ವಿಟ್ಲ: ವಿಟ್ಲ ಮೇಗಿನಪೇಟೆ ಯ ವಿಸ್ಡಂ ವೇವ್ ಅಕಾಡೆಮಿ ಪ್ರೀಸ್ಕೂಲ್‌ನಲ್ಲಿ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ದುಆ ಮೂಲಕ ಅಬ್ದುಲ್ ಖಾದರ್ ಮುಸ್ಲಿಯಾರ್ ವಿಧ್ಯುಕ್ತವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನ್ಯೂಬೀ ಇಸ್ಲಾಮಿಕ್ ಪ್ರೀಸ್ಕೂಲ್ ಕುರಿತು ಸಭೀಕರಿಗೆ ತಿಳಿ ಹೇಳಿದ ವ್ವಾ ಸಂಸ್ಥೆಯ ಮೆನೇಜಿಂಗ್ ಡೈರೆಕ್ಟರ್ ಅಲ್ ಹಾಜ್ ಯಾಸೀನ್ ಸಅದಿ ಅಲ್ ಅಫ್ಲಲೀ ಬೆರಳೆಣಿಕೆಯ ವರ್ಷಗಳಲ್ಲಿ ಶಿಶು ಮನಸ್ಸುಗಳಿಗೆ ಖುರ್‌ಅನಿನ ಸಿಂಚನವನ್ನು ಸಾಕ್ಷಾತ್ಕಾರ ಮಾಡಿದ ನ್ಯೂ ಬಿ ಸಂಸ್ಥೆಯು ನಡೆದು ಬಂದ ಹಾದಿಯನ್ನು ವಿವರಿಸಿದರು.
ಮನ್ಶರ್ ನೆಟ್ವರ್ಕ್ ಪ್ರೈವೇಟ್ ಲಿಮಿಟೆಡ್‌ನ ಸಾರಥಿ ಹಾಗೂ ಶಿಲ್ಪಿ ಅಸೈಯ್ಯಿದ್ ಉಮರ್ ಅಸ್ಸಖಾಫ ತಂಙಳ್ ರವರು ಪ್ರಸ್ತುತ ವರುಷದ ದಾಖಲಾತಿ ಮತ್ತು ನ್ಯೂಬೀ ಯ ಅತೀ ವಿನೂತನ ಯೋಜನೆ ಬಗ್ಗೆ ಪ್ರಸ್ತಾಪಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಮಂಗಳ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷ ಅಬೂಬಕರ್ ಅನಿಲಕಟ್ಟೆ ಅಲ್ಪ ಸಮಯದಲ್ಲಿ ಮನೆ ಮಾತಾದ ಈ ಪ್ರೀ ಸ್ಕೂಲ್ ಲೌಕಿಕ ಹಾಗೂ ಧಾರ್ಮಿಕ ಶಿಕ್ಷಣವನ್ನು ಒಂದೇ ಸೂರಿನಡಿಯಲ್ಲಿ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ವೇದಿಕೆಯಲ್ಲಿ ಇಬ್ರಾಹಿಂ ಮೇಗಿನಪೇಟೆ, ಹಸೈನಾರ್ ಕುಂಡಡ್ಕ, ಅಬ್ಧುಲ್ ಖಾದರ್ ಕಬಕ, ಹನೀಫ್ ಎಂ.ಎ,
ಹಾಜಿ ಅಬ್ದುಲ್ಲಾ ಉಡುಪಿ, ಇಸಾಕ್ ಮಂಗಿಲಪದವು(ದುಬೈ), ಮಹಮ್ಮದ್ ಇರ್ಷಾದಿಯಾ, ಇಕ್ಬಾಲ್ ಶೀತಲ್, ರಫೀಕ್ ಮುಸ್ಲಿಯಾರ್ ಕೊಳಂಬೆ, ಅಬ್ದುಲ್ ಖಾದರ್ ಸಖಾಫಿ ಒಕ್ಕೆತ್ತೂರು, ಅಬ್ದುರ್ರಶೀದ್ ಮದನಿ ಸಂಪ್ಯ, ಮುಹಮ್ಮದ್ ಫಳಿಲಿ ಅಲ್ ಖಾಮಿಲ್ ಸಖಾಫಿ ಟಿಪ್ಪುನಗರ ಉಪಸ್ಥಿತರಿದ್ದರು.
ಸಂಚಾಲಕ ಅಬ್ದುರ್ರಝಾಕ್ ಸ.ಅದಿ ಕೊಡಿಪ್ಪಾಡಿ ಸ್ವಾಗತಿಸಿದರು. ಹೈದರ್ ಅಳಕೆಮಜಲ್ ವಂದಿಸಿದರು,
ಅಬ್ದುಸಲಾಂ ಮದನಿ ಅಳಿಕೆ ಕಾರ್ಯಕ್ರಮ ನಿರೂಪಿಸಿದರು.














