ಬಂಟ್ವಾಳ: ಕರ್ತವ್ಯದಲ್ಲಿದ್ದ ಎಸ್.ಐ.ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಲು ಯತ್ನಿಸಿದ ದುಷ್ಕರ್ಮಿ ಪೋಲೀಸರ ಅತಿಥಿಯಾದ ಘಟನೆ ವಿಟ್ಲ ಕೊಡಂಗೆ ಚೆಕ್ ಪೋಸ್ಟ್ ನಲ್ಲಿ ಇಂದು ಮುಂಜಾನೆ ವೇಳೆ ನಡೆದಿದೆ.
ವಿಟ್ಲ ಎಸ್ ಐ ವಿನೋದ್ ರೆಡ್ಡಿ ಮೇಲೆ ದುಷ್ಕರ್ಮಿಯಿಂದ ಗುಂಡಿನ ದಾಳಿ ನಡೆೆದ.


ಘಟನೆಯಲ್ಲಿ ಎಸ್.ಐ.ವಿನೋದ್ ರೆಡ್ಡಿ ಗೆ ಗಾಯಗಳಾಗಿವೆ
ವಿಟ್ಲ ಸಮೀಪದ ಕೊಡಂಗೆ ಚೆಕ್ ಪೋಸ್ಟ್ ನಲ್ಲಿ ವಿಟ್ಲ ಎಸ್.ಐ.ವಿನೋದ್ ರೆಡ್ಡಿ ಮತ್ತು ಸಿಬ್ಬಂದಿಗಳು ವಾಹನ ಗಳ ತಪಾಸಣೆ ನಡೆಸುತ್ತಿದ್ದ ವೇಳೆ ಬಿಳಿ ಬಣ್ಣದ ಕಾರಿನಲ್ಲಿದ್ದ ದುಷ್ಕರ್ಮಿಯೊರ್ವ ಎಸ್.ಐ.ವಿನೋದ್ ರೆಡ್ಡಿ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿ ದ್ದಾನೆ.
ಕೂಡಲೇ ಕಾರ್ಯಚರಣೆ ನಡೆಸಿ ದ ಸಿಬ್ಬಂದಿ ಗಳು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.
ಯಾವ ಕಾರಣಕ್ಕೆ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದಾನೆ ಎಂಬ ವಿಚಾರ ಇನ್ನಷ್ಟೆ ಬೆಳಕಿಗೆ ಬರಬೇಕಾಗಿದೆ.












