Thursday, January 29, 2026

ವಿಟ್ಲ ಲಯನ್ಸ್‌ನಿಂದ 400 ಸೇವಾ ಕಾರ್ಯಕ್ರಮ- ರೋನಾಲ್ಡ್ ಜೋಮ್ಸ್

ವಿಟ್ಲ: ಪ್ರೀತಿಯೊಂದಿಗೆ ಸೇವೆ ಕಾರ್ಯಕ್ರಮವನ್ನು ಜನರಿಗೆ ಉಪಯೋಗವಾಗುವ ಹಾಗೆ ಮಾಡುವಲ್ಲಿ ವಿಟ್ಲ ಲಯನ್ಸ್ ಕ್ಲಬ್ ಯಶಸ್ವಿಯಾಗಿದೆ. ಪ್ರಸಕ್ತ ಸಾಲಿನಲ್ಲಿ ೪೦೦ ಸೇವಾ ಕಾರ್ಯಕ್ರಮಗಳನ್ನು ಮಾಡುವ ಮೂಲಕ ವಿಟ್ಲ ಕ್ಲಬ್ ಲಯನ್ಸ್ ಜಿಲ್ಲೆಯಲ್ಲಿ ಮುಂಚೂಣಿ ಸ್ಥಾನವನ್ನು ಪಡೆದಿದೆ ಎಂದು ಲಯನ್ಸ್ ರಾಜ್ಯಪಾಲ ರೋನಾಲ್ಡ್ ಜೋಮ್ಸ್ ಹೇಳಿದರು.
ವಿಟ್ಲ ಪ್ರೆಸ್‌ಕ್ಲಬ್‌ನಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಪರಿಸರ ಸಂರಕ್ಷಣೆಯ ಜತೆಗೆ ನೀರಿನ ಮಿತ ಬಳಕೆ ಮಾಡುವ ಕಾರ್ಯವನ್ನು ಯಶಸ್ವಿಯಾಗಿ ಜಿಲ್ಲೆಯಲ್ಲಿ ಮಾಡಲಾಗಿದೆ. ಕೆರೆಗಳನ್ನು ಉಳಿಸುವ ಮಹತ್ವದ ಯೋಜನೆಯನ್ನು ಜಾರಿಗೆ ತರಲಾಗಿದೆ. ೪೮ ವರ್ಷದ ಇತಿಹಾಸದಲ್ಲಿ ಸಂಘದ ವಿಟ್ಲ ಕ್ಲಬ್ ಸದಸ್ಯರೊಬ್ಬರು ಗವರ್ನರ್ ಸ್ಥಾನಕ್ಕೆ ಏರುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಮಾತನಾಡಿ ಅಶಸಕ್ತರಿಗೆ ಸಹಾಯ ಧನ, ಶಾಲೆಗಳಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡುವ ಮೂಲಕ ಸುಮಾರು ೨೦ ಲಕ್ಷ ಯೋಜನೆಯನ್ನು ಸಮಾಜಕ್ಕೆ ನೀಡಲಾಗಿದೆ. ಕ್ಲಬ್‌ಗೆ ಸ್ವಂತ ನಿವೇಶನ ಖರೀದಿ ಮಾಡುವ ಮೂಲಕ ಮುಂದಿನ ದಿನದಲ್ಲಿ ದೊಡ್ಡ ಯೋಜನೆ ಅನುಷ್ಠಾನ ಮಾಡಲು ಅನುವು ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಪ್ರಥಮ ಉಪರಾಜ್ಯಪಾಲ ಡಾ. ಗೀತಾಪ್ರಕಾಶ್, ವಿಟ್ಲ ಲಯನ್ಸ್ ಕ್ಲಬ್ ಕಾರ್ಯದರ್ಶಿ ಮನೋಜ್ ಕುಮಾರ್ ರೈ, ಕೋಶಾಧಿಕಾರಿ ಮೊಹಮ್ಮದ್ ಖಲಂದರ್ ಉಪಸ್ಥಿತರಿದ್ದರು.

