ವಿಟ್ಲ: ಹೊಸ ವರ್ಷಾಚರಣೆಯ ನೆಪದಲ್ಲಿ ಅಧಿಕ ಮದ್ಯ ಮಾರಾಟವಾಗುವುದರಿಂದ ಸಾರ್ವಜನಿಕ ಶಾಂತಿ ಭಂಗವಾಗುತ್ತದೆ. ಜನಜಾಗೃತಿಗಾಗಿ ಮದ್ಯ ಮಾರಾಟ ವಿರುದ್ದ ವಿಟ್ಲ ಡಿವಿಷನ್ ಟೀಂ ಹಸನೈನ್ ವತಿಯಿಂದ ವಿದ್ಯಾರ್ಥಿ ರ್‍ಯಾಲಿ ನಡೆಯಿತು.
ಎಸ್ಸೆಸ್ಸೆಫ್ ವಿಟ್ಲ ಡಿವಿಷನ್ ಅಧ್ಯಕ್ಷ ಅಬ್ದುರ್ರಹ್ಮಾನ್ ಶರಫಿ ಮೂಡಂಬೈಲು ಅವರ ನೇತೃತ್ವದಲ್ಲಿ ವಿಟ್ಲದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಅಶ್-ಅರಿಯ್ಯಾ ಟೌನ್ ಮಸ್ಜಿದ್ ವರೆಗೆ ಸಾಗಿದ ರ್ಯಾಲಿಯು ಹಳೆ ಬಸ್ ನಿಲ್ದಾಣದ ಬಳಿ ಸಮಾರೋಪಗೊಂಡಿತು.
ಎಸ್.ಜೆ.ಯು ನಾಯಕರಾದ ಜಿ.ಎಂ ಸುನ್ನೀ ಫೈಝಿ ಪೆರುವಾಯಿ ದುಆದ ಮೂಲಕ ರ್‍ಯಾಲಿ ಚಾಲನೆ ನೀಡಿದರು.ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ಕೆ.ಎಂ ಮುಸ್ತಫಾ ಹಿಮಮಿ ನಈಮಿ ಸಂದೇಶ ಭಾಷಣ ಮಾಡಿದರು.
ಎಸ್.ಎಂ.ಎ ಪುತ್ತೂರು ವಿಭಾಗದ ಅಧ್ಯಕ್ಷ ಹಾಜಿ ಹಮೀದ್ ಕೊಡಂಗಾಯಿ ಮಾತನಾಡಿದರು, ಎಸ್ಸೆಸ್ಸೆಫ್ ದ.ಕ ಜಿಲ್ಲಾ ಕಾರ್ಯದರ್ಶಿ ಸಲೀಂ ಹಾಜಿ ಬೈರಿಕಟ್ಟೆ ಮದ್ಯಪಾನ ವಿರುದ್ದ ಪ್ರತಿಜ್ಞೆ ಬೋಧಿಸಿದರು. ರ್‍ಯಾಲಿಯುದ್ದಕ್ಕೂ ಮದ್ಯಪಾನ ವಿರೋದಿ ಆಂದೋಲನದ ಕರಪತ್ರ ವಿತರಿಸಲಾಯಿತು.
ಎಸ್.ವೈ.ಎಸ್ ವಿಟ್ಲ ಸೆಂಟರ್ ಅಧ್ಯಕ್ಷ ಅಬ್ದುಲ್ ಹಮೀದ್ ಸಖಾಫಿ ಪಾಡಿ, ಡಿವಿಷನ್ ಕೋಶಾಧಿಕಾರಿ ಸಿ.ಎಚ್ ಅಬ್ದುಲ್ ಕಾದರ್ ಕೊಡಂಗಾಯಿ, ಕ್ಯಾಂಪಸ್ ಕಾರ್‍ಯದರ್ಶಿ ಶಾಹಿರ್ ಕೊಳಂಬೆ, ಡಿವಿಷನ್ ನಾಯಕ ರಹೀಂ ಸಖಾಫಿ, ರಝಾಕ್ ಪೆಲ್ತಡ್ಕ, ಎಸ್.ವೈ.ಎಸ್ ನಾಯಕ ಎಂಕೆಎಂ ಹನೀಫ್ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು.
ಟೀಂ ಹಸನೈನ್ ಡಿವಿಷನ್ ಗೈಡ್ ಅಬೂಬಕ್ಕರ್ ಹಿಮಮಿ ಸಖಾಫಿ ಸ್ವಾಗತಿಸಿ, ಡಿವಿಷನ್ ಕಾರ್‍ಯದರ್ಶಿ ಜಂಶಾದ್ ಕಂಬಳಬೆಟ್ಟು ವಂದಿಸಿದರು.

