ಮಾಣಿ ಪೇಟೆಯಲ್ಲಿ S A ಮೊಬೈಲ್ ಕೇರ್ ಎಂಬ ಅಂಗಡಿಯನ್ನು ಹೊಂದಿರುವ ಕೆದಿಲ ಗ್ರಾಮದ ಸತ್ತಿಕಲ್ಲಿನ ಅಬ್ದುಲ್ ಸಲಿಂ ಎಂಬಾತ ತನ್ನ ಅಂಗಡಿಗೆ ಮೊಬೈಲ್ ಕರೆನ್ಸಿ ಹಾಕಲು ಬಂದ ಸಣ್ಣ ಪ್ರಾಯದ ಹುಡುಗಿಗೆ ಅಶ್ಲೀಲ ಚಿತ್ರವನ್ನು ತೋರಿಸಿ, ಲೈಂಗಿಕ ದೌರ್ಜನ್ಯ ವನ್ನು ಎಸಗಿರುತ್ತಾನೆ. ಇದನ್ನು ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕಿನ ಅಧ್ಯಕ್ಷರಾದ ನರಸಿಂಹ ಮಾಣಿ, ಪ್ರಧಾನ ಕಾರ್ಯದರ್ಶಿ ಗಣರಾಜ ಕೆದಿಲ ಹಾಗೂ ತಾಲೂಕು ಸಮಿತಿ ಇದನ್ನು ತೀವ್ರವಾಗಿ ಖಂಡಿಸುತ್ತದೆ. ಅಲ್ಲದೆ ಅರೋಪಿಯನ್ನು ತಕ್ಷಣವೇ ಬಂಧಿಸಿ, ಆತನ ಮೇಲೆ ಫೋಕ್ಸೋ ಕಾಯ್ದೆಯನ್ನು ಜಾರಿಗೊಳಿಸಿ ಕಠಿಣ ಕ್ರಮ ಕೈಗೋಳ್ಳಬೇಕೇಂದು ಹಿಂದೂ ಜಾಗರಣ ವೇದಿಕೆ, ವಿಟ್ಲ ತಾಲೂಕು ಬಲವಾಗಿ ಆಗ್ರಹಿಸುತ್ತದೆ.
