Wednesday, July 9, 2025

ಅತ್ಯುತ್ತಮ ವೆಬ್ ಸೈಟ್ ವರದಿಗೆ ಬಿ ಜಿ ಮೋಹನ್ ದಾಸ್ ಪ್ರಶಸ್ತಿ ಗೆ ಅರ್ಜಿ ಆಹ್ವಾನ

ಬಂಟ್ವಾಳ: ನಿರತ ಸಾಹಿತ್ಯ ಸಂಪದ ಮತ್ತು ಗಲ್ಫ್ ಕನ್ನಡಿಗ – ಇವರ ಜಂಟಿ ಆಶ್ರಯದಲ್ಲಿ ಮೊದಲ ಬಾರಿಗೆ ನೀಡುವ ಅತ್ಯುತ್ತಮ ವೆಬ್‍ಸೈಟ್ (ಅಂತರ್ಜಾಲ) ವರದಿಗೆ
ರಾಜ್ಯ ಮಟ್ಟದ ಬಿ. ಜಿ. ಮೋಹನ್‍ದಾಸ್ ಪ್ರಶಸ್ತಿ – 2021ಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಪ್ರಶಸ್ತಿಯು ರೂ. 5000 ನಗದು, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ ಮತ್ತು ಸನ್ಮಾನವನ್ನೊಳಗೊಂಡಿರುತ್ತದೆ. ಪ್ರಶಸ್ತಿ ಗೆ ಕನ್ನಡ ವೆಬ್‍ಸೈಟ್‍ನಲ್ಲಿ ಪ್ರಕಟಗೊಂಡ ವರದಿಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುವುದು. 2020 ಜುಲಾಯಿ 1ರಿಂದ ಜೂನ್ 30 2021ರ ವರೆಗೆ ಪ್ರಕಟವಾದ ಮಾನವೀಯ ಮೌಲ್ಯ, ಗ್ರಾಮೀಣ ಸಮಸ್ಯೆ, ತನಿಖಾ ಆಧಾರಿತ ವರದಿ, ಎಕ್ಸ್ ಕ್ಲೂಸಿವ್ ಸೇರಿದಂತೆ ಅತ್ಯುತ್ತಮ ವರದಿಗಳಲ್ಲಿ ಓರ್ವರನ್ನು ಆಯ್ಕೆ ಮಾಡಲಾಗುವುದು. ಒಬ್ಬ ಪತ್ರಕರ್ತರಿಗೆ ಒಂದು ವರದಿ ಕಳುಹಿಸಲು ಮಾತ್ರ ಅವಕಾಶವಿದೆ.ವರದಿಯು ಬೇರೆ ಯಾವುದೇ ಪತ್ರಿಕೆ ಅಥವಾ ಸುದ್ದಿ ಜಾಲದಲ್ಲಿ ಪ್ರಕಟವಾಗಿರಬಾರದು.ಆಯ್ಕೆಗೆ ವರದಿಯ ಮುದ್ರಿತ 3 ಪ್ರತಿಗಳನ್ನು ಕೆಳಗೆ ನೀಡಿರುವ ವಿಳಾಸಕ್ಕೆ ಜುಲಾಯಿ 31ರೊಳಗೆ ಕಳುಹಿಸಿಕೊಡಬೇಕು.ಮುದ್ರಿತ ವರದಿಯ ವೆಬ್‍ಸೈಟ್ ಲಿಂಕ್ (URL Address) ನ್ನು ಕಡ್ಡಾಯವಾಗಿ 9844619763 ಈ ನಂಬರಿಗೆ ವಾಟ್ಸಪ್ ಮಾಡಬೇಕು. ನಿರ್ಣಾಯಕರ ತೀರ್ಮಾನವೇ ಅಂತಿಮ. ಯಾವುದೇ ಚರ್ಚೆಗೆ ಆಸ್ಪದವಿಲ್ಲ.ವರದಿಯನ್ನು ಕಳುಹಿಸಬೇಕಾದ ವಿಳಾಸ :ದಿನೇಶ್ ಎನ್. ತುಂಬೆ,ಕಾರ್ಯದರ್ಶಿ, ನಿರತ ಸಾಹಿತ್ಯ ಸಂಪದ,ಪ್ರಗತಿ ಪ್ರಿಂಟರ್ಸ್, ತುಂಬೆ – 574 143
ಬಂಟ್ವಾಳ ತಾಲೂಕು, ದ. ಕ.

