Wednesday, February 12, 2025

ಪರವಾನಗಿಯಿಲ್ಲದೆ ಅಕ್ರಮ ಮಧ್ಯ ಮಾರಾಟ : ವ್ಯಕ್ತಿ ಸಹಿತ ಸಾವಿರಾರು ರೂ ಮೌಲ್ಯದ ಮಧ್ಯ ವಶಕ್ಕೆ

ಬಂಟ್ವಾಳ: ಪರವಾನಗಿಯಿಲ್ಲದೆ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಸಹಿತ ಸಾವಿರಾರು ರೂ ಮೌಲ್ಯದ ಮಧ್ಯವನ್ನು ವಶಪಡಿಸಿಕೊಂಡ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಮಂಚಿ ಎಂಬಲ್ಲಿ ನಡೆದಿದೆ.

ಮಂಚಿಕಟ್ಟೆ ಎಂಬಲ್ಲಿ ಸುಧಾಕರ್ ಎಂಬವರು ಅಕ್ರಮ ಮಧ್ಯ ಮಾರಾಟ ‌ಮಾಡುತ್ತಿದ್ದ ವ್ಯಕ್ತಿಯಾಗಿದ್ದು,ಇವರನ್ನು ಬಂಧಿಸಿದ ಪೋಲೀಸರು 32,34 KE act1965 ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿ ಸುಧಾಕರ್ ಅವರು ಮಂಚಿಕಟ್ಟೆ ಎಂಬಲ್ಲಿ ರಸ್ತೆ ಬದಿಯಲ್ಲಿ ನಿಗದಿತ ಬೆಲೆಗಿಂತ ಹೆಚ್ಚುವರಿಯಾಗಿ ಪಡೆದುಕೊಂಡು ಮಾರಾಟ ಮಾಡುತ್ತಿರುವ ಆರೋಪ ಬಂದಿದ್ದು, ಇವರ ಬಳಿಯಿಂದ 1480 ರೂ ಮೌಲ್ಯದ ವಿವಿಧ ಕಂಪೆನಿಯ ಮಧ್ಯದ ಬಾಟಲಿಯನ್ನು ವಶಪಡಿಸಿಕೊಂಡಿದ್ದಾರೆ.

80 ರೂ ಮುಖಬೆಲೆಯ 320 ರೂ ಮೌಲ್ಯದ ಅಮೃತ್ ಪ್ರೆಸ್ಟಿಜ್ ವಿಸ್ಕಿ 180 ML ನ ಪ್ಲಾಸ್ಟಿಕ್‌ 4 ಬಾಟಲಿ, 40 ರೂ ಮುಖಬೆಲೆಯ 160 ರೂ ಮೌಲ್ಯದ ಅಮೃತ್ ಪ್ರೆಸ್ಟಿಜ್ ವಿಸ್ಕಿ ಎಂದು ಬರೆದಿರುವ 90 ML ನ 4 ಸ್ಯಾಚೆಟ್, 40 ರೂ ಮುಖಬೆಲೆಯ 560 ರೂ ಮೌಲ್ಯದ Original Choice Deluxe whisky ಎಂದು ಬರೆದಿರುವ 90 ML ನ 14 ಸ್ಯಾಚೆಟ್‌, 40 ರೂ ಮುಖಬೆಲೆಯ 440 ರೂ ಮೌಲ್ಯದ Mysore Lancer Whisky ಎಂದು ಬರೆದಿರುವ 90 ML ನ 11 ಸ್ಯಾಚೆಟ್ ಹಾಗೂ ಗಿರಾಕಿಗಳಿಗೆ ಮದ್ಯ ಮಾರಾಟ ಮಾಡಿ ಬಂದ ರೂ. 350 ಹಣವನ್ನು ಪೋಲೀಸರು ವಶಪಡಿಸಿಕೊಂಡಿದ್ಧಾರೆ.

More from the blog

ವಿಟ್ಲ ಪಿಎಂ ಶ್ರೀ ಸರಕಾರಿ ಪ್ರೌಢ ಶಾಲೆಯಲ್ಲಿ ಮೆಟ್ರಿಕ್ ಮೇಳ

ವಿಟ್ಲ: ವಿಟ್ಲ ಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ (ಆರ್ ಎಂ ಎಸ್ ಎಂ)ವಿಟ್ಲ ಇದರ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬುಧವಾರ ಮೆಟ್ರಿಕ್ ಮೇಳ ಕಾರ್ಯಕ್ರಮ ನಡೆಯಿತು. ಮೆಟ್ರಿಕ್ ಮೇಳವನ್ನು ವಿಟ್ಲ ಪಟ್ಟಣ...

ನೇಣು ಬಿಗಿದು ಯುವಕ ಆತ್ಮಹತ್ಯೆ

ಬಂಟ್ವಾಳ: ಖಿನ್ನತೆಯಿಂದ ಅವಿವಾಹಿತ ವ್ಯಕ್ತಿಯೊರ್ವನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಮ್ಟಾಡಿ ನಿವಾಸಿ ಮೆಕ್ಸಿನ್ ತಾವ್ರೋ ಅವರ ಮಗ ಜೀವನ್  ತಾವ್ರೋ ( 37) ಆತ್ಮಹತ್ಯೆ ಮಾಡಿಕೊಂಡ ಯುವಕ. ‌‌‌ಜೀವನ್ ಅವರು ಅಗಾಗ...

ಅಕ್ರಮ ಮಸೀದಿ ನಿರ್ಮಾಣ ಆರೋಪ: ಕರಿಯಂಗಳ ಗ್ರಾ.ಪಂ.ಗೆ ಮುತ್ತಿಗೆ

ಬಂಟ್ವಾಳ: ಗ್ರಾಮ ಪಂಚಾಯತ್ ಅನುಮತಿ ಇಲ್ಲದೆ ಅಕ್ರಮವಾಗಿ ಸರಕಾರಿ ಜಾಗದಲ್ಲಿ ಕಟ್ಟಡ ನಿರ್ಮಿಸಿ ಅದರಲ್ಲಿ ಮದರಸ ಮಾಡಲು ಮುಂದಾಗಿದ್ದರೆ ಎಂದು ಆರೋಪಿಸಿದ ಗ್ರಾಮಸ್ಥರು ಇದನ್ನು ತಡೆಯುವಂತೆ ಗ್ರಾಮ ಪಂಚಾಯತ್ ಗೆ ಮುತ್ತಿಗೆ ಹಾಕಿದ...

ಪುರಸಭೆ ಎಡವಿದೆಲ್ಲಿ? ಬ್ಯಾನರ್ ವಿವಾದ!

ಬಂಟ್ವಾಳ: ಬಂಟ್ವಾಳ ಪುರಸಭೆ ನಿಯಮ ಉಲ್ಲಂಘಿಸಿ ಹಾಕಲಾದ ಫ್ಲೆಕ್ಸ್ ತೆರವು ಕಾರ್ಯಾಚರಣೆಯನ್ನು ತಡವಾಗಿ ಪ್ರಾರಂಭಿಸಿದೆ. ಜನವರಿ 29ರಂದು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ಪುರಸಭೆಯ ಮುಖ್ಯಾಧಿಕಾರಿ ತೆರವು ಕಾರ್ಯಾಚರಣೆ ನಡೆಸುವುದಾಗಿ ಘೋಷಿಸಿ,...