Wednesday, January 28, 2026

ವಿದೇಶಕ್ಕೆ ಹೋಗುವ ಮಗಳನ್ನು ಏರ್‌ಪೋರ್ಟ್‌ಗೆ ಕಳುಹಿಸಲು ಹೋಗಿದ್ದಾಗ ಮನೆಗೆ ನುಗ್ಗಿದ ಕಳ್ಳರು

ವಿಟ್ಲ: ವಿದೇಶಕ್ಕೆ ತೆರಳಲಿದ್ದ ಮಗಳನ್ನು ಏರ್‌ಪೋರ್ಟ್‌ಗೆ ಬಿಡಲು ತೆರಳಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು ನಗದನ್ನು ದೋಚಿ ಪರಾರಿಯಾದ ಘಟನೆ ಬಂಟ್ವಾಳ ತಾಲೂಕಿನ ವೀರಕಂಬದಲ್ಲಿ ನಡೆದಿದೆ.

ವೀರಕಂಬ ಬೊಣ್ಯಕುಕ್ಕು ಜನತಾ ಕಾಲೋನಿ ನಿವಾಸಿ ಮಹಮ್ಮದ್ ಮುಸ್ಲಿಯಾರ್ ರವರು ಕುಟುಂಬ ಸಮೇತರಾಗಿ ಮ.27ರಂದು ರಾತ್ರಿ ವಿದೇಶಕ್ಕೆ ತೆರಳಲಿದ್ದ ಮಗಳನ್ನು ಮಂಗಳೂರು ಏರ್‌ಪೋರ್ಟ್‌ಗೆ ಬಿಟ್ಟು ಬರಲು ತೆರಳಿದ್ದರು. ಅವರು ಮರಳಿ ಬಂದು ನೋಡಿದಾಗ ಮನೆಯ ಬಾಗಿಲು ತೆರೆದಿತ್ತಲ್ಲದೇ ಮನೆಯ ಛಾವಣಿಗೆ ಏಣಿ ಇಟ್ಟು ಮನೆಯೊಳಗೆ ನುಗ್ಗಿ ಕಪಾಟಿನ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ. ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ.

More from the blog

ಕಟೀಲು 7 ಮೇಳಗಳ ಜ.28ರ ಸೇವೆಯಾಟಗಳ ವಿವರ ಇಲ್ಲಿದೆ..

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ 7 ಮೇಳಗಳ ಜ.28ರ ಸೇವೆಯಾಟಗಳ ವಿವರ ಈ ಕೆಳಗಿನಂತಿವೆ.. ಜ.28ರ ಸೇವೆಯಾಟಗಳ ವಿವರ : ಆನಂದ ಎಂ. ಶೆಟ್ಟಿ, ಏಳಿಂಜೆ ಅಂಗಡಿಗುತ್ತು,...

ಸಜೀಪ : ಜ.28, 29,30ರಂದು ಬೃಹತ್ 14ನೇ ವಾರ್ಷಿಕ ಜಲಾಲಿಯ್ಯಾ ರಾತೀಬ್

ಬಂಟ್ವಾಳ : ಜಲಾಲಿಯ್ಯಾ ಜುಮಾ ಮಸ್ಜಿದ್, ಚಟ್ಟೆಕ್ಕಲ್, ಸಜಿಪ ಇದರ ಆಶ್ರಯದಲ್ಲಿ ಬೃಹತ್ 14ನೇ ವಾರ್ಷಿಕ ಜಲಾಲಿಯ್ಯಾ ರಾತೀಬ್ ಬುರ್ದಾ ಮಜ್ಲಿಸ್ ಜಿಸ್ತಿಯಾ ಖುತ್‌ಬಿಯತ್ ಜ.28, 29,30 ರಂದು ಜಲಾಲಿಯ್ಯ ಜುಮಾ ಮಸೀದಿ...

ಯೋಧರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ – ಒಡಿಯೂರುಶ್ರೀ

ವಿಟ್ಲ: ಸದೃಢ ದೇಶ ನಿರ್ಮಾಣದಲ್ಲಿ ಸೈನಿಕರ ಪರಿಶ್ರಮ, ತ್ಯಾಗ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದೆ. ಯೋಧರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ನುಡಿದರು. ಅವರು ಒಡಿಯೂರು ರಾಜಾಂಗಣದಲ್ಲಿ...

ವಿಟ್ಲ ಪಡ್ನೂರು : ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ

ವಿಟ್ಲ: ವಿಟ್ಲ ಪಡ್ನೂರು ವಲಯ ಕಾಂಗ್ರೆಸ್ ವತಿಯಿಂದ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರು ಮತ್ತು ಮೂಲ ಸ್ವರೂಪವನ್ನು ಬದಲಾಯಿಸಿದ ಕೇಂದ್ರ ಸರಕಾರದ ಧೋರಣೆಯ ವಿರುದ್ಧ ವಿಟ್ಲ ಪಡ್ನೂರು ಗ್ರಾಮ...