ಬಂಟ್ವಾಳ: ಇಲ್ಲಿನ ಶ್ರೀ ಶಾರದಾಂಬಾ ಯುವಕ ಮಂಡಲ ಇದರ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಇದರ ಸಹಭಾಗಿತ್ವದಲ್ಲಿ ವಾಲಿಬಾಲ್ ಕ್ರೀಡೆಯ ಉನ್ನತಿಗಾಗಿ ಅವಿಭಜಿತ ದ.ಕ. ಮತ್ತು ಕಾಸರಗೋಡು ಜಿಲ್ಲಾ ಮಟ್ಟದ ಹೊನಲು ಬೆಳಕಿನ ನಾಕೌಟ್ ಮಾದರಿಯ ಪುರುಷರ ವಾಲಿಬಾಲ್ ಪಂದ್ಯಾಟ ಗಣರಾಜ್ಯೋತ್ಸವ ಟ್ರೋಫಿ-2019 ಶ್ರೀ ಶಾರದಾಂಬಾ ಸಭಾಭವನದ ಬಾಳಿಗಾ ಕ್ರೀಡಾಂಗಣದಲ್ಲಿ ಜ. 26ರಂದು ಸಂಜೆ ಜರಗಲಿದೆ.
ಪುಂಜಾಲಕಟ್ಟೆ ಬಾಳಿಗಾ ಜ್ಯುವೆಲ್ಲರ್‍ಸ್‌ನ ಬಿ. ರವೀಂದ್ರ ಬಾಳಿಗಾ ಅವರು ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟಿಸಲಿರುವರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಅಧ್ಯಕ್ಷತೆ ವಹಿಸಲಿರುವರು. ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿರುವರು.
ಜ. 27ರಂದು ಬೆಳಗ್ಗೆ ನಡೆಯುವ ಸಮಾರೋಪದಲ್ಲಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಅವರು ಬಹುಮಾನ ವಿತರಿಸಲಿರುವರು. ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಪ್ರಕಟನೆ ತಿಳಿಸಿದೆ.