More from the blog

ನಾಯಕತ್ವ ಬೆಳವಣಿಗೆಗೆ ಶ್ರಮದೊಂದಿಗೆ ನಿಷ್ಠೆ, ತಾಳ್ಮೆ ರೂಡಿಸಿಕೊಂಡಾಗ ಯಶಸ್ಸು ಸಾಧ್ಯ : ರೋ. ರಾಘವೇಂದ್ರ ಭಟ್

ಬಂಟ್ವಾಳ : ನಾಯಕತ್ವದ ಬೆಳವಣಿಗೆಗೆ ಶ್ರಮದೊಂದಿಗೆ ನಿಷ್ಠೆ ಮತ್ತು ತಾಳ್ಮೆ ರೂಡಿಸಿಕೊಳ್ಳಬೇಕು ಈ ನಿಟ್ಟಿನಲ್ಲಿ ಅವಕಾಶ ಗಳನ್ನು ಹುಡುಕಿಕೊಂಡು, ದೇಶದ ಇತಿಹಾಸದಲ್ಲಿ ಕಾಣುವ ವಿವಿಧ ಕ್ಷೆತ್ರದಲ್ಲಿ ಗಣನೀಯ ಸೇವೆ ಗೈದರವರ ಆದರ್ಶ ಗಳನ್ನು...

ಜು.10ರಂದು ಹಿಂದೂ ಜನಜಾಗೃತಿ ಸಮಿತಿಯಿಂದ ಗುರುಪೂರ್ಣಿಮಾ ಮಹೋತ್ಸವ ಆಯೋಜನೆ

ಬಿ.ಸಿ. ರೋಡ್ : ಸಮಸ್ತ ಜಗತ್ತು ಯುದ್ಧದತ್ತ ಸಾಗುತ್ತಿದೆ. ಭಾರತದಲ್ಲಿಯೂ ಜಿಹಾದಿ ಭಯೋತ್ಪಾದಕರು ಹಿಂದೂಗಳನ್ನು ಹತ್ಯೆ ಮಾಡಿ, ಭಾರತವನ್ನು ಯುದ್ಧಕ್ಕೆ ಪ್ರೇರೇಪಿಸುತ್ತಿದ್ದಾರೆ. ಶ್ರೀರಾಮ, ಶ್ರೀಕೃಷ್ಣನಂತಹ ಅವತಾರಗಳಿಂದ ಹಿಡಿದು ಛತ್ರಪತಿ ಶಿವಾಜಿ ಮಹಾರಾಜ, ಮಹಾರಾಣಾ...

ಶ್ರೀ ಕ್ಷೇತ್ರ ಪೊಳಲಿಯಲ್ಲಿ ಲಕ್ಷ ಕುಂಕುಮಾರ್ಚನೆ..

ಪೊಳಲಿ: ಶ್ರೀ ಮೃತ್ಯುಂಜಯೇಶ್ವರ ಶಿವ ಕ್ಷೇತ್ರಗಂಜಿಮಠ ಪುನರುತ್ಥಾನ ಶ್ರೀ ಮೃತ್ಯುಂಜಯೇಶ್ವರ ಶಿವ ಕ್ಷೇತ್ರ ಪುನರ್ ನಿರ್ಮಾಣದ ಅಷ್ಟಮಂಗಳ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದAತೆ ಜು.೮ರಂದು ಮಂಗಳವಾರ ಶ್ರೀ ಕ್ಷೇತ್ರ ಪೊಳಲಿ ಸಾವಿರ ಸೀಮೆಯ...

Protest : ಎಸ್.ಡಿ.ಪಿ‌.ಐ. ಪಕ್ಷದ ವತಿಯಿಂದ ಕೈಕಂಬದ ಬಳಿ ಬೃಹತ್ ಪ್ರತಿಭಟನೆ..

ಬಂಟ್ವಾಳ: ಅಬ್ದುಲ್ ರಹಿಮಾನ್ ಮತ್ತು ಅಶ್ರಫ್ ವಯನಾಡು ಕೊಲೆ ಕೃತ್ಯದ ಪ್ರಮುಖ ಆರೋಪಿಗಳ ಬಂಧನದ ವಿಳಂಬ ಮತ್ತು ಪರಿಹಾರ ಘೋಷಿಸಿದ ಸರಕಾರದ ನಡೆಯನ್ನು ಖಂಡಿಸಿ, ನ್ಯಾಯ ಮರೀಚಿಕೆ...ಹುಸಿಯಾದ ಭರವಸೆ ಎಂಬ ಘೋಷ ವಾಕ್ಯದಲ್ಲಿ...