ್ಮಾಣು ಜೀವಿಗಳಾದ ಬ್ಯಾಕ್ಟೀರಿಯಾಗಳು ಗಂಧಕಯುಕ್ತ ಆಮ್ಲಗಳನ್ನು ಉತ್ಪತ್ತಿ ಮಾಡಿ ಬಾಯಿಯ ದುರ್ವಾಸನೆಗೆ ಪರೋಕ್ಷವಾಗಿ ಕಾರಣವಾಗುತ್ತವೆ.
ಬಾಯಿಯ ವಾಸನೆಗೆ ಕಾರಣಗಳು
1. ಬಾಯಿಯನ್ನು ಶುಚಿಗೊಳಿಸದೇ ಇರುವುದು ದಿನಕ್ಕೆರಡು ಬಾರಿ ಬಾಯಿ, ಹಲ್ಲು, ನಾಲಗೆಯನ್ನು ಶುಚಿಗೊಳಿಸಲೇಬೇಕು.
2. ಉಪವಾಸ ಮಾಡುವುದು.
3. ಧೂಮಪಾನ, ಮದ್ಯಪಾನಮತ್ತುತಂಬಾಕು ಸೇವನೆ.
4. ಬಾಯಿಯಲ್ಲಿರುವ ಹುಳುಕು ಹಲ್ಲುಗಳಲ್ಲಿ ಆಹಾರ ಪದಾರ್ಥ ಸೇರಿಕೊಂಡು ವಾಸನೆ ಬರಬಹುದು.
5. ಶ್ವಾಸಕೋಶದ ಸೋಂಕುರೋಗ
6. ಕರುಳಿನ ಸೋಂಕುರೋಗ
7. ಜಠರದ ಸಮಸ್ಯೆ, ಗ್ಯಾಸ್ಟ್ರಿಕ್ ಸಮಸ್ಯೆ
8. ಸತತಔಷಧಿ ಸೇವನೆ
9. ಮಧುಮೇಹರೋಗಅಥವಾ ಸಕ್ಕರೆ ಕಾಯಿಲೆ
10. ವಸಡಿನ ಸುತ್ತ ಬೆಳೆದಿರುವ ದಂತ ಪಾಚಿ ಮತ್ತುದಂತಕಿಟ್ಟ
11. ಈರುಳ್ಳಿ, ಬೆಳ್ಳುಳ್ಳಿ ಮುಂತಾದಆಹಾರ ಪದಾರ್ಥಗಳ ಸೇವನೆಯಿಂದ ಬಾಯಿ ವಾಸನೆ ಬರಬಹುದು.
12. ಪಿತ್ತಕೋಶದರೋಗ, ಆಹಾರ ಪಚನವಾಗದಿರುವುದು, ಜಠರ ಸಂಬಂಧಿ ರೋಗಗಳಿಂದ ಬಾಯಿ ವಾಸನೆ ಬರಬಹುದು.
13. ಬಾಯಿಯಅರ್ಬುದರೋಗ (ಕ್ಯಾನ್ಸರ್) ಮತ್ತು ಶ್ವಾಸಕೋಶದಅರ್ಬುದ ರೋಗಗಳಿಂದ ಬಾಯಿ ವಾಸನೆ ಬರಬಹುದು.
14. ಮೂತ್ರಪಿಂಡದರೋಗ, ಯಕೃತ್ತಿನ ಕಾಯಿಲೆಗಳಿಂದಲೂ ಬಾಯಿಯ ವಾಸನೆ ಬರಬಹುದು.
15. ಸರಿಯಾದ ಪ್ರಮಾಣದಲ್ಲಿದ್ರವಾಹಾರ ಸೇವಿಸದೇಇರುವುದರಿಂದಲೂ ಬಾಯಿಯ ವಾಸನೆ ಬರಬಹುದು.
16. ಆಹಾರ ವಿಭಜನಾವಾಗದೆಇರುವಂತಹ ಕರುಳಿನ ರೋಗಗಳು ಮತ್ತು ಅನ್ನನಾಳದ ರೋಗಗಳಿಂದ ಬಾಯಿಯ ವಾಸನೆ ಬರಬಹುದು.
