Friday, June 27, 2025

ಗ್ರಾಮದ ಅಭಿವೃದ್ಧಿ ಗೆ ರಾಜಕೀಯ ಬದಿಗಿಟ್ಟು ಕೆಲಸ ಮಾಡಿ: ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ರಾಜಕೀಯ ಬದಿಗಿಟ್ಟು ಅಭಿವೃದ್ಧಿಗಾಗಿ ಪಣತೊಡಿ , ಪ್ರತಿ ಗ್ರಾಮದ ಅಭಿವೃದ್ದಿಗಾಗಿ ಜೊತೆಯಾಗಿ ಕೆಲಸ ಮಾಡಿ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.

ಪೆರಾಜೆ ಗ್ರಾಮದಲ್ಲಿ ಪ್ರತಿ ಮನೆಗೆ ನೀರು ನೀಡುವ ಹಿನ್ನಲೆಯಲ್ಲಿ ರೂ.74.93 ಲಕ್ಷ ವೆಚ್ಚದಲ್ಲಿ ಕಾರ್ಯರೂಪಕ್ಕೆ ಬರುವ ಪ್ರಧಾನ ಮಂತ್ರಿಯವರ ಮಹತ್ವದ ಯೋಜನೆ ಯಾದ ಜಲಜೀವನ್ ಮಿಷನ್ ( ಮನೆಮನೆಗೆ ಗಂಗೆ) ಯೋಜನೆಗೆ ಶಂಕುಸ್ಥಾಪನೆಯನ್ನು ನೆರವೇರಿಸಿದ ಬಳಿಕ ಅವರು ಮಾತನಾಡಿದರು.

ಸುಮಾರು 118 ಕೋಟಿ ವೆಚ್ಚದಲ್ಲಿ ಬಂಟ್ವಾಳ ತಾಲೂಕಿನಲ್ಲಿ ಗ್ರಾಮದ ಪ್ರತಿ ಮನೆಗೂ ” ಗಂಗೆ ” ನೀಡುವ ಯೋಜನೆ ಜಾರಿಯಾಗಿದ್ದು ಈಗಾಗಲೇ ಸುಮಾರು

33 ಕೋಟಿ ಅನುದಾನ ಬಂದಿದೆ, 85 ಕೋಟಿ ಬಾಕಿ ಅನುದಾನ ಶೀಘ್ರವಾಗಿ ಬರಲಿದ್ದು ಮುಂದಿನ ಒಂದು ವರ್ಷದಲ್ಲಿ ಎಲ್ಲಾ ಮನೆಗೂ ನೀರು ನೀಡುವ ಭರವಸೆ ನೀಡಿದರು.

ಯೋಜನೆ ಗಳು ಜಾರಿಯಾಗಿ ಅನುದಾನಗಳು ಬಿಡುಯಾದ ಬಳಿಕ ಸರಿಯಾದ ಸಮಯದಲ್ಲಿ ಕಾಮಗಾರಿಗಳು ಪೂರ್ಣಗೊಳಿಸಿ ಸಾರ್ವಜನಿಕ ಪ್ರಯೋಜನಕ್ಕೆ ಸಿಗುವಂತೆ ಮಾಡಲು ಅಧಿಕಾರಿಗಳು ಮತ್ತು ಗುತ್ತಿಗೆದಾರರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಜಿ.ಪಂ.ಸದಸ್ಯೆ ಮಂಜುಳಾ ಮಾದವ ಮಾವೆ ಮಾತನಾಡಿ ಮಾಣಿ ಜಿ.ಪಂ.ಕ್ಷೇತ್ರದ ಪೆರಾಜೆಯಲ್ಲಿ ಕಾರ್ಯರೂಪಕ್ಕೆ ಬಂದಿರುವ ಯೋಜನೆ ಗ್ರಾಮದ ಕಟ್ಟಕಡೆಯ ವ್ಯಕ್ತಿಯ ಮನೆಮನೆಗೆ ನೀರು ಸಿಗಬೇಕು ಎಂಬ ಯೋಚನೆಯಿಂದ ಮಾಡಲಾಗಿದೆ.

