ವಿಟ್ಲ: ವಿಟ್ಲ ಕುಲಾಲ ಸಂಘದ ಆಶ್ರಯದಲ್ಲಿ ನೂತನ ಸಭಾಭವನ, ಕುಲಾಲ ರಜತ ಭವನದ ಉದ್ಘಾಟನೆ, ಬೆಳ್ಳಿಹಬ್ಬ ಮಹೋತ್ಸವ ಹಾಗೂ ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜೆ ಸಂಘದ ನಿವೇಶನದಲ್ಲಿ ನಡೆಯಿತು.

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ಪುರುಷೋತ್ತಮ ಕುಲಾಲ್ ಕಲ್ಬಾವಿ ಅವರು ಕುಲಾಲ ರಜತ ಭವನದ ಉದ್ಘಾಟಿಸಿ, ಮಾತನಾಡಿ, ಸಂಖ್ಯೆಯ ಆಧಾರದಲ್ಲಿ ಕುಲಾಲ ಸಮುದಾಯ ಕಡಿಮೆಯಲ್ಲ. ಅನುದಾನ ಪಡೆದುಕೊಳ್ಳುವುದು ಸಮುದಾಯದ ಹಕ್ಕು. ಆ ಬಗ್ಗೆ ಜಾಗೃತರಾಗಬೇಕು ಎಂದು ಹೇಳಿದರು.
ನೇಪಾಳದ ಉಪರಾಷ್ಟ್ರಪತಿಗಳ ವಿಶೇಷ ಸಾಂಸ್ಕೃತಿಕ ಸಲಹೆಗಾರ ಡಾ.ಎಂ.ಪಿ.ವರ್ಷ ಅವರು ಮಾತನಾಡಿ, ಸಮುದಾಯದ ಬೆಳವಣಿಗೆಗಾಗಿ ಸಂಘಟನೆ ಬೇಕು. ಈ ನಿಟ್ಟಿನಲ್ಲಿ ವಿಟ್ಲ ಕುಲಾಲ ಸಂಘವು ತನ್ನು ಅನುಕೂಲಕ್ಕಾಗಿ ಕಟ್ಟಡ ನಿರ್ಮಿಸಿ, ಮಾದರಿಯಾಗಿದೆ ಎಂದರು.
ಮಡಿಕೇರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಿ.ರೇಣುಕಾಂಬಾ ಅವರು ಮಾತನಾಡಿ, ಯುವ ಪೀಳಿಗೆ ಇಂತಹ ಸಂಘಟನೆ ಬೆಳೆಸಲು ಪ್ರೋತ್ಸಾಹಿಸಬೇಕು ಎಂದರು.
ವಿಟ್ಲ ಕುಲಾಲ ಸಂಘದ ಅಧ್ಯಕ್ಷ ಬಿ. ಕೆ. ಬಾಬು ಅಧ್ಯಕ್ಷತೆ ವಹಿಸಿದ್ದರು. ವಿಟ್ಲ ಅರಮನೆಯ ಜಯರಾಮ ಬಲ್ಲಾಳ್, ಕುಲಶೇಖರ ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರೇಮಾನಂದ ಕುಲಾಲ್ ಕೋಡಿಕಲ್, ಬೆಳ್ಳಿಹಬ್ಬ ಸಮಿತಿ ಗೌರವಾಧ್ಯಕ್ಷ ಡಿ.ಚಂದಪ್ಪ ಮೂಲ್ಯ, ನ್ಯಾಯವಾದಿ ರಾಮಪ್ರಸಾದ್, ಕರ್ನಾಟಕ ಸರಕಾರದ ನಿವೃತ್ತ ಜಂಟಿ ನಿಯಂತ್ರಕ ಎ.ಎನ್.ರಾಮದಾಸ್, ಬಂಟ್ವಾಳ ತಾ. ಕುಲಾಲ ಸುಧಾರಕ ಸಂಘದ ಅಧ್ಯಕ್ಷ ರಾಧಾಕೃಷ್ಣ ಬಿ.ಸಿ., ಪುತ್ತೂರು ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷ ನವೀನ್ ಕುಲಾಲ್ ಪುತ್ತೂರು, ಮುಡಿಪು ಕುಲಾಲ ಸಮಾಜ ಅಧ್ಯಕ್ಷ ಪುಂಡರೀಕಾಕ್ಷ ಯು., ಗೌತಮ್ ಕಡೇಶಿವಾಲಯ, ಬೆಳ್ಳಿಹಬ್ಬ ಸಮಿತಿಯ ಗೌರವಾಧ್ಯಕ್ಷ ರಮಾನಾಥ ವಿಟ್ಲ, ಕುಲಾಲ ಮಹಿಳಾ ಘಟಕದ ಅಧ್ಯಕ್ಷೆ ಸುಚಿತ್ರಾ ರಮಾನಾಥ ವಿಟ್ಲ ಉಪಸ್ಥಿತರಿದ್ದರು.
ಇದೇ ಸಂದರ್ಭ ಬಿ.ಎಸ್.ಕುಲಾಲ್ ಪುತ್ತೂರು, ಕೊರಗಪ್ಪ ಬಂಗೇರ ಮಣಿಹಳ್ಳ, ಸೇಸಪ್ಪ ಮೂಲ್ಯ ಉರಿಮಜಲು, ಸರೋಜಿನಿ ಬಾಬು ಮೂಲ್ಯ ಕಟ್ಟೆ, ಪೂವಪ್ಪ ಕಡಂಬಾರ್, ರಾಮಣ್ಣ ಕುಲಾಲ್ ಪುಣಚ, ಗೋಪಾಲಕೃಷ್ಣ ನೇರಳಕಟ್ಟೆ, ಕೆ.ಸುಂದರ ಕುಲಾಲ್, ವೆಂಕಪ್ಪ ಮೂಲ್ಯ ನೆತ್ತರಕೆರೆ, ಸಿ.ಆರ್.ಅರುಣಚಂದ್ರ ಬಿ.ಸಿ.ರೋಡ್ ಅವರನ್ನು ಸಮ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು.
ರಾಧಾಕೃಷ್ಣ ಎರುಂಬು ಸ್ವಾಗತಿಸಿದರು. ವೀರಪ್ಪ ಮೂಲ್ಯ ಪುಣಚ ವಂದಿಸಿದರು. ಎಚ್.ಕೆ.ನಯನಾಡು ಕಾರ್ಯಕ್ರಮ ನಿರೂಪಿಸಿದರು.