Tuesday, July 8, 2025

ಉಡುಪಿ – ಕಾಸರಗೋಡು ೪೦೦ಕೆ. ವಿ. ವಿದ್ಯುತ್ ಮಾರ್ಗ ರಚನೆಗೆ ನಿರಪೇಕ್ಷಣ ಪತ್ರವನ್ನು ಪಂಚಾಯಿತಿಗಳು ನೀಡಬಾರದು: ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹಾಗೂ ವಿಟ್ಲ ರೈತ ಹೋರಾಟ ಸಮಿತಿ ಮನವಿ

ವಿಟ್ಲ: ಉಡುಪಿ – ಕಾಸರಗೋಡು ೪೦೦ಕೆ. ವಿ. ವಿದ್ಯುತ್ ಮಾರ್ಗ ರಚನೆಗೆ ನಿರಪೇಕ್ಷಣ ಪತ್ರವನ್ನು ಪಂಚಾಯಿತಿಗಳು ನೀಡಬಾರದೆಂಬ ಬೇಡಿಕೆಯನ್ನು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹಾಗೂ ವಿಟ್ಲ ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಸ್ಥಳೀಯ ಪಂಚಾಯಿತಿಗಳಿಗೆ ಸಲ್ಲಿಸಲಾಯಿತು.

ರೈತ ಸಂಘದ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಮಾತನಾಡಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿದ್ಯುತ್ ಮಾರ್ಗ ಹಾದು ಹೋಗುವ ಎಲ್ಲಾ ಗ್ರಾಮಗಳಿಗೆ ಬೇಟಿ ನೀಡಿ ಯಾವುದೇ ಕಾರಣಕ್ಕೂ ಕಂಪನಿಗೆ ವಿದ್ಯುತ್ ಮಾರ್ಗ ರಚನೆಗೆ ನಿರಪೇಕ್ಷಣಾ ಪತ್ರ ನೀಡಬಾರದೆಂಬ ರೈತರ ಬೇಡಿಕೆಯನ್ನು ಸಲ್ಲಿಸಲಾಗುವುದು. ಇದನ್ನು ನಿರ್ಲಕ್ಷಿಸಿ ಪಂಚಾಯಿತಿಗಳು ಒಪ್ಪಿಗೆ ನೀಡಿದಲ್ಲಿ ಪಂಚಾಯಿತುಗಳ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಿಟ್ಲ ಪಟ್ಟಣ ಪಂಚಾಯಿತಿ, ವೀರಕಂಬ, ಅನಂತಾಡಿ, ವಿಟ್ಲಮುಡ್ನೂರು, ಕೇಪು, ಪುಣಚ, ಅಳಿಕೆ ಗ್ರಾಮ ಪಂಚಾಯಿತಿಗಳಿಗೆ ರೈತ ಸಂಘದ ನಿಯೋಗ ಬೇಟಿ ನೀಡಿ ಮನವಿ ಸಲ್ಲಿಸುವ ಕಾರ್ಯ ಮಾಡಲಾಯಿತು.

ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರಶೆಟ್ಟಿ ಬೈಲುಗುತ್ತು, ಪುಣಚ ವಲಯ ಅಧ್ಯಕ್ಷ ಇಸುಬು ಪುಣಚ, ರೈತ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ, ಕಾರ್ಯದರ್ಶಿಗಳಾದ ಲಕ್ಷ್ಮೀನಾರಾಯಣ ಎಂ., ರೋಹಿತಾಶ್ವ ಭಂಗ ವೀರಕಂಬ, ಕೃಷ್ಣ ಪ್ರಸಾದ್ ವಿ., ಸಂತ್ರಸ್ತ ರೈತರಾದ ಚೋಮಣ್ಣ ಮಂಜನಾಡಿ, ಅಣ್ಣು ಗೌಡ, ಭಾಸ್ಕರ ಗೌಡ, ಸಂಜೀವ ಎಂ., ವಿಶುಕುಮಾರ್ ಎಂ., ಡೊಂಬ್ಬಯ್ಯ ಗೌಡ, ಆನಂದ ಗೌಡ, ಸ್ಟಾನಿ ಮಸ್ಕರೇನಿಯಸ್, ರಮಾನಂದ ಶೆಟ್ಟಿ, ಸುಭಾಷ್ ರೈ, ಶಿವರಾಮ ಮತ್ತಿತರರು ಹಾಜರಿದ್ದರು.

