ವಿಟ್ಲ: ಎಸ್ಸೆಸ್ಸೆಫ್ ವಿಟ್ಲ ಡಿವಿಷನ್ ಸಮಿತಿಯ ವಾರ್ಷಿಕ ಮಹಾಸಭೆಯು ಡಿವಿಷನ್ ಅಧ್ಯಕ್ಷರಾಗಿದ್ದ ಅಬ್ದುರ್ರಹ್ಮಾನ್ ಶರಫಿ ಮೂಡಂಬೈಲುರವರ ಅಧ್ಯಕ್ಷತೆಯಲ್ಲಿ ದಾರುನ್ನಜಾತ್ ಏಜ್ಯುಕೇಶನಲ್ ಸೆಂಟರ್ ಟಿಪ್ಪುನಗರದಲ್ಲಿ ನಡೆಯಿತು.
ಸಭೆಯನ್ನು ದಾರುನ್ನಜಾತ್ ಸಂಸ್ಥೆಯ ಮ್ಯಾನೇಜರ್ ಹಾಜಿ ಹಮೀದ್ ಕೊಡಂಗಾಯಿ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಹಿಮಮಿ ವಾರ್ಷಿಕ ವರದಿ ಮಂಡಿಸಿದರು, ಕೋಶಾಧಿಕಾರಿ ಸಿ.ಎಚ್.ಅಬ್ದುಲ್ ಕಾದರ್ ಕೊಡಂಗಾಯಿ ಲೆಕ್ಕಪತ್ರ ಮಂಡಿಸಿದರು. ನಂತರ ಝೋನ್ ಸಮಿತಿಯಿಂದ ವೀಕ್ಷಕರಾಗಿ ಆಗಮಿಸಿದ್ದ ದ.ಕ ಜಿಲ್ಲಾ ಈಸ್ಟ್ ಝೋನ್ ಸಮಿತಿಯ ಅಧ್ಯಕ್ಷರಾದ ಅಯ್ಯೂಬ್ ಮಹ್ಳರಿ ಹಾಗೂ ಹಾಫಿಳ್ ತೌಸೀಫ್ ಅಸ್’ಅದಿ ಕೆಮ್ಮಾನ್ ರವರ ನೇತೃತ್ವದಲ್ಲಿ 2020ನೇ ಸಾಲಿನ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಅಬೂಬಕ್ಕರ್ ಹಿಮಮಿ ಸಖಾಫಿ ಮೇಗಿನಪೇಟೆ ವಿಟ್ಲ, ಪ್ರಧಾನ ಕಾರ್ಯದರ್ಶಿಯಾಗಿ ಅಶ್ಫಾಕ್ ಕೊಡಂಗಾಯಿ, ಕೋಶಾಧಿಕಾರಿಯಾಗಿ ಅಬ್ದುಲ್ ಜಲೀಲ್ ಒಕ್ಕೆತ್ತೂರು, ಕ್ಯಾಂಪಸ್ ಕಾರ್ಯದರ್ಶಿಯಾಗಿ ಸೈಫುದ್ದೀನ್ ಅಳಕೆಮಜಲ್, ಉಪಾಧ್ಯಕ್ಷರುಗಳಾಗಿ ರಫೀಕ್ ಸಅದಿ ಅಳಕೆಮಜಲ್ ಹಾಗೂ ಎಂ.ಐ.ಎಂ ಅಶ್ರಫ್ ಸಖಾಫಿ ಕನ್ಯಾನ, ಕಾರ್ಯದರ್ಶಿಗಳಾಗಿ ಹಸನ್ ಸಅದಿ ಕುಕ್ಕಿಲ ಹಾಗೂ ಅಬ್ದುಲ್ ರಝಾಕ್ ಬೈರಿಕಟ್ಟೆ ಇವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಡಿವಿಷನ್ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ಅಬೂಬಕ್ಕರ್ ಸಖಾಫಿ ಮಂಗಿಲಪದವು, ರಹೀಂ ಸಖಾಫಿ ವಿಟ್ಲ, ಅಲ್-ಹಾಜ್ ರಝಾಕ್ ಸಖಾಫಿ ಕೆಲಿಂಜ ಹಾಗೂ ಕೆಸಿಎಫ್ ನಾಯಕರಾದ ಶೆರೀಫ್ ಮುಸ್ಲಿಯಾರ್ ವಿಟ್ಲ, ಎಸ್.ವೈ.ಎಸ್ ನಾಯಕರಾದ ಇಬ್ರಾಹಿಂ ಮುಸ್ಲಿಯಾರ್, ಎಸ್.ವೈ.ಎಸ್ ಟಿಪ್ಪುನಗರ ಬ್ರಾಂಚ್ ಅಧ್ಯಕ್ಷರಾದ ಇಬ್ರಾಹಿಂ ಮೊನುಚ್ಚ ಮೊದಲಾದವರು ಉಪಸ್ಥಿತರಿದ್ದರು.
ಅಬೂಬಕ್ಕರ್ ಹಿಮಮಿ ಸಖಾಫಿ ಸ್ವಾಗತಿಸಿದರು. ಅಶ್ಫಾಕ್ ಕೊಡಂಗಾಯಿ ವಂದಿಸಿದರು.