17. ಮಾನಸಿಕ ವೈಕಲ್ಯ ಹೊಂದಿದ ವ್ಯಕ್ತಿಗಳು ಮತ್ತು ನರದದೌರ್ಬಲ್ಯ ಹೊಂದಿದ ವ್ಯಕ್ತಿಗಳು ಬಾಯಿಯ ಶುಭೃತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗದೇಇದ್ದಾಗ ಬಾಯಿಯದುರ್ವಾಸನೆ ಬರಬಹುದು.
ತಡೆಗಟ್ಟುವುದು ಹೇಗೆ ?
1. ಬಾಯಿಯನ್ನು ದಿನಕ್ಕೆರಡು ಬಾರಿ ಶುಚಿಗೊಳಿಸಿ, ಸ್ವಚ್ಛತೆಯನ್ನುಕಾಪಾಡಿ ಕೊಳ್ಳಬಹುದು.
2. ಹೆಚ್ಚಿನ ಪ್ರಮಾಣದಲ್ಲಿದ್ರವಾಹಾರ ಸೇವನೆ ಮಾಡುತ್ತಿರಬೇಕು.
3. ಕಾಫಿ, ಟೀ, ಕೋಲಾ ಮುಂತಾದ ಅನಿಲಯುಕ್ತ ದ್ರಾವಣಗಳ ಸೇವನೆಯ ಬಳಿಕ ಬಾಯಿಯನ್ನು ಶುಚಿಗೊಳಿಸಬೇಕು.
4. ಧೂಮಪಾನ, ಮದ್ಯಪಾನತಂಬಾಕು ಸೇವನೆ ಮುಂತಾದ ಚಟಗಳಿಂದ ದೂರವಿರಬೇಕು.
5. ಪ್ರತಿದಿನ ಹಲ್ಲ್ಲುಜ್ಜಿದ ಬಳಿಕ ದಂತದಾರದ ಸಹಾಯದಿಂದ ಹಲ್ಲುಗಳ ಸಂದಿಯನ್ನು ಶುಚಿಗೊಳಿಸಿ, ಆಹಾರ ಪದಾರ್ಥ ಸಿಕ್ಕಿಹಾಕಿಕೊಳ್ಳದಂತೆ ನೋಡಿಕೊಳ್ಳಬೇಕು.
6. ಈರುಳ್ಳಿ, ಬೆಳ್ಳುಳ್ಳಿ ಮುಂತಾದ ವಾಸನೆಯುಕ್ತ ವಸ್ತುಗಳನ್ನು ಅನಿವಾರ್ಯವಾದಲ್ಲಿ ಮಾತ್ರ ಸೇವಿಸಬೇಕು. ಬೇಕಿದ್ದರಲ್ಲಿ ಬೇಯಿಸಿ ತಿನ್ನಬೇಕು. ಹಸಿಯಾಗಿ ಸೇವಿಸುವುದನ್ನುಕಡಿಮೆ ಮಾಡಬೇಕು.
7. ಯಾವಕಾರಣದಿಂದ ಬಾಯಿ ವಾಸನೆ ಬರುತ್ತಿದೆಎಂದು ತಿಳಿದುಕೊಂಡು ಅದಕ್ಕೆ ವೈದ್ಯರ ಬಳಿ ಸೂಕ್ತ ಚಿಕಿತ್ಸೆ ಪಡೆದುಕೊಂಡಲ್ಲಿ ಬಾಯಿ ವಾಸನೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.
8. ಗ್ಯಾಸ್ಟ್ರಿಕ್ ತೊಂದರೆಇದ್ದಲ್ಲಿ ವೈದ್ಯರಲ್ಲಿ ಸೂಕ್ತ ಪರಿಹಾರ ಪಡೆಯಬೇಕು.
9. ಮಧುಮೇಹ ರೋಗಿಗಳು ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಕಾಲಕಾಲಕ್ಕೆ ವೈದ್ಯರ ಬಳಿ ಮತ್ತುದಂತ ವೈದ್ಯರ ಬಳಿ ತೋರಿಸಿ ಪರಿಹಾರ ಕಂಡುಕೊಳ್ಳಬೇಕು.
10. ಊಟವಾದ ಬಳಿಕ, ಲವಂಗ, ಏಲಕ್ಕಿ, ತುಳಸಿ ಇತ್ಯಾದಿಗಳನ್ನು ಸೇವಿಸಬಹುದು. ಆದರೆ ಬಾಯಿ ಶುಚಿಗೊಳಿಸಬೇಕು.