More from the blog

ನಾಯಕತ್ವ ಬೆಳವಣಿಗೆಗೆ ಶ್ರಮದೊಂದಿಗೆ ನಿಷ್ಠೆ, ತಾಳ್ಮೆ ರೂಡಿಸಿಕೊಂಡಾಗ ಯಶಸ್ಸು ಸಾಧ್ಯ : ರೋ. ರಾಘವೇಂದ್ರ ಭಟ್

ಬಂಟ್ವಾಳ : ನಾಯಕತ್ವದ ಬೆಳವಣಿಗೆಗೆ ಶ್ರಮದೊಂದಿಗೆ ನಿಷ್ಠೆ ಮತ್ತು ತಾಳ್ಮೆ ರೂಡಿಸಿಕೊಳ್ಳಬೇಕು ಈ ನಿಟ್ಟಿನಲ್ಲಿ ಅವಕಾಶ ಗಳನ್ನು ಹುಡುಕಿಕೊಂಡು, ದೇಶದ ಇತಿಹಾಸದಲ್ಲಿ ಕಾಣುವ ವಿವಿಧ ಕ್ಷೆತ್ರದಲ್ಲಿ ಗಣನೀಯ ಸೇವೆ ಗೈದರವರ ಆದರ್ಶ ಗಳನ್ನು...

ಜು.10ರಂದು ಹಿಂದೂ ಜನಜಾಗೃತಿ ಸಮಿತಿಯಿಂದ ಗುರುಪೂರ್ಣಿಮಾ ಮಹೋತ್ಸವ ಆಯೋಜನೆ

ಬಿ.ಸಿ. ರೋಡ್ : ಸಮಸ್ತ ಜಗತ್ತು ಯುದ್ಧದತ್ತ ಸಾಗುತ್ತಿದೆ. ಭಾರತದಲ್ಲಿಯೂ ಜಿಹಾದಿ ಭಯೋತ್ಪಾದಕರು ಹಿಂದೂಗಳನ್ನು ಹತ್ಯೆ ಮಾಡಿ, ಭಾರತವನ್ನು ಯುದ್ಧಕ್ಕೆ ಪ್ರೇರೇಪಿಸುತ್ತಿದ್ದಾರೆ. ಶ್ರೀರಾಮ, ಶ್ರೀಕೃಷ್ಣನಂತಹ ಅವತಾರಗಳಿಂದ ಹಿಡಿದು ಛತ್ರಪತಿ ಶಿವಾಜಿ ಮಹಾರಾಜ, ಮಹಾರಾಣಾ...

ಶ್ರೀ ಕ್ಷೇತ್ರ ಪೊಳಲಿಯಲ್ಲಿ ಲಕ್ಷ ಕುಂಕುಮಾರ್ಚನೆ..

ಪೊಳಲಿ: ಶ್ರೀ ಮೃತ್ಯುಂಜಯೇಶ್ವರ ಶಿವ ಕ್ಷೇತ್ರಗಂಜಿಮಠ ಪುನರುತ್ಥಾನ ಶ್ರೀ ಮೃತ್ಯುಂಜಯೇಶ್ವರ ಶಿವ ಕ್ಷೇತ್ರ ಪುನರ್ ನಿರ್ಮಾಣದ ಅಷ್ಟಮಂಗಳ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದAತೆ ಜು.೮ರಂದು ಮಂಗಳವಾರ ಶ್ರೀ ಕ್ಷೇತ್ರ ಪೊಳಲಿ ಸಾವಿರ ಸೀಮೆಯ...

Protest : ಎಸ್.ಡಿ.ಪಿ‌.ಐ. ಪಕ್ಷದ ವತಿಯಿಂದ ಕೈಕಂಬದ ಬಳಿ ಬೃಹತ್ ಪ್ರತಿಭಟನೆ..

ಬಂಟ್ವಾಳ: ಅಬ್ದುಲ್ ರಹಿಮಾನ್ ಮತ್ತು ಅಶ್ರಫ್ ವಯನಾಡು ಕೊಲೆ ಕೃತ್ಯದ ಪ್ರಮುಖ ಆರೋಪಿಗಳ ಬಂಧನದ ವಿಳಂಬ ಮತ್ತು ಪರಿಹಾರ ಘೋಷಿಸಿದ ಸರಕಾರದ ನಡೆಯನ್ನು ಖಂಡಿಸಿ, ನ್ಯಾಯ ಮರೀಚಿಕೆ...ಹುಸಿಯಾದ ಭರವಸೆ ಎಂಬ ಘೋಷ ವಾಕ್ಯದಲ್ಲಿ...