ವಿಟ್ಲ: ಬರೆಕರೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಶಿತ ಯಕ್ಷಗಾನ ಮಂಡಳಿಯ ನಾಲ್ಕನೇ ಮೇಳದಿಂದ ಶ್ರೀದೇವೀ ಮಹಾತ್ಮೆ ಯಕ್ಷಗಾನ ಬಯಲಾಟ ಸಂದರ್ಭದಲ್ಲಿ ಡಾ. ಪಟ್ಟಾಜೆ ಗಣೇಶ ಭಟ್ ವಿರಚಿತ ಹನ್ನೆರಡು ಯಕ್ಷಗಾನ ಪ್ರಸಂಗಗಳ ’ಯಕ್ಷ ದ್ವಾದಶಾಮೃತಮ್’ ಪುಸ್ತಕ ಬಿಡುಗಡೆ ನಡೆಯಿತು.
ಪುಸ್ತಕವನ್ನು ವಿಶ್ವವಿನೋದ ಬನಾರಿ ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರೋಹಿತರಾದ ಕಲ್ಲುಕುಟ್ಟಿಮೂಲೆ ವೇ. ಮೂ.ರವಿಶಂಕರ ಭಟ್ಟ ಅವರು ವಹಿಸಿದ್ದರು. ರವಿಶಂಕರ ವಳಕ್ಕುಂಜ, ರಾಮ ಜೋಯಿಸ ಬೆಳ್ಳಾರೆ ಅವರನ್ನು ಸನ್ಮಾನಿಸಲಾಯಿತು.
ಮೇಳದ ಅರ್ಚಕ ಶ್ರೀಕಾಂತ ಭಟ್ ಶ್ರೀದೇವಿಯ ಆರಾಧನೆ ನಡೆಯಿತು. ರವಿಶಂಕರ ಭಟ್ಟ ಅವರ ನೇತೃತ್ವದಲ್ಲಿ ಬೆಳಗ್ಗೆ ಗಣಪತಿ ಹವನ, ರುದ್ರಾಭಿಶೇಕ, ಪೂಜೆ, ಸಾಯಂಕಾಲ ದುರ್ಗಾಪೂಜೆಯ ಮೂಲಕ ದೇವತೋಪಾಸನೆ ನಡೆಯಿತು.
ಸರ್ಪಂಗಳ ಈಶ್ವರ ಭಟ್, ನಾಲ್ಕನೇ ಮೇಳದ ಮ್ಯಾನೇಜರ್ ಪ್ರಕಾಶ್ ಶೆಟ್ಟಿ, ಡಾ. ಗಣೇಶ ಭಟ್, ಪದ್ಯಾಣ ಗಣಪತಿ ಭಟ್, ಸೂರ್ಯನಾರಾಯಣ, ಹರಿನಾರಾಯಣ, ಶಿವ ನಾರಾಯಣ, ರವಿನಾರಾಯಣ, ಕಿಶೋರ ಉಪಸ್ಥಿತರಿದ್ದರು. ಸತ್ಯಭಾಮೆ ಪ್ರಾರ್ಥಿಸಿದರು. ವಸಂತಕೃಷ್ಣ ಸ್ವಾಗತಿಸಿ, ಪ್ರಸ್ತಾವನೆಗೈದರು. ಕೇಶವ ಪ್ರಶಾಂತ ವಂದಿಸಿದರು. ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.

