ವಿಟ್ಲ: ವಿಟ್ಲ ಪೊಲೀಸ್ ಠಾಣೆ ವತಿಯಿಂದ ಠಾಣಾ ಸಭಾ ಭವನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟಪಂಗಡಗಳ ಕುಂದುಕೊರತೆಗಳ ಸಭೆಯು ಬಂಟ್ವಾಳ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ಸೈದುಲ್ಲಾ ಅದಾವತ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಬಂಟ್ವಾಳ ವೃತ್ತನಿರೀಕ್ಷಕ ಶರಣಪ್ಪ ಗೌಡ, ಪ್ರೊಬೆಶನರಿ ಡಿವೈಎಸ್‌ಪಿ ಗೋವಿಂದ ರಾಜು ಮತ್ತು ವಿಟ್ಲ ಠಾಣಾ ಉಪ ನಿರೀಕ್ಷಕ ಯಲ್ಲಪ್ಪ ಎಸ್. ವೇದಿಕೆಯಲ್ಲಿದ್ದರು.
ದ ಕ ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲಾಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು, ದಲಿತ್ ಸೆವಾ ಸಮಿತಿ ಬಂಟ್ವಾಳ ತಾಲೂಕು ಅಧ್ಯಕ್ಷ ಸೋಮಪ್ಪ ಸುರುಳಿಮೂಲೆ, ಪುತ್ತೂರು ತಾಲೂಕು ಅಧ್ಯಕ್ಷ ರಾಜು ಹೊಸ್ಮರ, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಪ್ರೇಮ ದಡ್ಡಲ್ತಡ್ಕ, ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ದಿವ್ಯಶ್ರೀ ಕಲ್ಲಜೇರ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಕಾರ್‍ಯದರ್ಶಿ ಚಂದ್ರಶೇಖರ್ ಯು. ಸ್ವಾಗತಿಸಿದರು, ಸುಪ್ರೀತಾ ಪಿಲಿಂಜ ವಂದಿಸಿದರು. ಪ್ರಸಾದ್ ಅನಂತಾಡಿ ಕಾರ್‍ಯಕ್ರಮ ನಿರೂಪಿಸಿದರು.