ಪ್ರಧಾನಿಯವರ ಕನಸಿನ ಈ ಯೋಜನೆ ಯಶಸ್ವಿಯಾಗಲು ಗ್ರಾಮದ ಜನರ ಸಹಕಾರ ಇರಲಿ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ರೋಹಿಣಿ, ಉಪಾಧ್ಯ ಕ್ಷ ಉಮ್ಮರ್, ಸದಸ್ಯರಾದ ಹರೀಶ್ ರೈ ಪಾಣೂರು, ರಾಜಾರಾಂ ಭಟ್ ಕಾಡೂರು, ಶಶಿಕುಮಾರಿ, ಮಾಜಿ ಅಧ್ಯಕ್ಷೆ ಪುಷ್ಪ, ಬಿಜೆಪಿ ಕ್ಷೇತ್ರ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ನೇರಳಕಟ್ಟೆ ಸಿ.ಎ.ಬ್ಯಾಂಕ್ ಅಧ್ಯಕ್ಷ ಪುಷ್ಪರಾಜ ಚೌಟ, ಕ್ಷೇತ್ರ ಕಾರ್ಯದರ್ಶಿ ಗಣೇಶ್ ರೈ ಮಾಣಿ, ಪ್ರಮುಖರಾದ ಪುರುಷೋತ್ತಮ ಶೆಟ್ಟಿ ವಾಮದಪದವು, ಶ್ರೀನಿವಾಸ್ ಪೂಜಾರಿ, ಉಮೇಶ್ ಎಸ್.ಪಿ.ವಿನೀತ್ ಶೆಟ್ಟಿ, ದಿನೇಶ್ ಪಲ್ಲಮಜಲು, ರಾಜೀವಿ ಜಯಾನಂದ ಜೋಗಿಬೆಟ್ಟು, ದಿವಾಕರ ಶಾಂತಿಲ, ವೀಣಾ ಕೃಷ್ಣ ಪ್ಪ ಸಪಲ್ಯ ಬಡೆಕೋಡಿ, ರತ್ನ ಸಪಲ್ಯ ಮಂಜೊಟ್ಟಿ, ಉಮೇಶ್ ಭಟ್ ಬಳ್ಳಮಜಲು, ನಳಿನಾಕ್ಷ ಬಳ್ಳಮಜಲು, ಕೃಷ್ಣ ಪ್ಪ ನಾಯ್ಕ, ದಯಾನಂದ ಕುಲಾಲ್, ಸುಂದರಿ ಶೆಟ್ಟಿ, ಜನಾರ್ದನ ಶಾಂತಿಲ, ಸುಧಾ ನಾಯಕ್ ಶಾಂತಿಲ, ಪೆರಾಜೆ ಪಿ.ಡಿ.ಒ ಶಂಭುಶರ್ಮ, ಕಿರಿಯ ಇಂಜಿನಿಯರ್ ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು

More from the blog

ಕರ್ನಾಟಕದ ಕರಾವಳಿ ಸೇರಿ ಹಲವೆಡೆ ಜು. 3ರವರೆಗೆ ಭಾರಿ ಮಳೆ..

ಮಂಗಳೂರು : ರಾಜ್ಯದಾದ್ಯಂತ ಮಳೆಯ ಆರ್ಭಟ ಮುಂದುವರೆದಿದೆ. ಇಂದು (ಜೂನ್ 27) ಸಹ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ಹೈ ಅಲರ್ಟ್ ಘೋಷಿಸಿದೆ. ಕೊಡಗಿನಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ರೆಡ್...

5 ವರ್ಷದ ಮಗುವಿನ ಚಿಕಿತ್ಸೆಗೆ ಸಂಗಬೆಟ್ಟು ಗ್ರಾ. ಪಂ ವತಿಯಿಂದ ಸಹಾಯಧನದ ಚೆಕ್ ಹಸ್ತಾಂತರ.. 

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಮಗು ಮನಸ್ವಿಳಿಗೆ ಅರೋಗ್ಯದಲ್ಲಿ ರಕ್ತದ ಕ್ಯಾನ್ಸರ್ ಇರುವುದರಿಂದ ಅರೋಗ್ಯದ ವೆಚ್ಚಕ್ಕಾಗಿ...

Old Bridge : ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆ ಅಧಿಕಾರಿಗಳಿಂದ ಪಾಣೆಮಂಗಳೂರು ಹಳೆ ಸೇತುವೆಯ ಸಾಮರ್ಥ್ಯ ಪರೀಕ್ಷೆ

ಬಂಟ್ವಾಳ: ಬ್ರಿಟಿಷ್ ಕಾಲದ ಪಾಣೆಮಂಗಳೂರು ಸೇತುವೆಯ ಸಾಮರ್ಥ್ಯ ಪರೀಕ್ಷೆ ನಡೆಸುವ ಉದ್ದೇಶದಿಂದ ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆಯಿಂದ ಇಬ್ಬರು ಅಧಿಕಾರಿಗಳು ಆಗಮಿಸಿ, ಜಿಲ್ಲಾಧಿಕಾರಿ ಅವರಿಗೆ ವರದಿ ನೀಡಿದ್ದಾರೆ. ಹಳೆ ಸೇತುವೆ ಬಗ್ಗೆ ಸ್ಥಳ ವೀಕ್ಷಣೆಗೆ ಏನ್...

ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ..

ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ, ಮಹಾರುದ್ರಾಭಿಷೇಕ ಮತ್ತು ವಿಶೇಷ...