ಬಂಟ್ವಾಳ: ಚರ್ಚ್ ಒಂದರ ಧರ್ಮ ಗುರುಗಳು ವೃದ್ದ ದಂಪತಿಗಳಿಗೆ ಹಲ್ಲೆ ನಡೆಸುವ ಘಟನೆ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ಬಗ್ಗೆ ಸ್ಪಷ್ಟವಾದ ಮಾಹಿತಿ ಇನ್ನು ಲಭ್ಯವಾಗಿಲ್ಲ. ಜೊತೆಗೆ ಈ ಬಗ್ಗೆ ಪೋಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಯಾವ ವಿಚಾರದಲ್ಲಿ ಗಲಾಟೆ ನಡೆದಿದೆ ಎಂಬುದು ಇನ್ನು ತಿಳಿಯಬೇಕಾಗಿದೆ.

*ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಚಾರ ಇಲ್ಲದೆ….*
ಈ ಘಟನೆ ನಿನ್ನೆ (ಫೆಬ್ರವರಿ 29, 2024 ರಂದು), ಮನೇಲ ಪೆರಿಯಾಲ್ತಡ್ಕದ ಕ್ರೈಸ್ಟ್ ಕಿಂಗ್ ಪ್ಯಾರಿಷ್‌ನಲ್ಲಿ ನಡೆದಿದೆ. ಪಾದ್ರಿ *ನೆಲ್ಸನ್ ಒಲಿವೆರಾ* ಮನೆ ಆಶೀರ್ವಾದಕ್ಕಾಗಿ ಬಂದಾಗ. ಈ ಅರ್ಚಕನ ವರ್ತನೆ ಅಸಭ್ಯವಾಗಿತ್ತು, ಮರ್ಯಾದೆ ಇಲ್ಲದೆ ವೃದ್ಧ ದಂಪತಿಯೊಂದಿಗೆ ಕಟುವಾದ ಮಾತುಗಳನ್ನಾಡಿದ್ದಾರೆ. ಅಷ್ಟೇ ಅಲ್ಲ ಪಾದ್ರಿಯು ವ್ಯಕ್ತಿಯನ್ನು ಗೋಡೆಗೆ ತಳ್ಳಿ ಕೊಲ್ಲಲು ಯತ್ನಿಸಿದ ಅಸಹಾಯಕ ಪತ್ನಿ ತನ್ನ ಪತಿಯನ್ನು ಉಳಿಸಲು ಪ್ರಯತ್ನಿಸಿದಳು ಆದರೆ ಆಕೆಯನ್ನು ಪಾದ್ರಿಯಿಂದ ಒದೆಯುವುದು ನೀವು ಈ ವೀಡಿಯೊದಲ್ಲಿ ನೋಡಬಹುದು….ಈ ರೀತಿಯ ಬರಹದ ಜೊತೆ ವಿಡಿಯೋ ಇದೀಗ ವೈರಲ್ ಆಗಿದೆ.