 

More from the blog

ಬೆಂಗಳೂರಿಗಿಂತ ಮಂಗಳೂರಿನಲ್ಲಿ ವಾಯು ಗುಣಮಟ್ಟ ಕಳಪೆ – ಅಚ್ಚರಿ ವರದಿ ಬಹಿರಂಗ..!

ಮಂಗಳೂರು : ರಾಜ್ಯದ ವಿವಿಧ ನಗರಗಳಲ್ಲಿ ವಾಯು ಗುಣಮಟ್ಟ (AQI) ಆತಂಕಕಾರಿ ಮಟ್ಟಕ್ಕೆ ತಲುಪಿದ್ದು, ಈ ಪೈಕಿ ರಾಜಧಾನಿ ಬೆಂಗಳೂರಿಗಿಂತ ಮಂಗಳೂರಿನಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿರುವುದು ವರದಿಯಾಗಿದೆ. ವರದಿಗಳ ಪ್ರಕಾರ, ಕರಾವಳಿ ಕರ್ನಾಟಕದ ಜಿಲ್ಲೆಗಳಾದ...

ದೈವೀಕೃಪೆಯಿಂದ ಮಾತ್ರ ಜೀವನರಥ ಎಳೆಯಬಹುದು : ಒಡಿಯೂರುಶ್ರೀ

ವಿಟ್ಲ: ಆತ್ಮರೂಪಿ ಭಗವಂತ ದೇಹದೊಳಗಿರುವಾಗಲೇ ಬದುಕಿನ ಸಾರ್ಥಕತೆ ಪಡೆಯಬೇಕು. ಧರ್ಮದ ಬಗ್ಗೆ ಮನೆಯಿಂದಲೇ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಆಧ್ಯಾತ್ಮಿಕ ಬೆಳಕಿನಿಂದ ಮಾತ್ರ ರಾಷ್ಟ್ರ ಬೆಳಗಲು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ...

ಕೊಳ್ನಾಡು: ಕಾಲುಜಾರಿ ಬಾವಿಗೆ ಬಿದ್ದು ಕೃಷಿಕ ಸಾವು

ವಿಟ್ಲ: ದಾರಿ ಬದಿಯ ಆವರಣವಿಲ್ಲದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಕೃಷಿಕ ಕೊಳ್ನಾಡು ಗ್ರಾಮದ ಸಾಲೆತ್ತೂರು ಕೋಡಿ ನಿವಾಸಿ ಕೃಷ್ಣಪ್ಪ ಪೂಜಾರಿ(70) ಮೃತ ಪಟ್ಟಿದ್ದಾರೆ. ಮಂಗಳವಾರ ಸಂಜೆ ಎಂದಿನಂತೆ ಸಾಲೆತ್ತೂರು ಪೇಟೆಗೆ ಹೋಗಿ ಹಿಂತಿರುಗಿ ಬರುವಾಗ...

ವಿದ್ಯುತ್ ಸಮಸ್ಯೆಗೆ ಸ್ಪಂದಿಸಿದ ಗ್ರಾ.ಪಂ.ಸದಸ್ಯ ಹಾಶೀರ್ ಪೆರಿಮಾರ್ ಅವರಿಗೆ ಗ್ರಾಮಸ್ಥರಿಂದ ಅಭಿನಂದನೆ

ಬಂಟ್ವಾಳ: ವಿದ್ಯುತ್ ಸಮಸ್ಯೆಯಿಂದ ಬೇಸೆತ್ತ ಗ್ರಾಮಸ್ಥರ ಸಮಸ್ಯೆಗೆ ಸಕಾಲದಲ್ಲಿ ಸ್ಪಂದಿಸಿದ ಪುದು ಗ್ರಾಮಪಂಚಾಯತ್ ಸದಸ್ಯನಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ. ಪುದು ಗ್ರಾಮದ ಪೇರಿಮಾರ್ ವಾರ್ಡಿನ ರಾಷ್ಟ್ರೀಯ ಹೆದ್ದಾರಿ ಬದಿಯಿಂದ ದೇವಸ್ಯ, ಜಲಾಲಿಯ ನಗರ, ಮಾರಿಪಳ್ಳ...