Wednesday, February 12, 2025

ವಿಟ್ಲದಲ್ಲಿ ವಿದ್ಯಾರ್ಥಿಗಳ ಆದರ್ಶ ಹೆಜ್ಜೆ

ವಿಟ್ಲ ಸೈಂಟ್ ರೀಟಾ ವಿದ್ಯಾಸಂಸ್ಥೆಯ ಐದನೇ ತರಗತಿಯ ವಿದ್ಯಾರ್ಥಿ ಇಬ್ರಾಹಿಂ ರಿಷಾನ್ ನಿಗೆ ವಿಟ್ಲ ಶಾಲಾ ರಸ್ತೆಯಲ್ಲಿ ಮೂರುಸಾವಿರ ರೂಪಾಯಿ ಬಿದ್ದು ಸಿಕ್ಕಿತು. ಆತ ಮೊಬಲಗನ್ನು ಸೋದರ ರಿಯಾನ್ ಮತ್ತು ಗೆಳೆಯ ಸುಜಾನ್ ಗೆ ತೋರಿಸಿದನು. ಅವರೆಲ್ಲರೂ ಒಟ್ಟಾಗಿ ಪಕ್ಕದ ಆರಾಧನಾ ಮುದ್ರಣಾಲಯದ ಮಾಲಕ ವಿಜಯರಿಗೆ ಸಿಕ್ಕಿದ ಮೊಬಲಗನ್ನು ನೀಡುತ್ತಾ “ರಸ್ತೆಯಲ್ಲಿ ಬಿದ್ದು ಸಿಕ್ಕಿತು, ಯಾರದ್ದೆಂದು ತಿಳಿಯದು” ಎಂದು ಪ್ರಾಮಾಣಿಕವಾಗಿ ಹೇಳಿದರು. ವಿಜಯರು ಪಕ್ಕದಲ್ಲಿರುವ ಸರಸ್ವತಿ ಸಹಕಾರಿ ಬ್ಯಾಂಕ್ ಶಾಖೆಯ ಸಿ.ಸಿ.ಟಿ.ವಿಯ ಫೂಟೇಜ್ ಮೂಲಕ ನೋಡಿದಾಗ ಮುತ್ತುರಾಜ್ ಎಂಬವರ ಜೇಬಿನಿಂದ ಹಣ ಬೀಳುತ್ತಿರುವುದನ್ನು ಗಮನಿಸಿದರು. ಮುತ್ತುರಾಜರನ್ನು ಕರೆಸಿ ಹಣ ಹಸ್ತಾಂತರಿಸಿದರು.

ಈ ಘಟನೆಯು ಬಂಟ್ವಾಳ ತಾಲೂಕು ಮಕ್ಕಳ ಕಲಾಲೋಕದ ಗಮನಕ್ಕೆ ಬರಲಾಗಿ ತಕ್ಷಣ ಕಾರ್ಯ ಪ್ರವೃತ್ತರಾದರು. ಹಣ ಹಿಂತಿರುಗಿಸಲು ಕಾರಣರಾದ ವಿದ್ಯಾರ್ಥಿಗಳನ್ನು ಮತ್ತು ಶಾಲೆಯನ್ನು ಗುರುತಿಸಿ ಪ್ರಾಂಶುಪಾಲ ಫಾದರ್ ಸುನಿಲ್ ಪ್ರವೀಣ್ ಪಿಂಟೋ ಇವರನ್ನು ಸಂರ್ಕಿಸಿದರು. ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿಗಳು ಮತ್ತು ಉತ್ತಮವಾಗಿ ಸ್ಪಂದಿಸಿದ ವಿಜಯ್ ಇವರಿಗೆ ಶಾಲಾ ಎಸ್ಸೆಂಬ್ಲಿಯಲ್ಲಿ ಮುತ್ತುರಾಜ್ ಇವರ ಸಹಕಾರದೊಂದಿಗೆ ಪುಸ್ತಕ ಸ್ಮರಣಿಕೆ ಮತ್ತು ಸಿಹಿ ತಿಂಡಿ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳ ಒಳ್ಳೆಯತನ ಮತ್ತು ಪ್ರಾಮಾಣಿಕತೆಯನ್ನು ಪ್ರಾಂಶುಪಾಲರು ಮನ ತುಂಬಿ ಹರಸಿದರು.

