ವಿಟ್ಲ ಸರಕಾರಿ ಪ್ರೌಢಶಾಲೆಯಲ್ಲಿ (ಆರ್ ಎಂ ಎಸ್ ಎಂ) ವಿಜ್ಞಾನ ವಸ್ತು ಪ್ರದರ್ಶನ ಮತ್ತು ಮೆಟ್ರಿಕ್ ಮೇಳ ನಡೆಯಿತು.

ವಸ್ತು ಪ್ರದರ್ಶನವನ್ನು ಶಾಲಾಭಿವೃದ್ಧಿ ಸಮಿತಿ ಗೌರವ ಅಧ್ಯಕ್ಷ ಸುಬ್ರಾಯ ಪೈ ಉದ್ಘಾಟಿಸಿದರು. ಪಟ್ಟಣ ಪಂಚಾಯತ್ ಸದಸ್ಯ ರವಿಪ್ರಕಾಶ್, ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿಶಂಕರ ಶಾಸ್ತ್ರಿ ಮೂಡಂಬೈಲು ಮತ್ತು ಪ್ರೌಢಶಾಲಾ ವಿಭಾಗದ ಅಧ್ಯಕ್ಷೆ ಶಾರದಾ, ಸಿ ಆರ್ ಪಿ ಬಿಂದು, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಫೆಲ್ಸಿಟಾಸ್ ಈವಾ ಗಲ್ಬಾವೊ ಮತ್ತು ಭಾಗವಹಿಸಿದ್ದರು.
ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ವಾರಿಜಾ ಕುಮಾರಿ ಸ್ವಾಗತಿಸಿದರು. ಸಹ ಶಿಕ್ಷಕಿ ಶ್ರೀಮತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಶಿಕ್ಷಕಿ ಮಾಧುರಿ ವಂದಿಸಿದರು. ಶೋಭಾ ಕುಂದರ್ ಕಾರ್ಯಕ್ರಮ ನಿರೂಪಿಸಿದರು.