ವಿಟ್ಲ: ವಿಟ್ಲಮೂಡ್ನೂರು ಗ್ರಾಮದ ಕುಕ್ಕುಮೂಲೆ ಎಂಬಲ್ಲಿರುವ ಗೋವಿಂದ ಭಟ್ಟರ ಮನೆಗೆ ತಾಗಿಕೊಂಡಿದ್ದ
ಅಡಕೆ ಗೋದಾಮಿಗೆ ಬುಧವಾರ ರಾತ್ರಿ ವಿದ್ಯುತ್ ಶಾರ್ಟ್‍ನಿಂದ ಬೆಂಕಿ ಬಿದ್ದು ಅಪಾರ ಪ್ರಮಾಣದ ಅಡಕೆ ಹಾಗೂ ತೆಂಗಿನಕಾಯಿಗಳು ಸುಟ್ಟು ಹೋಗಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ. ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಿಯರ ನೆರವಿನೊಂದಿಗೆ ಬೆಂಕಿ ಆರಿಸಿದರು.
ಘಟನಾ ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಕರಿಬಸಪ್ಪ ನಾಯಕ್, ಸಿಬ್ಬಂದಿ ರುಕ್ಮಯ ಮೂಲ್ಯ, ಪಿಡಿಒ ರಾಘವೇಂದ್ರ, ಪಂಚಾಯಿತಿ ಅಧ್ಯಕ್ಷೆ ಪ್ರೇಮಲತ ಪಟ್ಲ ಭೇಟಿ ನೀಡಿ ಪರಿಶೀಲನೆ ನಡೆಸಿದರು.