ಸ್ವಸ್ಥ ಸಮಾಜಕ್ಕಾಗಿ, “ಸಾಮಾಜಿಕ ಸ್ವಚ್ಛತಾ ಆಂದೋಲನ”ವನ್ನು ಅಲ್ಲಲ್ಲಿ ಸಂಘಟಿಸುತ್ತಿರುವ ಬಂಟ್ವಾಳ ತಾಲೂಕು ಮಕ್ಕಳ ಕಲಾಲೋಕವು ಜನರಲ್ಲಿರುವ ಜೀವನ ಮೌಲ್ಯಗಳು ಸಮಾಜಕ್ಕೆ ಆದರ್ಶವಾದುವುಗಳು. ಮೇಲ್ಪಂಕ್ತಿಯ ಸಂದೇಶ ನೀಡಿದ ಸದ್ಗುಣಗಳಿರುವ ಮಕ್ಕಳನ್ನು ಪಡೆದ ತಂದೆ ತಾಯಿಯರು ಧನ್ಯರೆಂದು ಮೆಚ್ಚುಗೆ ಪ್ರಕಟಪಡಿಸಿರುವರು.

-ರಮೇಶ ಎಂ. ಬಾಯಾರು

ಅಧ್ಯಕ್ಷರು, ಮಕ್ಕಳ ಕಲಾ ಲೋಕ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ದ.ಕ

More from the blog

ವಿಟ್ಲ ಪಿಎಂ ಶ್ರೀ ಸರಕಾರಿ ಪ್ರೌಢ ಶಾಲೆಯಲ್ಲಿ ಮೆಟ್ರಿಕ್ ಮೇಳ

ವಿಟ್ಲ: ವಿಟ್ಲ ಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ (ಆರ್ ಎಂ ಎಸ್ ಎಂ)ವಿಟ್ಲ ಇದರ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬುಧವಾರ ಮೆಟ್ರಿಕ್ ಮೇಳ ಕಾರ್ಯಕ್ರಮ ನಡೆಯಿತು. ಮೆಟ್ರಿಕ್ ಮೇಳವನ್ನು ವಿಟ್ಲ ಪಟ್ಟಣ...

ನೇಣು ಬಿಗಿದು ಯುವಕ ಆತ್ಮಹತ್ಯೆ

ಬಂಟ್ವಾಳ: ಖಿನ್ನತೆಯಿಂದ ಅವಿವಾಹಿತ ವ್ಯಕ್ತಿಯೊರ್ವನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಮ್ಟಾಡಿ ನಿವಾಸಿ ಮೆಕ್ಸಿನ್ ತಾವ್ರೋ ಅವರ ಮಗ ಜೀವನ್  ತಾವ್ರೋ ( 37) ಆತ್ಮಹತ್ಯೆ ಮಾಡಿಕೊಂಡ ಯುವಕ. ‌‌‌ಜೀವನ್ ಅವರು ಅಗಾಗ...

ಅಕ್ರಮ ಮಸೀದಿ ನಿರ್ಮಾಣ ಆರೋಪ: ಕರಿಯಂಗಳ ಗ್ರಾ.ಪಂ.ಗೆ ಮುತ್ತಿಗೆ

ಬಂಟ್ವಾಳ: ಗ್ರಾಮ ಪಂಚಾಯತ್ ಅನುಮತಿ ಇಲ್ಲದೆ ಅಕ್ರಮವಾಗಿ ಸರಕಾರಿ ಜಾಗದಲ್ಲಿ ಕಟ್ಟಡ ನಿರ್ಮಿಸಿ ಅದರಲ್ಲಿ ಮದರಸ ಮಾಡಲು ಮುಂದಾಗಿದ್ದರೆ ಎಂದು ಆರೋಪಿಸಿದ ಗ್ರಾಮಸ್ಥರು ಇದನ್ನು ತಡೆಯುವಂತೆ ಗ್ರಾಮ ಪಂಚಾಯತ್ ಗೆ ಮುತ್ತಿಗೆ ಹಾಕಿದ...

ಪುರಸಭೆ ಎಡವಿದೆಲ್ಲಿ? ಬ್ಯಾನರ್ ವಿವಾದ!

ಬಂಟ್ವಾಳ: ಬಂಟ್ವಾಳ ಪುರಸಭೆ ನಿಯಮ ಉಲ್ಲಂಘಿಸಿ ಹಾಕಲಾದ ಫ್ಲೆಕ್ಸ್ ತೆರವು ಕಾರ್ಯಾಚರಣೆಯನ್ನು ತಡವಾಗಿ ಪ್ರಾರಂಭಿಸಿದೆ. ಜನವರಿ 29ರಂದು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ಪುರಸಭೆಯ ಮುಖ್ಯಾಧಿಕಾರಿ ತೆರವು ಕಾರ್ಯಾಚರಣೆ ನಡೆಸುವುದಾಗಿ ಘೋಷಿಸಿ,...