Thursday, June 26, 2025

ಸೋಲುಗೆಲುವುಗಳೆರೆಡನ್ನೂ ಜೀವನದಲ್ಲಿ ಸಮಾನ ಸವಾಲಾಗಿ ಸ್ವೀಕರಿಸಿ: ಕೃಷ್ಣ ಭಟ್

ವಿಟ್ಲ: ಸೋಲುಗೆಲುವುಗಳೆರೆಡನ್ನೂ ಜೀವನದಲ್ಲಿ ಸಮಾನ ಸವಾಲಾಗಿ ಸ್ವೀಕರಿಸಿದಾಗ ಮಾತ್ರ ಯಶಸ್ಸಿನೊಂದಿ ಗುರಿ ಈಡೇರಿಸಲು ಸಾಧ್ಯ ಎಂದು ಸಂಸ್ಕೃತ ಶಿಕ್ಷಕ ಕೃಷ್ಣ ಭಟ್ ಹೇಳಿದರು.
ಅವರು ವಿಟ್ಲ ಜೆಸಿಐ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ನಡೆದ ವಿಟ್ಲ-ಕಂಬಳಬೆಟ್ಟು ಕ್ಲಸ್ಟರ್‌ಗಳ ಪ್ರಾಥಮಿಕ ಶಾಲಾ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಮಯಂತಿ ಮಾತನಾಡಿ ಪ್ರತಿಭಾ ಕಾರಂಜಿ ವಿದ್ಯಾರ್ಥಿಗಳ ನೈಜ ಪ್ರತಿಭೆಗಳನ್ನು ಹೊರ ತರುವ ವೇದಿಕೆಯಾಗಿದೆ. ಪ್ರತಿಭೆಗಳ ಶೋಧನೆ ಪಾರದರ್ಶಕವಾಗಿ ನಡೆಯಬೇಕು ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಶ್ರೀಧರ ಕೊಡಕ್ಕಲ್ ವಹಿಸಿದ್ದರು.
ಸಮಾರಂಭದಲ್ಲಿ ಶಾಲಾ ಆಡಳಿತಾಧಿಕಾರಿ ರಾಧಾಕೃಷ್ಣ ಎ., ನಿವೃತ್ತ ಆಡಳಿತಾಧಿಕಾರಿ ಮೋನಪ್ಪ ಶೆಟ್ಟಿ ದೇವಸ್ಯ, ಸಂಸ್ಥೆಯ ವೈಸ್ ಪ್ರಿನ್ಸಿಪಾಲ್ ಶಾಲಿನಿ ನೋಂಡ ಭಾಗವಹಿಸಿದ್ದರು.
ಶಿಕ್ಷಣ ಸಂಸ್ಥೆಯ ಪ್ರಿನ್ಸಿಪಾಲ್ ಜಯರಾಮ ರೈ ಸ್ವಾಗತಿಸಿದರು. ವಿಟ್ಲ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ರವಿಪ್ರಕಾಶ್ ಪ್ರಸ್ತಾವಿಸಿದರು. ಕಂಬಳಬೆಟ್ಟು ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಕೆ.ಕೆ. ಸಾರ್ ವಂದಿಸಿದರು. ಸಹ ಶಿಕ್ಷಕಿ ಸವಿತಾ ಕಾರ್ಯಕ್ರಮ ನಿರೂಪಿಸಿದರು.

More from the blog

School Holiday : ಭಾರೀ ಮಳೆ ಮುನ್ಸೂಚನೆ : ನಾಳೆ ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ರಜೆ..

ಬೆಳ್ತಂಗಡಿ: ತಾಲೂಕಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯ ಹಿನ್ನಲೆ ಬೆಳ್ತಂಗಡಿ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಖಾಸಗಿ ವಿದ್ಯಾಸಂಸ್ಥೆಗಳಿಗೆ ಜೂನ್ 26ರಂದು ರಜೆ ಘೋಷಣೆ ಮಾಡಲಾಗಿದೆ. ಮುಂಜಾಗೃತ ಕ್ರಮವಾಗಿ ತಹಶೀಲ್ದಾರ್ ರವರ ತಾಲೂಕು ವಿಪತ್ತು...

Bantwal Police :ಜೂನ್ 26 ರಂದು ” ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ ” ಅಭಿಯಾನ 2025 ಕಾರ್ಯಕ್ರಮ

ಬಂಟ್ವಾಳ: ದ.ಕ.ಜಿಲ್ಲಾ ಪೋಲೀಸ್ ಇಲಾಖೆ ಹಾಗೂ ಬಂಟ್ವಾಳ ವೃತ್ತದ ಪೋಲೀಸ್ ಇಲಾಖೆಯ ವತಿಯಿಂದ ಬಿಸಿರೋಡಿನಲ್ಲಿ ಜೂನ್ 26 ರಂದು " ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ " ಅಭಿಯಾನ 2025 ಕಾರ್ಯಕ್ರಮ ನಡೆಯಲಿದೆ...

Kalladka : ಕಲ್ಲಡ್ಕ ಪ್ಲೈ ಓವರ್ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತ..

ಬಂಟ್ವಾಳ : ಬಂಟ್ವಾಳ ತಾಲೂಕಿನ ಕಲ್ಲಡ್ಕದ ಪ್ಲೈ ಓವರ್ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಿಸಿರೋಡು - ಅಡ್ಡಹೊಳೆ ಅತೀ ಉದ್ದದ ಪ್ಲೈ ಓವರ್ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾಗಿದೆ. ಕಳೆದ 25 ದಿನಗಳ ಹಿಂದೆ...

ಇಡ್ಕಿದು ಗ್ರಾ. ಪಂ ಸಭಾಂಗಣದಲ್ಲಿ ರಾಜಕೀಯ ಸಭೆ ನಡೆಸಲು ಅನುಮತಿ ವಿಚಾರ : ಪಿಡಿಒ ಅಮಾನತು

ವಿಟ್ಲ: ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ರಾಜಕೀಯ ಸಭೆ ನಡೆಸಲು ಅವಕಾಶ ನೀಡಿದ‌ ಆರೋಪದ ಹಿನ್ನೆಲೆ ಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲ್ ದಾಸ್ ಭಕ್ತ ರವರನ್ನು ಅಮಾನತು...