ಬಂಟ್ವಾಳ; ಮಾಣಿ ಬಾಲಕಿಯೋರ್ವಳ ಲೈಂಗಿಕ ದೌರ್ಜನ್ಯ ಪ್ರಕರಣ ವೊಂದಕ್ಕೆ ಸಂಭವಿಸಿದಂತೆ ಆರೋಪಿ ಯನ್ನು ವಿಟ್ಲ ಠಾಣಾ ಎಸ್ ಐ ಯಲ್ಲಪ್ಪ ಇಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮಾಣಿ ನಿವಾಸಿ ಅಬ್ದುಲ್ ಸಲಾಂ ಯಾನೆ ಸಲಾಂ ( 38) ಬಂಧಿತ ಆರೋಪಿ.
ಕಳೆದ ವಾರ ಮಾಣಿಯ ಬಾಲಕಿಯೋರ್ವಳು ಮೊಬೈಲ್ ಅಂಗಡಿಗೆ ಮೊಬೈಲ್ ಕರೆನ್ಸಿ ಹಾಕಲು ಬಂದ ವೇಳೆ ಬಾಲಕಿಯ ಲೈಂಗಿಕ ದೌರ್ಜನ್ಯ ಮಾಡಿದ್ದಾನೆ ಎಂದು ಆರೋಪಿಸಿ ವಿಟ್ಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅ ಬಳಿಕ ಅನೇಕ ಊಹಾಪೋಹಗಳು ಕೂಡ ಬಂದಿತ್ತು.
ಪ್ರಕರಣವನ್ನು ಕೈಗೆತ್ತಿಕೊಂಡ ವಿಟ್ಲ ಠಾಣಾ ಎಸ್.ಐ.ಯಲ್ಲಪ್ಪ ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು.
ತಲೆ ಮರೆಸಿಕೊಂಡು ಪೋಲೀಸರಿಗೆ ತಲೆನೋವಾಗಿದ್ದ ಆರೋಪಿ ಯನ್ನು ಇಂದು ಮದ್ಯಾಹ್ನ ಗಡಿಯಾರ ಜಂಕ್ಸ್ ನ್ ಬಳಿಯಲ್ಲಿ ವಶಕ್ಕೆ ತೆಗೆದುಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಆರೋಪಿಗೆ ಹತ್ತು ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕಾರ್ಯಚರಣೆ ಯಲ್ಲಿ ಸಿಬ್ಬಂದಿ ಗಳಾದ ಜಯಕುಮಾರ್, ಬಾಲಕೃಷ್ಣ, ಲೋಕೇಶ್, ರಕ್ಷಿತ್ ಭಾಗವಹಿಸಿದ್ದರು.