11. ಬಾಯಿಯಲ್ಲಿದಂತಕ್ಷಯದಿಂದಾಗಿ ದಂತಕುಳಿಗಳಿದ್ದರೆ, ಸರಿಯಾದಚಿಕಿತ್ಸೆ ಮಾಡಿಸಿಕೊಳ್ಳಬೇಕು.
12. ಪ್ರತಿಆರು ತಿಂಗಳಿಗೊಮ್ಮೆ ದಂತ ವೈದ್ಯರನ್ನು ಸಂಪರ್ಕಿಸಿ ಹಲ್ಲುಗಳನ್ನು ಶುಚಿಗೊಳಿಸಬೇಕು. ಹಲ್ಲಿನ ಸುತ್ತದಂತಕಿಟ್ಟ ಮತ್ತುದಂತ ಪಾಚಿ ಬೆಳೆಯದಂತೆ ನೋಡಿಕೊಳ್ಳಬೇಕು.
13. ಬಾಯಿಯಲ್ಲಿಯಾವುದೇಕಾರಣದಿಂದಜೊಲ್ಲು ರಸದ ಪ್ರಮಾಣಕಡಿಮೆಯಾಗಿದ್ದಲ್ಲಿಅದಕ್ಕೆ ಸೂಕ್ತ ಚಿಕಿತ್ಸೆ ಮಾಡಿಸಿಕೊಳ್ಳಬೇಕು. ನೀವು ತೆಗೆದುಕೊಳ್ಳುವ ಔಷಧಿಯಿಂದಜೊಲ್ಲುರಸಕಡಿಮೆಯಾಗಿದ್ದಲಿ ,್ಲ ಬದಲಿ ಔಷಧಿಯನ್ನು ವೈದ್ಯರ ಬಳಿ ಕೇಳಿ ತೆಗೆದುಕೊಳ್ಳಬೇಕು.
14. ಸಕ್ಕರೆ ಅಂಶವುಳ್ಳ ಸಿಹಿತಿಂಡಿಗಳನ್ನು ತಿಂದ ಬಳಿಕ ಬಾಯಿ ಚೆನ್ನಾಗಿ ಶುಚಿಗೊಳಿಸಬೇಕು.ಪ್ರತಿ ಮೂರು ತಿಂಗಳಿಗೆ ಬ್ರಶ್ ಬದಲಾಯಿಸಲೇಬೇಕು.ಉತ್ತಮವಾದದಂತಕುಂಚ ಉಪಯೋಗಿಸಿ, ಹಲ್ಲುಗಳನ್ನು ಶುಚಿಯಾಗಿ ಇರಿಸಿಕೊಳ್ಳಬೇಕು.
15. ವಸಡಿನಲ್ಲಿರಕ್ತಒಸರುತ್ತಿದ್ದಲ್ಲಿ ಅದಕ್ಕೆ ಸೂಕ್ತ ಔಷಧಿ ತೆಗೆದುಕೊಳ್ಳಬೇಕು. ರಕ್ತಒಸರುವಿಕೆಗೆಕಾರಣವಾದ ಅಂಶಗಳನ್ನು ಸರಿಪಡಿಸಿಕೊಳ್ಳಬೇಕು.
ಒಟ್ಟಿನಲ್ಲಿ ಬಾಯಿಯದುರ್ವಾಸನೆಎನ್ನುವುದು ಬಹಳ ಮುಜುಗರತಂದುಕೊಡಬಹುದಾದ ಖಾಯಿಲೆ. ಜನರು ನಿಮ್ಮಿಂದದೂರ ಹೋಗಬೇಕೆಂದುಚಡಪಡಿಸುವಂತಾಗಬಹುದು. “ಬಾಯಿ ಬಿಟ್ಟರೆ ಬಣ್ಣಗೇಡು” ಎಂದು ಈ ಕಾರಣಕ್ಕಾಗಿಯೇ ಬಲ್ಲಿದರು ಹೇಳಿದ್ದಾರೆ.ಪ್ರತಿಯೊಬ್ಬ ವ್ಯಕ್ತಿಯೂತನ್ನ ಬಾಯಿಯನ್ನು ಸ್ವಚ್ಛವಿಟ್ಟುಕೊಂಡಲ್ಲಿ ಬಾಯಿಯ ದುರ್ವಾಸನೆಯನ್ನು 80% ಶೇಕಡಾಕಡಿಮೆ ಮಾಡಬಹುದು.ಆನಂತರವೂ ಬಾಯಿಯ ದುರ್ವಾಸನೆ ಕಂಡುಬಂದಲ್ಲಿ ವೈದ್ಯರನ್ನು ಸಂದರ್ಶಿಸಿ ಸೂಕ್ತ ಚಿಕಿತ್ಸೆ ಸಕಾಲದಲ್ಲಿ ತೆಗೆದುಕೊಳ್ಳಬೇಕು.
ಒಟ್ಟಿನಲ್ಲಿ ಬಾಯಿ ದುರ್ವಾಸನೆ ಎನ್ನುವುದು ಬಾಯಿ ಮತ್ತು ದೇಹದ ಆರೋಗ್ಯಕ್ಕೆ ಸಂಬಂಧಿಸಿದ ಸಂಕೀರ್ಣವಾದ ಸಾಮಾಜಿಕ ಸಮಸ್ಯೆ, ಹೆಚ್ಚಾಗಿ ಈ ಸಮಸ್ಯೆಇರುವವರು ಮುಜುಗರದ ಕಾರಣದಿಂದಾಗಿ ಈ ಸಮಸ್ಯೆಗೆದಂತ ವೈದ್ಯರ ಬಳಿ ಸಲಹೆ ಪಡೆಯಲು ಹಿಂಜರಿಯುತ್ತಾರೆ. ಬಹಳ ಮಾನಸಿಕ ಖಿನ್ನತೆಗೆ ಕಾರಣವಾಗಬಲ್ಲ ಈ ಸಮಸ್ಯೆ ಪೀಡಿತ ವ್ಯಕ್ತಿಗೆತನ್ನ ಸ್ನೇಹಿತರೊಂದಿಗೆ, ಸಹದ್ಯೋಗಿಗಳೊಂದಿಗೆ, ಮನೆಮಂದಿಯೊಂದಿಗೆ ಮುಕ್ತವಾಗಿ ಬೆರೆತು ಮಾತನಾಡುವ ಸ್ವತಂತ್ರವನ್ನು ನಿರಾಕರಿಸುತ್ತಾರೆ.ಈ ರೀತಿಯಏಕಾಂಗಿತನ ಪೀಡಿತ ವ್ಯಕ್ತಿ, ಮಾನಸಿಕ ಖಿನ್ನತೆಗೆ ಒಳಗಾಗಿ ಹಲವಾರುರೀತಿಯ ಮಾನಸಿಕ ರೋಗಗಳಿಗೆ ದಾರಿ ಮಾಡಿಕೊಡಬಹುದು.ಬಾಯಿಯ ವಾಸನೆ ಕೆಲವೊಮ್ಮೆ ಸುಖಕರವಾದ ದಾಂಪತ್ಯಕ್ಕೂ ಕಲ್ಲು ಹಾಕಬಹುದು. ಬಾಯಿಯದುರ್ವಾಸನೆ ವಿವಾಹ ವಿಚ್ಛೇದನಗಳಿಗೂ, ಆತ್ಮಹತ್ಯೆಗೆ ಪ್ರಚೋದಿಸಬಹುದುಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಒಟ್ಟಿನಲ್ಲಿ ಬಾಯಿ ದುರ್ವಾಸನೆಯಿಂದ ವ್ಯಕ್ತಿಯ ಸಂಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಅಡ್ಡಿಯಾಗಬಹುದುಎಂದರೂತಪ್ಪಲ್ಲ. ಕಾರಣಯಾವುದೇಇದ್ದರೂ ಸಕಾಲದಲ್ಲಿ ಸೂಕ್ತ ದಂತ ವೈದ್ಯರ ಮತ್ತು ವೈದ್ಯರ ಸಲಹೆಯ ಮೇರೆಗೆ ಸರಿಯಾದಚಿಕಿತ್ಸೆದೊರೆತಲ್ಲಿಎಲ್ಲರೀ ತಿಯ ದೈಹಿಕ, ಮಾನಸಿಕ, ಸಾಮಾಜಿಕ ತೊಂದರೆಗಳನ್ನು ತೊಡೆದು ಹಾಕಿ, ವ್ಯಕ್ತಿಯ ಸಂಪೂರ್ಣ ಬೆಳವಣಿಗೆಗೆ ಸಹಕಾರಿಯಾಗಬಲ್ಲದು.
ಡಾ ಮುರಲಿ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರು